ಕೊಪ್ಪಳದ ಕಲ್ಯಾಣ ಇಲಾಖೆಗೆ ಪಾಕಪ್ರವೀಣರು ಬೇಕಾಗಿದ್ದಾರೆ

Posted By:
Subscribe to Oneindia Kannada

ಕೊಪ್ಪಳ, ಜೂನ್ 16 : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳಲ್ಲಿ ಖಾಲಿ ಇರುವ ಅಡುಗೆಯವರು/ ಅಡುಗೆ ಸಹಾಯಕರ ನೇರ ನೇಮಕಾತಿಗಾಗಿ ಈ ಹಿಂದೆ ಆನ್‍ಲೈಲ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಇದೀಗ ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳಿಗೆ ದಾಖಲೆಗಳ ಪರಿಶೀಲನೆ ಹಾಗೂ ಅಡುಗೆ ತಯಾರಿಕೆ ಪ್ರಾಯೋಗಿಕ ಪರೀಕ್ಷೆಗೆ ದಿನಾಂಕವನ್ನು ನಿಗದಿಪಡಿಸಲಾಗಿದೆ.

ಅಡುಗೆಯವರು - 41 ಹುದ್ದೆ ಮತ್ತು ಅಡುಗೆ ಸಹಾಯಕರು - 92 ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ಇದೀಗ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳ ಪೈಕಿ 1:5 ರ ಅನುಪಾತದ ಪ್ರಕಾರ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಜಿಲ್ಲಾಧಿಕಾರಿಗಳ ವೆಬ್‍ಸೈಟ್ www.koppal.nic.in ನಲ್ಲಿ ಪ್ರಕಟಿಸಲಾಗಿದೆ.

Kanagavalli

ಅರ್ಹ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರಗಳನ್ನು ವೆಬ್‍ಸೈಟ್‍ನಿಂದ ಡೌನ್‍ಲೋಡ್ ಮಾಡಿಕೊಂಡು ದಾಖಲಾತಿಗಳ ಪರಿಶೀಲನೆ ಹಾಗೂ ಅಡುಗೆ ತಯಾರಿಕೆ ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗಬೇಕು.

* ಜೂನ್. 22 ರಂದು : ದಾಖಲೆಗಳ ಪರಿಶೀಲನೆಗಾಗಿ, ಅಡುಗೆಯವರ ಹುದ್ದೆಗೆ ಅರ್ಜಿ ಸಲ್ಲಿಸಿದವರು ಹಾಗೂ
* ಜೂನ್. 23 ರಂದು ಅಡುಗೆ ಸಹಾಯಕರ ಹುದ್ದೆಗೆ ಅರ್ಜಿ ಸಲ್ಲಿಸಿದವರು
* ಜೂನ್. 28 ರಂದು : ಅಡುಗೆ ತಯಾರಿಕ ಪ್ರಾಯೋಗಿಕ ಪರೀಕ್ಷೆಗಾಗಿ, ಅಡುಗೆಯವರ ಹುದ್ದೆಗೆ ಅರ್ಜಿ ಸಲ್ಲಿಸಿದವರು
* ಜೂನ್. 29 ರಂದು ಅಡುಗೆ ಸಹಾಯಕರ ಹುದ್ದೆಗೆ ಅರ್ಜಿ ಸಲ್ಲಿಸಿದವರು
* ಜುಲೈ. 03 ರಂದು ಅಡುಗೆಯವರ ಹಾಗೂ ಅಡುಗೆ ಸಹಾಯಕರ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಹೊರಡಿಸಲಾಗುವುದು.
* ಆಕ್ಷೇಪಣೆಗಳಿಗೆ ಸಮಜಾಯಿಷಿ ನೀಡಿದ ನಂತರ ಜುಲೈ. 18 ರಂದು ಅಂತಿಮ ಆಯ್ಕೆ ಪಟ್ಟಿ ಹೊರಡಿಸಲಾಗುವುದು
ಸ್ಥಳ: ಕೊಪ್ಪಳದ ಕವಲೂರು ನಗರ ಹರಿಪ್ರಿಯಾ ಎಕ್ಸ್‍ಟೆನ್ಷನ್ ಏರಿಯಾದಲ್ಲಿನ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಗಳ ಸಂಕೀರ್ಣದಲ್ಲಿ ಹಾಜರಾಗಿ ದಾಖಲೆಗಳ ಪರಿಶೀಲನೆಗೆ ಹಾಜರಾಗಬೇಕು.

ಎಂದು ಕೊಪ್ಪಳ ಜಿಲ್ಲಾಧಿಕಾರಿ ಹಾಗೂ ಗ್ರೂಪ್-ಡಿ ನೌಕರರ ನೇರ ನೇಮಕಾತಿ ಸಮಿತಿಯ ಅಧ್ಯಕ್ಷರಾದ ಎಂ. ಕನಗವಲ್ಲಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Koppal Backward Classes and Department and Social welfare department recruitment: Practical exam dates and exam center for the post of Cooks and assistant Cooks announced by DC Kanagavalli.
Please Wait while comments are loading...