ಕೆಪಿಎಸ್ ಸಿಯಿಂದ 1203 ಹುದ್ದೆಗೆ ಅರ್ಜಿ: ಜ.15 ಕೊನೆ ದಿನ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 19: ಕರ್ನಾಟಕ ಲೋಕ ಸೇವಾ ಆಯೋಗವು ಗ್ರೂಪ್ ಎ ತಾಂತ್ರಿಕ, ಗ್ರೂಪ್ ಬಿ ತಾಂತ್ರಿಕ/ತಾಂತ್ರಿಕೇತರ ಮತ್ತು ಗ್ರೂಪ್ ಸಿ ತಾಂತ್ರಿಕ ವೃಂದದ ಹುದ್ದೆಗಳನ್ನು ಭರ್ತಿ ಮಾಡಲು ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ. ಒಟ್ಟು 1203 ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.[ಕರ್ನಾಟಕ ಲೋಕಸೇವಾ ಆಯೋಗದಿಂದ 823 ಹುದ್ದೆಗಾಗಿ ಅರ್ಜಿ ಆಹ್ವಾನ]

ಡಿಸೆಂಬರ್ 17ರಿಂದ ಜನವರಿ 15ರ ರಾತ್ರಿ 11.45ರ ಮಧ್ಯೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸ ಬಹುದಾಗಿದೆ. ಅಂಚೆ ಕಚೇರಿಯಲ್ಲಿ ಶುಲ್ಕ ಪಾವತಿಸಲು ಜನವರಿ 16ರವರೆಗೆ ಅವಕಾಶ ಇದೆ. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಕೂಡ ಶುಲ್ಕ ಪಾವತಿಸಬಹುದಾಗಿದೆ. 2017ರ ಫೆಬ್ರವರಿ 18ರಿಂದ 21ರವರೆಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ಸದ್ಯಕ್ಕೆ ತೀರ್ಮಾನಿಸಲಾಗಿದೆ.[ಸಿಂಡಿಕೇಟ್ ಬ್ಯಾಂಕ್ ನಲ್ಲಿ 400 ಪ್ರೊಬೆಷನರಿ ಅಧಿಕಾರಿಗಳ ಹುದ್ದೆಗಳಿವೆ]

ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛಿಸಿದರೆ ಒಂದೇ ಅರ್ಜಿಯಲ್ಲಿ ಆಯಾ ಹುದ್ದೆಗೆ ಸಂಬಂಧಿಸಿದ ವಿವರಗಳನ್ನು ಭರ್ತಿ ಮಾಡಿ, ಒಂದು ಹುದ್ದೆಗೆ ಮಾತ್ರ ಶುಲ್ಕ ಪಾವತಿಸಿದರೆ ಆಯಿತು. ಇನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಒಟ್ಟು ಅಂಕದ ಶೇ 12.5ರಷ್ಟು ಅಂಕವನ್ನು ಸಂದರ್ಶನಕ್ಕೆ ಅಂತ ಇಟ್ಟಿದ್ದು, ನಿಗದಿತ ಅನುಪಾತದಲ್ಲಿ ಕರೆಯಲಾಗುವುದು.[ಕೆಪಿಸಿಎಲ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ]

ಹುದ್ದೆಗಳ ವರ್ಗೀಕರಣ

ಹುದ್ದೆಗಳ ವರ್ಗೀಕರಣ

ಗ್ರೂಪ್ ಎ ಹುದ್ದೆಗಳು 63
ಗ್ರೂಪ್ ಬಿ ಹುದ್ದೆಗಳು 842
ಗ್ರೂಪ್ ಸಿ ಹುದ್ದೆಗಳು 298
ಒಟ್ಟು ಹುದ್ದೆಗಳು 1203 [ಕೆಪಿಎಸ್ ಸಿಯಿಂದ 1203 ಹುದ್ದೆಗೆ ಅರ್ಜಿ ಆಹ್ವಾನ]

ಸಾಮಾನ್ಯ ಅರ್ಹತೆ 300 ರು.

ಸಾಮಾನ್ಯ ಅರ್ಹತೆ 300 ರು.

ಪ್ರವರ್ಗ 2(ಎ), 2(ಬಿ), 3(ಎ), (ಬಿ) 150 ರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಅಂಗವಿಕಲ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ 25 ರು.

ವಯೋಮಿತಿ

ವಯೋಮಿತಿ

ಸಾಮಾನ್ಯ ವರ್ಗ 35 ವರ್ಷ
2(ಎ), 2(ಬಿ), 3(ಎ), 3(ಬಿ) 38 ವರ್ಷ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 40 ವರ್ಷ
ಪರೀಕ್ಷೆಯ ಪಠ್ಯಕ್ರಮ ತಿಳಿಯಲು ಕ್ಲಿಕ್ ಮಾಡಿ
ನೋಟಿಫಿಕೇಷನ್ ಓದಲು

ಪರೀಕ್ಷಾ ವಿಧಾನ

ಪರೀಕ್ಷಾ ವಿಧಾನ

ಸಾಮಾನ್ಯ ಪತ್ರಿಕೆ 200 ಅಂಕ 1 ಗಂಟೆ 30 ನಿಮಿಷ
ನಿರ್ದಿಷ್ಟ ಪತ್ರಿಕೆ 200 ಅಂಕ 2 ಗಂಟೆ
ಪರೀಕ್ಷೆಯು ಬಹು ಆಯ್ಕೆ ಮಾದರಿಯದ್ದಾಗಿರುತ್ತದೆ. ತಪ್ಪು ಉತ್ತರಕ್ಕೆ 0.25ರಷ್ಟು ಅಂಕ ಕಡಿತವಾಗುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Karnataka Public Service Commission (KPSC) has invited online applications for the post of group A,B, C technical anda non technical posts. January 15, 2017 last date for submit application. Here is details of the posts.
Please Wait while comments are loading...