KSFC Recruitment 2023: ಖಾಲಿ ಇರುವ 41 ಹುದ್ದೆಗೆ ಅರ್ಜಿ ಹಾಕಿ, ಬೆಂಗಳೂರಲ್ಲೇ ಕೈತುಂಬ ವೇತನ ಪಡೆಯಿರಿ
ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು ತನ್ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಿ ಬೆಂಗಳೂರಿನಲ್ಲೇ ಸರ್ಕಾರಿ ಉದ್ಯೋಗ ಮಾಡಬಹುದು. ಮಾರ್ಚ್ 18ರೊಳಗೆ ಆಫ್‌ಲೈನ್ ಮೂಲಕ ಅರ್ಜಿ ಹಾಕಿ.
ಬೆಂಗಳೂರು, ಫೆಬ್ರವರಿ 16: ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು ತನ್ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಿ ಬೆಂಗಳೂರಿನಲ್ಲೇ ಸರ್ಕಾರಿ ಉದ್ಯೋಗ ಮಾಡುವ ಜೊತೆಗೆ ಕೈತುಂಬ ಸಂಬಳ ಪಡೆಯಲು ಇದೊಂದು ಸುವರ್ಣ ಅವಕಾಶ ಇದಾಗಿದೆ.
ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಲ್ಲಿ ಒಟ್ಟು ಸುಮಾರು 41 ಉಪ ವ್ಯವಸ್ಥಾಪಕರ (ತಾಂತ್ರಿಕ ಮತ್ತು ಕಾನೂನು) ಹುದ್ದೆಗಳು ಖಾಲಿ ಇವೆ. ಅವುಗಳ ಭರ್ತಿ ಪ್ರಕ್ರಿಯೆ ಆರಂಭಿಸಲಾಗಿದೆ. ರಾಜ್ಯ ಸರ್ಕಾರಿ ಹುದ್ದೆ ಅಲಂಕರಿಸಲು ಕಾಯುತ್ತಿರುವವರು ಇದರ ಸದುಪಯೋಗ ಪಡೆದಕೊಳ್ಳಬೇಕು. ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಮುಂದಿನ ತಿಂಗಳ ಮಾರ್ಚ್ 18ರೊಳಗೆ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾದ ಸಂಪೂರ್ಣ ಮಾಹಿತಿ,ಶೈಕ್ಷಣಿಕ ಅರ್ಹತೆ ಏನಿರಬೇಕು, ವೇತನ, ವಯೋಮಿತಿ ಸೇರಿದಂತೆ ಅಗತ್ಯ ಮಾಹಿತಿ ಇಲ್ಲಿ ತಿಳಿಯಿರಿ.

ಖಾಲಿ ಹುದ್ದೆಗಳ ಮಾಹಿತಿ
ಸಂಸ್ಥೆ - ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ
ಹುದ್ದೆ ಹೆಸರು- ಉಪ ವ್ಯವಸ್ಥಾಪಕ
ಖಾಲಿ ಒಟ್ಟು ಹುದ್ದೆ- 41
ಉದ್ಯೋಗ ಸ್ಥಳ -ಬೆಂಗಳೂರು
ಕೊನೆಯ ದಿನಾಂಕ - 2023 ಮಾರ್ಚ್ 18
ಹುದ್ದೆ ವಿವರ ಹೀಗಿದೆ
ಉಪ ವ್ಯವಸ್ಥಾಪಕ (ಟೆಕ್ನಿಕಲ್) -11
ಉಪ ವ್ಯವಸ್ಥಾಪಕ (ಲೀಗಲ್) - 18
ಉಪ ವ್ಯವಸ್ಥಾಪಕ (ಫೈನಾನ್ಸ್ ಮತ್ತು ಅಕೌಂಟ್ಸ್)- 12
ಶೈಕ್ಷಣಿಕ ಅರ್ಹತೆ
ಉಪ ವ್ಯವಸ್ಥಾಪಕ (ಟೆಕ್ನಿಕಲ್) ಹುದ್ದೆಗೆ ಅಭ್ಯರ್ಥಿಗಳಿಗೆ ಪದವಿ ಕಡ್ಡಾಯವಾಗಿ ಪೂರ್ಣಗೊಳಿಸಿರಬೇಕು. ಇನ್ನೂ ಉಪ ವ್ಯವಸ್ಥಾಪಕ (ಲೀಗಲ್) ಹುದ್ದೆಗಳಿಗೆ ಕಾನೂನು ಪದವಿ ಮುಗಿದಿರಬೇಕು. ಜೊತೆಗೆ ಉಪ ವ್ಯವಸ್ಥಾಪಕ (ಫೈನಾನ್ಸ್ ಮತ್ತು ಅಕೌಂಟ್ಸ್) ಹುದ್ದೆ ಸೇರಬಯಸುವವರು ACA/ ICWA/ MBA/ M.Com/ CFA/ PGDMA

ವಯಸ್ಸು ಎಷ್ಟಿರಬೇಕು
ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ತಿಳಿಸಿರುವ ಪ್ರಕಾರ, ಅರ್ಜಿ ಸಲ್ಲಿಸಬಯಸುವವರಿಗೆ ಕನಿಷ್ಠ 25 ವರ್ಷ ಹಾಗೂ ಗರಿಷ್ಠ 40 ವರ್ಷ ವಯೋಮಿತಿ ದಾಟಿರಬಾರದು. ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ವಯಸ್ಸಿನಲ್ಲಿ ಮೂರು ವರ್ಷ ಸಡಿಲಿಕೆ ಇರಲಿದೆ. SC/ST ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ PWD ಅಭ್ಯರ್ಥಿಗಳು 10 ವರ್ಷ ಸಡಿಲಿಕೆ ನೀಡಲಾಗಿದೆ.
ವೇತನ- ಉದ್ಯೋಗ ಸ್ಥಳ
ರಾಜ್ಯ ಹಣಕಾಸು ಸಂಸ್ಥೆ ಹೊರಡಿಸಿರುವ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳಿಗೆ ಮಾಸಿಕ ರೂ.52,650-97,100 ವೇತನ ನೀಡಲಾಗುವುದು ಎಂದು ಹೇಳಿದೆ. ಇನ್ನೂ ಉದ್ಯೋಗ ಸ್ಥಳ ನೋಡುವುದಾದರೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.
ಅರ್ಜಿ ಸಲ್ಲಿಕೆ ವಿಧಾನ
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಮಾರ್ಚ್ 18, 2023ಕ್ಕೆ ಮುನ್ನ ಆಪ್‌ಲೈನ್ ಮೂಲಕ ಕಳುಹಿಸಬೇಕು.
ಅರ್ಜಿಯನ್ನು ವ್ಯವಸ್ಥಾಪಕ ನಿರ್ದೇಶಕರು, ಕೆಎಸ್‌ಎಫ್‌ಸಿ ಕೇಂದ್ರ ಕಚೇರಿ, ಕೆಎಸ್‌ಎಫ್‌ಸಿ ಭವನ, ನಂ.1/1
ತಿಮ್ಮಯ್ಯ ರಸ್ತೆ, ಬೆಂಗಳೂರು 560052 ಇಲ್ಲಿಗೆ ಕಳುಹಿಸಿ.












Click it and Unblock the Notifications