ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಪಿಎಸ್‌ಸಿ ನೇಮಕಾತಿ; 251 ಹುದ್ದೆಗಳಿಗೆ ಅರ್ಜಿ ಆಹ್ವಾನ

|
Google Oneindia Kannada News

ಬೆಂಗಳೂರು, ಜೂನ್ 26 : ಕರ್ನಾಟಕ ಲೋಕಸೇವಾ ಆಯೋಗ ಗ್ರೂಪ್ 'ಎ' ತಾಂತ್ರಿಕ ಮತ್ತು ಗ್ರೂಪ್ 'ಬಿ' ತಾಂತ್ರಿಕ/ತಾಂತ್ರಿಕೇತರ ವೃಂದದ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿಗಳನ್ನು ಸಲ್ಲಿಸಲು 10/8/2020 ಕೊನೆಯ ದಿನಾಂಕವಾಗಿದೆ.

ಕೆಪಿಎಸ್‌ಸಿ ಉಳಿಕೆ ಮೂಲ ವೃಂದ ಹಾಗೂ ಹೈದ್ರಾಬಾದ್-ಕರ್ನಾಟಕ ವೃಂದದ ತಾಂತ್ರಿಕ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಪಿಯುಸಿ ಉಪನ್ಯಾಸಕರ ನೇಮಕಾತಿ; ಕೌನ್ಸಿಲಿಂಗ್ ದಿನಾಂಕ ಘೋಷಣೆಪಿಯುಸಿ ಉಪನ್ಯಾಸಕರ ನೇಮಕಾತಿ; ಕೌನ್ಸಿಲಿಂಗ್ ದಿನಾಂಕ ಘೋಷಣೆ

ಒಟ್ಟು 251 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. 10/8/2020ರ ತನಕ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಕೆ ಮಾಡಲು ಅವಕಾಶವನ್ನು ಕಲ್ಪಿಸಲಾಗಿದೆ. 11/8/2020ರ ತನಕ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿ ಮಾಡಬಹುದಾಗಿದೆ.

ಸ್ಮರ್ಧಾತ್ಮಕ ಪರೀಕ್ಷೆಗಳ ಮೂಲಕ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲಾಗುತ್ತದೆ. ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ/ ಸ್ಮರ್ಧಾತ್ಮಕ ಪರೀಕ್ಷೆಗಳನ್ನು ಆಯೋಗವು ನಿಗದಿಪಡಿಸುವ ಯಾವುದೇ ಕೇಂದ್ರ ಸ್ಥಳದಲ್ಲಿ ನಡೆಸಲಾಗುವುದು. ಪರೀಕ್ಷೆಗಳ ವೇಳಾಪಟ್ಟಿಯನ್ನು ನಂತರ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ.

ಗ್ರೂಪ್ 'ಎ' ಹುದ್ದೆಗಳ ವಿವರ

ಗ್ರೂಪ್ 'ಎ' ಹುದ್ದೆಗಳ ವಿವರ

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ ಜಿಲ್ಲಾ ವ್ಯವಸ್ಥಾಪಕರು. ಉಳಿಕೆ ಮೂಲ ವೃಂದ 2, ಹೈದ್ರಾಬಾದ್-ಕರ್ನಾಟಕ 2, ಒಟ್ಟು 4 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಗ್ರೂಪ್ 'ಬಿ' ಹುದ್ದೆಗಳು

ಗ್ರೂಪ್ 'ಬಿ' ಹುದ್ದೆಗಳು

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ ಜಿಲ್ಲಾ ವ್ಯವಸ್ಥಾಪಕರು ಗ್ರೇಡ್-ಬಿ ಒಟ್ಟು 4 ಹುದ್ದೆ. ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ ತಾಲೂಕು ಅಭಿವೃದ್ಧಿ ಅಧಿಕಾರಿ 33 ಹುದ್ದೆಗಳು. ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿ ಸಹಾಯಕ ನಿರ್ದೇಶಕರು 17 ಹುದ್ದೆ. ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪರಿಸರ ಅಭಿಯಂತರರು 4 ಹುದ್ದೆಗಳು.

ಬ್ಯಾಂಕ್ ಆಫ್ ಬರೋಡಾ ನೇಮಕಾತಿ; ಕರ್ನಾಟಕದಲ್ಲಿ ಕೆಲಸಬ್ಯಾಂಕ್ ಆಫ್ ಬರೋಡಾ ನೇಮಕಾತಿ; ಕರ್ನಾಟಕದಲ್ಲಿ ಕೆಲಸ

ಯಾವ-ಯಾವ ಹುದ್ದೆ

ಯಾವ-ಯಾವ ಹುದ್ದೆ

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಸಹಾಯಕ ನಿರ್ದೇಶಕರು) 2 ಹುದ್ದೆ, ಔಷಧ ನಿಯಂತ್ರಣ ಇಲಾಖೆಯ ಔಷಧ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು 1 ಹುದ್ದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರು/ಪತ್ರಾಂಕಿತ ವ್ಯವಸ್ಥಾಪಕರು/ವ್ಯವಸ್ಥಾಪಕರ ರವೀಂದ್ರ ಕಲಾಕ್ಷೇತ್ರ 2 ಹುದ್ದೆಗಳು. ಜಲ ಸಂಪನ್ಮೂಲ ಇಲಾಖೆ ಸಹಾಯಕ ಅಭಿಯಂತರರು 181, ಜಲ ಸಂಪನ್ಮೂಲ ಇಲಾಖೆಯಲ್ಲಿ ಸಹಾಯಕ ಅಭಿಯಂತರರು (ಮೆಕ್ಯಾನಿಕಲ್) 3 ಹುದ್ದೆಗಳು.

ಸ್ಮರ್ಧಾತ್ಮಕ ಪರೀಕ್ಷೆ ವಿಧಾನ

ಸ್ಮರ್ಧಾತ್ಮಕ ಪರೀಕ್ಷೆ ವಿಧಾನ

ಸ್ಮರ್ಧಾತ್ಮಕ ಪರೀಕ್ಷೆಯು ವಸ್ತು ನಿಷ್ಠ ಬಹು ಆಯ್ಕೆ ಮಾದರಿಯಲ್ಲಿದ್ದು ಋಣಾತ್ಮಕ ಮೌಲ್ಯಮಾಪನವಿರುತ್ತದೆ. ಪ್ರತಿ ತಪ್ಪು ಉತ್ತರಕ್ಕೆ ಪ್ರಶ್ನೆಗೆ ನಿಗದಿಪಡಿಸಿದ ಅಂಕಗಳ 0.25 ರಷ್ಟು ಅಂಕಗಳನ್ನು ಕಳೆಯಲಾಗುತ್ತದೆ. ಸಾಮಾನ್ಯ ಪತ್ರಿಕೆ 200 ಅಂಕಗಳು, ನಿರ್ದಿಷ್ಟ ಪತ್ರಿಕೆ 200 ಅಂಕಗಳು.

ಗದಗದಲ್ಲಿ ಕೆಲಸ ಖಾಲಿ ಇದೆ; ಜೂನ್ 30ರೊಳಗೆ ಅರ್ಜಿ ಹಾಕಿಗದಗದಲ್ಲಿ ಕೆಲಸ ಖಾಲಿ ಇದೆ; ಜೂನ್ 30ರೊಳಗೆ ಅರ್ಜಿ ಹಾಕಿ

ಅರ್ಜಿ ಶುಲ್ಕದ ವಿವರಗಳು

ಅರ್ಜಿ ಶುಲ್ಕದ ವಿವರಗಳು

ಆನ್‌ಲೈನ್ ಮೂಲಕ ಅರ್ಜಿಗಳನ್ನು ಭರ್ತಿ ಮಾಡಿದ ಮೇಲೆ ಶುಲ್ಕವನ್ನು ಯಾವುದೇ ಕಾಮನ್ ಸರ್ವೀಸ್ ಸೆಂಟರ್‌ಗಳಲ್ಲಿ ಅಥವ ನೆಟ್ ಬ್ಯಾಂಕಿಂಗ್/ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್ ಮೂಲಕ ಸಂದಾಯ ಮಾಡಬಹುದಾಗಿರುತ್ತದೆ. ಸಾಮಾನ್ಯ ಅಭ್ಯರ್ಥಿಗಳಿಗೆ 600 ರೂ., ಪ್ರವರ್ಗ 2(ಎ), 2 (ಬಿ), 3 (ಎ), 3 (ಬಿ) ಅಭ್ಯರ್ಥಿಗಳಿಗೆ 300 ರೂ., ಪ. ಜಾ/ಪ.ಪಂ/ಪ್ರವರ್ಗ - 1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.

ಹೆಚ್ಚಿನ ಮಾಹಿತಿ, ವಿದ್ಯಾರ್ಹತೆ ಮಾಹಿತಿಗಾಗಿ ಕೆಪಿಎಸ್‌ಸಿ ವೆಬ್ ಸೈಟ್‌ ನೋಡಿ

English summary
Karnataka Public Service Commission (KPSC) invited applications for the post of Group A Technical & Group B Technical / Non-Technical. Candidates can apply online for 251 post till 10th Aug 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X