ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಕೆಎಸ್‌ಇಸಿಎಸ್

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 14 : ಸ್ಪಷ್ಟೀಕರಣ : ಕರ್ನಾಟಕ ರಾಜ್ಯ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಸ್ಥೆ ಹೆಸರಿನಲ್ಲಿ ನಕಲಿ ವೆಬ್‌ಸೈಟ್‌ ಆರಂಭಿಸಿ, ಸುಳ್ಳು ಉದ್ಯೋಗ ಅಧಿಸೂಚನೆ ಹೊರಡಿಸಿದ್ದ ಆರೋಪಿಯನ್ನು ಸಿಐಡಿ ಪೊಲೀಸರು 2016ರ ಮಾ.23ರಂದು ಬಂಧಿಸಿದ್ದಾರೆ.

ಈ ಅಧಿಸೂಚನೆ ನಕಲಿಯಾಗಿದ್ದು, ಯಾರೂ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಬಾರದು ಎಂದು ಒನ್ಇಂಡಿಯಾ ಕನ್ನಡ ಮನವಿ ಮಾಡುತ್ತದೆ.

ಕರ್ನಾಟಕ ರಾಜ್ಯ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಸ್ಥೆಯು ರಾಜ್ಯದ ವಿವಿಧ ಜಿಲ್ಲೆಗಳ ಕಾರ್ಯನಿರ್ವಾಹಕ ಕಚೇರಿ, ಶೈಕ್ಷಣಿಕ ಸಂಸ್ಥೆಗಳು, ಸರ್ಕಾರ ಕಾರ್ಯನಿರ್ವಾಹಕ ಕ್ರೀಡಾಂಗಣ ಕಚೇರಿಗಳಲ್ಲಿ ಖಾಲಿ ಇರುವ ಬೋಧಕೇತರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. [162 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ KPSC]

ಪ್ರಥಮ ದರ್ಜೆ ಸಹಾಯಕರು 180, ದ್ವಿತೀಯ ದರ್ಜೆ ಸಹಾಯಕರು 220, ಸಹಾಯಕ ಲೆಕ್ಕಿಗರು 580, ಕಂಪ್ಯೂಟರ್‌ ಆಪರೇಟರ್‌ 140, ವಾಹನ ಚಾಲಕರ 60 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 4, 2016. [KPSC ನೇಮಕಾತಿ ಅಧಿಸೂಚನೆ]

jobs

ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಭರ್ತಿ ಮಾಡಿದ ಬಳಿಕ ಅಭ್ಯರ್ಥಿಗಳು ಸ್ವೀಕೃತಿ ಪತ್ರ ಮತ್ತು ದ್ವಿಪ್ರತಿ ಚಲನ್‌ ಅನ್ನು ಪಡೆದುಕೊಳ್ಳತಕ್ಕದ್ದು. ಈ ಚಲನ್ ಪ್ರತಿಯೊಂದಿಗೆ ನಿಗದಿತ ಅರ್ಜಿ ಶುಲ್ಕವನ್ನು ರಾಜ್ಯದ ಇ-ಪೇಮೆಂಟ್ ಸೌಲಭ್ಯವಿರುವ ರಾಜ್ಯದ ಯಾವುದೇ ಅಂಚೆ ಕಚೇರಿಯಲ್ಲಿ ಏಪ್ರಿಲ್ 5, 2016ರೊಳಗೆ ಪಾವತಿ ಮಾಡಬಹುದಾಗಿದೆ. [ಅರ್ಜಿ ಸಲ್ಲಿಸಲು ವಿಳಾಸ]

ಅರ್ಜಿ ಶುಲ್ಕ : ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ -1, ಅಂಗವಿಕಲರು ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ 250 ರೂ. ಮತ್ತು ಅಂಚೆ ಶುಲ್ಕ. 2ಎ/2ಬಿ/3ಎ/3ಬಿ/ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 500 ರೂ. ಮತ್ತು ಅಂಚೆ ಶುಲ್ಕ. [ನೇಮಕಾತಿ ಆದೇಶ ಓದಿ]

job

ವಯೋಮಿತಿ : ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು ಕನಿಷ್ಟ 18 ವರ್ಷ ಪೂರೈಸಿರತಕ್ಕದ್ದು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ, 2ಎ/2ಬಿ/3ಎ/3ಬಿ ವರ್ಗದ ಅಭ್ಯರ್ಥಿಗಳಿಗೆ 38 ವರ್ಷ. ಪ.ಜಾ/ಪ.ಪಂ/ಪ್ರವರ್ಗ 1ರ ಅಭ್ಯರ್ಥಿಗಳಿಗೆ 40 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ. [ಕೊಡಗು ನ್ಯಾಯಾಲಯದಲ್ಲಿ ಕೆಲಸ ಖಾಲಿ ಇದೆ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka govt jobs : Karnataka state educational cultural and sports organization invited applications for various posts. April 4, 2016 last date for submit application.
Please Wait while comments are loading...