ಕೆಪಿಸಿಎಲ್ ನೇಮಕಾತಿ; ವೇತನ 75 ಸಾವಿರ ರೂ.ಗಳು
ಬೆಂಗಳೂರು, ಫೆಬ್ರವರಿ 09; ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಒಂದು ಹುದ್ದೆಗೆ ಅರ್ಜಿಯನ್ನು ಕರೆದಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 5/3/2022ರೊಳಗೆ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದಾಗಿದೆ.
ಗುತ್ತಿಗೆ ಆಧಾರದ ಮೇಲೆ ಮುಖ್ಯಸ್ಥರು (ಭೂ-ಸ್ವಾಧೀನ ಪುನರ್ ವಸತಿ ಮತ್ತು ಪರಿಹಾರ) ಹುದ್ದೆಯನ್ನು ಭರ್ತಿ ಮಾಡುತ್ತಿದೆ. ಒಂದು ಹುದ್ದೆ ಖಾಲಿ ಇದ್ದು, ನಿವೃತ್ತ ಕೆಎಎಸ್ ಅಧಿಕಾರಿ, ಭೂ-ಸ್ವಾಧೀನ, ಪುನರ್ ವಸತಿ ಮತ್ತು ಪರಿಹಾರ ವಿಷಯದಲ್ಲಿ ಅನುಭವ ಹೊಂದಿರಬೇಕು.
ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.75,000 ರೂ. ವೇತನ ನಿಗದಿ ಮಾಡಲಾಗಿದೆ. ಈಗ ಪಡೆಯುತ್ತಿರುವ ಪಿಂಚಣಿ ಹಾಗೂ ನಿಗಮದಿಂದ ಪಾವತಿಸಲಾಗುವ ಸಂಭಾವನೆ ಸೇರಿ ನಿವೃತ್ತ ಸಮಯದಲ್ಲಿ ಪಡೆಯುತ್ತಿದ್ದ ವೇತನಕ್ಕೆ ಮೀರದಂತೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 60 ರಿಂದ 70 ವರ್ಷಗಳ ವಯೋಮಿತಿ. ನಿಗಮವು ಈ ಗುತ್ತಿಗೆ ನೇಮಕಾತಿಯನ್ನು ಭಾಗಶ:/ ಪೂರ್ಣವಾಗಿ ಯಾವುದೇ ಹಂತದಲ್ಲಿ ಯಾವುದೇ ಕಾರಣ ನೀಡದೆ ರದ್ದುಪಡಿಸುವ ಅಧಿಕಾರವನ್ನು ಹೊಂದಿದೆ.
ಆಸಕ್ತ ನಿವೃತ್ತ ಅಧಿಕಾರಿಗಳು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು Application for the post of head (LA, R&R) ಎಂದು ಲಕೋಟೆಯ ಮೇಲೆ ನಮೂದಿಸಿ ನೋಂದಾಯಿತ ಅಂಚೆ ಮೂಲಕ ಈ ವಿಳಾಸಕ್ಕೆ ಕಳಿಸಬೇಕು.
ವಿಳಾಸ; ನಿರ್ದೇಶಕರು (ಮಾ. ಸಂ), ನಂ. 82, ಶಕ್ತಿ ಭವನ, ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ರೇಸ್ ಕೋರ್ಸ್ ರಸ್ತೆ, ಬೆಂಗಳೂರು 56001.
ಅರ್ಜಿಗಳನ್ನು 5/3/2020ರೊಳಗೆ ತಲುಪುವಂತೆ ಸಲ್ಲಿಸುವುದು. (ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಲು ವೆಬ್ ಸೈಟ್ ವಿಳಾಸ www.karnatakapower.com ಮತ್ತು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-22201820 ಕರೆ ಮಾಡಬಹುದಾಗಿದೆ.
ನಿಗಮ ಉನ್ನತ ಮಟ್ಟದ ಕಾರ್ಯ ನಿರ್ವಹಣೆಗಾಗಿ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಸಹ ಗಳಿಸಿದೆ. ನಿಗಮದ ಭೂ ಸ್ವಾಧೀನ, ಪುನರ್ ವಸತಿ ಮತ್ತು ಪರಿಹಾರದ ವಿಷಯಗಳಿಗೆ ಸಂಬಂಧಿಸಿದಂತೆ ಕಾರ್ಯಗಳನ್ನು ನಿರ್ವಹಿಸಲು1 ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಮುಖ್ಯಸ್ಥರು (ಭೂ-ಸ್ವಾಧೀನ, ಪುನರ್ ವಸತಿ ಮತ್ತು ಪರಿಹಾರ) ಹುದ್ದೆಗೆ ಈ ಕೆಳಕಂಡ ಅರ್ಹತೆಯಿಂದ ನೇಮಿಸಲು ನಿಗಮವು ಉದ್ದೇಶಿಸಿದೆ.
ಕಲಬುರಗಿಯಲ್ಲಿ ಬೃಹತ್ ಉದ್ಯೋಗ ಮೇಳ; ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಫೆಬ್ರವರಿ 12 ರಂದು ಕಲಬುರಗಿಯ ದೊಡ್ಡಪ್ಪ ಅಪ್ಪ ತಾಂತ್ರಿಕ ಮಹಾವಿದ್ಯಾಲಯ ಐವನ್-ಎ-ಶಾಹಿ ಶಂಭೋಜಿಯಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.
ಫೆಬ್ರವರಿ 12 ರಂದು ಬೆಳಗ್ಗೆ 9 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ಉದ್ಯೋಗ ಮೇಳವು ನಡೆಯಲಿದೆ. ಈ ಮೇಳದಲ್ಲಿ ಪ್ರತಿಷ್ಠಿತ ಕಂಪನಿಗಳು ಸುಮಾರು 5000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಿದ್ದು, ಬಿ.ಇ, ಬಿಕಾಂ, ಬಿ.ಎಸ್‌ಸಿ, ಬಿಎ, ಬಿಸಿಎ, ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಡಿಪ್ಲೊಮಾ ಹಾಗೂ ಐಟಿಐ ವಿದ್ಯಾರ್ಹತೆಯನ್ನು ಹೊಂದಿದ ಅಭ್ಯರ್ಥಿಗಳು ವಿದ್ಯಾರ್ಹತೆಯ ಅಂಕಪಟ್ಟಿಯ ನಕಲು ಪ್ರತಿ, ಇತ್ತೀಚಿನ 2 ಭಾವಚಿತ್ರ, ಆಧಾರ್ ಕಾರ್ಡ್ ಹಾಗೂ ರೆಸ್ಯುಮ್‌ನ 5 ಪ್ರತಿಗಳೊಂದಿಗೆ ಮೇಳದಲ್ಲಿ ಭಾಗವಹಿಸಬಹುದು.
ಆಸಕ್ತ ಉದ್ಯೋಗಾಕಾಂಕ್ಷಿಗಳು ವೆಬ್‌ಸೈಟ್ https://skillconnect.kaushalkar.com/app/gulbarga-jobfair ಲಿಂಕ್‌ನ ಮೂಲ ತಮ್ಮ ಸ್ವ-ವಿವರಗಳ ಮಾಹಿತಿಯನ್ನು ಭರ್ತಿ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದು.
ಅಭ್ಯರ್ಥಿಗಳು ತಮ್ಮ ರೆಸ್ಯುಮ್‌ಗಳನ್ನು [email protected] ವಿಳಾಸಕ್ಕೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 8277895931 ಗೆ ಸಂಪರ್ಕಿಸಬಹುದೆಂದು ಕೊಪ್ಪಳ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











Click it and Unblock the Notifications