KPWD Recruitment: ಕರ್ನಾಟಕ ಲೋಕೋಪಯೋಗಿ ಇಲಾಖೆಯಿಂದ ಭರ್ಜರಿ ನೇಮಕಾತಿ

ಬೆಂಗಳೂರು, ಸೆಪ್ಟಂಬರ್ 25: ಕರ್ನಾಟಕ ರಾಜ್ಯ ಲೋಕೋಪಯೋಗಿ ಇಲಾಖೆಯು (KPWD) ತನ್ನಲ್ಲಿ ಖಾಲಿ ಇರುವ ಹಲವು ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಸರ್ಕಾರಿ ಉದ್ಯೋಗ ಪಡೆಯಲು ಇಚ್ಛಿಸುವವರಿಗೆ ಸುವರ್ಣ ಅವಕಾಶ ಇದಾಗಿದೆ. ಅರ್ಹ ಅಭ್ಯರ್ಥಿಗಳು ನವೆಂಬರ್ 4ರೊಳಗಾಗಿ ಅರ್ಜಿ ಸಲ್ಲಿಸಬೇಕು ಎಂದು ನೇಮಕಾತಿ ಅಧಿಸೂಚನೆ ಮಾಹಿತಿ ನೀಡಿದೆ.

ಕರ್ನಾಟಕ ರಾಜ್ಯ ಲೋಕೋಪಯೋಗಿ ಇಲಾಖೆಯಲ್ಲಿ ಒಟ್ಟು 42 ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಆಸಕ್ತರು ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದೆ. ಇದಕ್ಕು ಮೊದಲು ನೀವು ನೇಮಕಾತಿ ಹೇಗೆಲ್ಲ ನಡೆಯುತ್ತಿದೆ. ಮಾಸಿಕ ವೇತನ, ವಿದ್ಯಾರ್ಹತೆ ಸೇರಿದಂತೆ ನೇಮಕಾತಿ ಎಲ್ಲ ಮಾಹಿತಿ ಮುಂದೆ ತಿಳಿಯಿರಿ.

KPWD Recruitment Apply Applications for 42 Assistant Executive Engineer Posts

ನೇಮಕಾತಿ ಪೂರ್ಣ ಮಾಹಿತಿ

ನೇಮಕಾತಿ ಸಂಸ್ಥೆ ಹೆಸರು: ಕರ್ನಾಟಕ ಲೋಕೋಪಯೋಗಿ ಇಲಾಖೆ

ಹುದ್ದೆಗಳ ಹೆಸರು: ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್

ಒಟ್ಟು ಹುದ್ದೆಗಳು: 42

ವಯಸ್ಸಿನ ಮಿತಿ: ಗರಿಷ್ಠ 35 ವರ್ಷ

ಮಾಸಿಕ ವೇತನ: ನಿಯಮಾನುಸಾರ

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್

ಪೋಸ್ಟಿಂಗ್: ಕರ್ನಾಟಕ

ಶೈಕ್ಷಣಿಕ ಅರ್ಹತೆ ವಿವರ

ಅರ್ಜಿ ಸಲ್ಲಿಸಲಿರುವ ಆಸಕ್ತ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಮತ್ತು ಮಂಡಳಿಯಿಂದ ಕಡ್ಡಾಯವಾಗಿ ಎಂಜಿನಿಯರಿಂಗ್, ಡಿಪ್ಲೊಮಾ ಕೋರ್ಸ್‌ನಲ್ಲಿ ಪದವಿ ಪಡೆದಿರಬೇಕು ಎಂದು ಕರ್ನಾಟಕ ಲೋಕೋಪಯೋಗಿ ಇಲಾಖೆ ನೇಮಕಾತಿ ಅಧಿಸೂಚನೆಯಲ್ಲಿ ವಿವರಿಸಲಾಗಿದೆ.

KPWD Recruitment Apply Applications for 42 Assistant Executive Engineer Posts

ವಯಸ್ಸಿನ ಮಿತಿ ಎಷ್ಟಿರಬೇಕು?

ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳ ವಯಸ್ಸು ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ನವೆಂಬರ್ 4ಕ್ಕೆ ಕನಿಷ್ಠ 21 ವರ್ಷ ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು ಎಂದು ನಿಗದಿ ಮಾಡಲಾಗಿದೆ. ಜಾತಿ ಮೀಸಲಾತಿಗೆ ಅನುಗುಣವಾಗಿ ಎಸ್‌ಸಿ, ಎಸ್‌ಟಿ ಮತ್ತು ಪ್ರವರ್ಗ -1 ಅಭ್ಯರ್ಥಿಗಳಿಗೆ 05 ವರ್ಷ ವಯಸ್ಸಿನ ಮಿತಿಯಲ್ಲಿ ಸಡಿಲಿಕೆ ಹಾಗೂ ಪ್ರವರ್ಗ-2ಎ/2ಬಿ/3ಎ/3ಬಿ ಅಭ್ಯರ್ಥಿಗಳು ಮೂರು ವರ್ಷ ಸಡಿಲಿಕೆ ಸಿಗಲಿದೆ.

ಅರ್ಜಿ ಶುಲ್ಕದ ವಿವರ

ಅರ್ಜಿ ಸಲ್ಲಿಸಲಿರುವ ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50 ರೂಪಾಯಿ, ಪ್ರವರ್ಗ-2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 300 ರೂಪಾಯಿ, ಸಾಮಾನ್ಯ ಅಭ್ಯರ್ಥಿಗಳು 600 ರೂಪಾಯಿ ಅರ್ಜಿ ಶುಲ್ಕ ನಿಗದಿ ಮಾಡಲಾಗಿದೆ. ಈ ಹಣವನ್ನು ಅಭ್ಯರ್ಥಿಗಳನ್ನು ಆನ್‌ಲೈನ್‌ ಮೂಲಕ ಪಾವತಿಸಬೇಕು.

ಅಭ್ಯರ್ಥಿಗಳ ಆಯ್ಕೆ ಹೇಗೆ

ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳಿಗೆ ಮೊದಲು ಇಲಾಖೆ ವತಿಯಿಂದ ಲಿಖಿತ ಪರೀಕ್ಷೆ ನಡೆಯಲಿದೆ. ನಂತರ ಪರ್ಸನಾಲಿಟಿ ಟೆಸ್ಟ್ ಕೈಗೊಂಡು ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆಯ್ಕೆ ಆದವರಿಗೆ ನಿಯಮಾನುಸಾರ ಮಾಸಿಕ ವೇತನ ಸಹಿತ ಕರ್ನಾಟಕದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

ಆಸಕ್ತ ಅರ್ಹ ಅಭ್ಯರ್ಥಿಗಳು ಕೂಡಲೇ ಆನ್‌ಲೈನ್ ಮೂಲಕ ಅರ್ಜಿಯನ್ನು ನಿಗದಿತ ದಿನಾಂಕದೊಳಗೆ https://kpsconline.karnataka.gov.in/HomePage/index.html ಸಲ್ಲಿಸಬೇಕು. ಈ ನೇಮಕಾತಿಗೆ ಸಂಬಂಧಿಸಿದಂತೆ ನಿಮಗೇನಾದರು ಗೊಂದರೆ ಇದ್ದರೆ, ಹೆಚ್ಚಿನ ಸಹಾಯಕ್ಕೆ ಸಹಾಯವಾಣಿ ಸಂಖ್ಯೆ 080-30574957/30574901 ಕರೆ ಮಾಡಬಹುದು ಎಂದು ನೇಮಕಾತಿ ಅಧಿಸೂಚನೆ ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+