ಕೆಪಿಎಸ್‌ಸಿ ವಿವಿಧ ಹುದ್ದೆಗಳ ಶುಲ್ಕ ಪಾವತಿ ದಿನಾಂಕ ವಿಸ್ತರಣೆ

Written By: Ramesh
Subscribe to Oneindia Kannada

ಬೆಂಗಳೂರು, ನವೆಂಬರ್. 17 : ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ ಸಿ ಅರ್ಜಿ ಆಹ್ವಾನಿಸಿದ್ದ ಕರ್ನಾಟಕ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಸಹಾಯಕ ನಿಯಂತ್ರಕರು(ಗ್ರೂಪ್-ಎ) ಮತ್ತು ಲೆಕ್ಕ ಪರಿಶೋಧನಾಧಿಕಾರಿ(ಗ್ರೂಪ್-ಬಿ) 162 ಹುದ್ದೆಗಳು.

ಹಾಗೂ ಅರಣ್ಯ ಸಂರಕ್ಷಣಧಿಕಾರಿ ಒಟ್ಟು 25 ಹುದ್ದೆಗಳ ಪರೀಕ್ಷೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಸುವ ಅವಧಿಯನ್ನು ವಿಸ್ತರಿಸಲಾಗಿದೆ.

ಕರ್ನಾಟಕ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಸಹಾಯಕ ನಿಯಂತ್ರಕರು(ಗ್ರೂಪ್-ಎ) ಮತ್ತು ಲೆಕ್ಕ ಪರಿಶೋಧನಾಧಿಕಾರಿ(ಗ್ರೂಪ್-ಬಿ) 162 ಹುದ್ದೆಗಳ ಪರೀಕ್ಷೆ ಶುಲ್ಕ ಪಾವತಿಸಲು ಇದ್ದ 18-11-16 ಕೊನೆ ದಿನಾಂಕವನ್ನು 24-11-16 ವರೆಗೆ ವಿಸ್ತರಿಸಲಾಗಿದೆ. [ಕೆಪಿಎಸ್‌ಸಿ : ಅರಣ್ಯ ಸಂರಕ್ಷಣಾಧಿಕಾರಿ ನೇಮಕಾತಿ ವಿವರ]

KPSC has extended the last date till November 24 for certain examinations paying fee

ಐನೂರು- ಸಾವಿರ ಮುಖಬೆಲೆ ನೋಟುಗಳು ರದ್ದಾಗಿದ್ದು. ಇದರಿಂದ ಬ್ಯಾಂಕ್ ಮತ್ತು ಅಂಚೆ ಕಚೇರಿಗಳಲ್ಲಿ ನೋಟು ಬದಲಿಸಲು ಸಾಲುಗಟ್ಟಿ ನಿಲ್ಲುತಿದ್ದಾರೆ.

ಆದ್ದರಿಂದ ಅಭ್ಯರ್ಥಿಗಳಿಗೆ ತೊಂದರೆಯಾಗಬಾರದು ಎಂಬ ದೃಷ್ಠಯಿಂದ ಕರ್ನಾಟಕ ಲೋಕಸೇವಾ ಆಯೋಗ ಈ ನಿರ್ಧಾರವನ್ನು ಕೈಗೊಂಡಿದೆ.

ಯಾವ-ಯಾವ ಹುದ್ದೆಗಳ ಪರೀಕ್ಷೆ ಶುಲ್ಕ ಪಾವತಿ ದಿನಾಂಕವನ್ನು ವಿಸ್ತರಿಸಿದೆ ಎಂಬುವುದನ್ನು ಹುಚ್ಚಿನ ಮಾಹಿತಿಯನ್ನು ತಿಳಿಯಲು ಕೆಪಿಎಸ್ ಹೊರಡಿಸಿದ ಆದೇಶ ಪತ್ರಕ್ಕೆ ಇಲ್ಲಿ ಕ್ಲಿಕ್ಕಿಸಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Following the difficulties faced by candidates in paying fee in post offices, the KPSC has extended the last date till November 24 for paying fee for candidates selected for the main certain examinations. 162 posts of Assistant Controller and candidates selected for the examinations for 25 posts of Forests,
Please Wait while comments are loading...