ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಂಎಫ್ ನೇಮಕಾತಿ; 487 ವಿವಿಧ ಹುದ್ದೆಗಳಿಗೆ ಅರ್ಜಿ ಹಾಕಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 20; ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತ (ಕೆಎಂಎಫ್) ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಲು 19/11/2022 ಕೊನೆಯ ದಿನವಾಗಿದೆ.

ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ನಿ. ಬೆಂಗಳೂರು ಇಲ್ಲಿ ಖಾಲಿ ಇರುವ ವಿವಿಧ ವೃಂದದ 487 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕಿದೆ. ಅಪೂರ್ಣವಾದ, ಅಸ್ಪಷ್ಟವಾದ ಮಾಹಿತಿ ಇರುವ ಅರ್ಜಿಗಳನ್ನು ತಿರಸ್ಕಾರ ಮಾಡಲಾಗುತ್ತದೆ.

ಕೆಪಿಎಸ್‌ಸಿ ನೇಮಕಾತಿ; ಸಹಾಯಕ ಕಾರ್ಯಪಾಲಕ ಇಂಜಿನಿಯರ್ 18 ಹುದ್ದೆಗಳು ಕೆಪಿಎಸ್‌ಸಿ ನೇಮಕಾತಿ; ಸಹಾಯಕ ಕಾರ್ಯಪಾಲಕ ಇಂಜಿನಿಯರ್ 18 ಹುದ್ದೆಗಳು

ಈ ಪ್ರಕಟಣೆಯಲ್ಲಿ ಪ್ರಕಟಿಸಲಾದ ಹುದ್ದೆಗಳ ಸಂಖ್ಯೆಯಲ್ಲಿ ಬದಲಾವಣೆ (ಹೆಚ್ಚು/ ಕಡಿಮೆ) ಮಾಡುವ ಹಕ್ಕನ್ನು ಮಹಾಮಂಡಳದ ನೇಮಕಾತಿ ಪ್ರಾಧಿಕಾರವು ಹೊಂದಿರುತ್ತದೆ. ಅಭ್ಯರ್ಥಿಗಳು ಒಂದು ಹುದ್ದೆಗೆ ಒಂದೇ ಅರ್ಜಿ ಸಲ್ಲಿಸಬೇಕು. ಮೊದಲು ಸಲ್ಲಿಕೆಯಾದ ಅರ್ಜಿಯನ್ನು ಮಾತ್ರ ಮಾನ್ಯ ಮಾಡಲಾಗುತ್ತದೆ. ಅರ್ಜಿಗಳನ್ನು ಸಲ್ಲಿಕೆ ಮಾಡುವ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು, ಶುಲ್ಕ ಪಾವತಿ ಮಾಡದ ಅರ್ಜಿಗಳನ್ನು ತಿರಸ್ಕಾರ ಮಾಡಲಾಗುತ್ತದೆ.

KPSC recruitment; ಸಾಂಖ್ಯಿಕ ನಿರೀಕ್ಷಕ 105 ಹುದ್ದೆಗೆ ಅರ್ಜಿ ಹಾಕಿ KPSC recruitment; ಸಾಂಖ್ಯಿಕ ನಿರೀಕ್ಷಕ 105 ಹುದ್ದೆಗೆ ಅರ್ಜಿ ಹಾಕಿ

ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚಿನ ವೃಂದದ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಇಚ್ಛಿಸಿದಲ್ಲಿ ಅಂತಹ ಅಭ್ಯರ್ಥಿಗಳು ಒಂದೇ ನೋಂದಣಿ ಸಂಖ್ಯೆಯಲ್ಲಿಯೇ ಪ್ರತಿ ಹುದ್ದೆಗೆ ಪ್ರತ್ಯೇಕವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿ ಜೊತೆ ಪಾವತಿ ಮಾಡಿದ ಶುಲ್ಕವನ್ನು ಯಾವುದೇ ಕಾರಣಕ್ಕೂ ವಾಪಸ್ ನೀಡಲಾಗುವುದಿಲ್ಲ.

KPSC Recruitment 2022 : ಗಣತಿದಾರರು ಕಂ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳು KPSC Recruitment 2022 : ಗಣತಿದಾರರು ಕಂ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳು

ಯಾವ-ಯಾವ ಹುದ್ದೆಗಳು?

ಯಾವ-ಯಾವ ಹುದ್ದೆಗಳು?

ಹಿರಿಯ ಉಪ ನಿರ್ದೇಶಕ (ವಿತ್ತ) 1, ಹಿರಿಯ ಉಪ ನಿರ್ದೇಶಕ (ಮಾರುಕಟ್ಟೆ) 1, ಹಿರಿಯ ಉಪ ನಿರ್ದೇಶಕ (ಪಶು ಆಹಾರ) 1, ಉಪ ನಿರ್ದೇಶಕ (ವಿತ್ತ) 3, ಉಪ ನಿರ್ದೇಶಕ (ಪಶು ವೈದ್ಯಕೀಯ) 5, ವೈದ್ಯಾಧಿಕಾರಿ 1 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಬಯೋ ಸೆಕ್ಯೂರಿಟಿ ಆಫೀಸರ್ 1, ಉಪ ನಿರ್ದೇಶಕ (ಮಾರುಕಟ್ಟೆ) 4, ಉಪ ನಿರ್ದೇಶಕ (ಡಿ. ಟಿ) 1, ಉಪ ನಿರ್ದೇಶಕ (ಡಿ. ಟಿ) ಉಳಿಕೆ ವೃಂದ 1, ಉಪ ನಿರ್ದೇಶಕ (ಉತ್ಪಾದನೆ) 1, ಸಹಾಯಕ ನಿರ್ದೇಶಕ (ಡೇರಿ ಟೆಕ್ನಾಲಜಿ) 25 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.

ಲೆಕ್ಕ ಸಹಾಯಕ ದರ್ಜೆ-2 30, ಮಾರುಕಟ್ಟೆ ಸಹಾಯಕ ದರ್ಜೆ-2 23, ಲ್ಯಾಬ್ ಸಹಾಯಕ ದರ್ಜೆ-2 (ಕೆಮಿಸ್ಟ್ರಿ) 15, ಲ್ಯಾಬ್ ಸಹಾಯಕ ದರ್ಜೆ -2 (ಮೈಕ್ರೋ ಬಯಾಲಜಿ) 15, ಹಿರಿಯ ತಾಂತ್ರಿಕ 10 ಹುದ್ದೆಗಳು.

ವಿವಿಧ ಹುದ್ದೆಗಳ ನೇರ ನೇಮಕಾತಿ

ವಿವಿಧ ಹುದ್ದೆಗಳ ನೇರ ನೇಮಕಾತಿ

ಸಹಾಯಕ ನಿರ್ದೇಶಕ (ಫುಡ್ ಟೆಕ್ನಾಲಜಿ & ಫುಡ್ ಸೈನ್ಸ್ & ಟೆಕ್ನಾಲಜಿ) 3 ಹುದ್ದೆಗಳು. ಸಹಾಯಕ ನಿರ್ದೇಶಕರ (ಅಭಿಯಂತರ) 1, ಸಹಾಯಕ ನಿರ್ದೇಶಕ (ಅಭಿಯಂತರ) ಉಳಿಕೆ ವೃಂದ 1, ಸಹಾಯಕ ನಿರ್ದೇಶಕ (ಅಭಿಯಂತರ) (ಕೆಮಿಕಲ್) 1, ಸಹಾಯಕ ನಿರ್ದೇಶಕ (ಕೃಷಿ) 2, ವಿಲೆಜೆನ್ಸ್ ಅಫೀಸರ್ 1 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.

ಸುರಕ್ಷತಾ ಅಧಿಕಾರಿ 1, ಸಹಾಯಕ ನಿರ್ದೇಶಕ (ಆರ್ಕಿಟೆಕ್ಚರ್/ ಸ್ಟ್ರಕ್ಚರ್) 1, ಸಹಾಯಕ ನಿರ್ದೇಶಕ (ತರಬೇತಿ) (ಡೇರಿ ತಾಂತ್ರಿಕ) 1, ಸಹಾಯಕ ನಿರ್ದೇಶಕ (ತರಬೇತಿ) (ಅಭಿಯಂತರ) 1, ಸಹಾಯಕ ನಿರ್ದೇಶಕ (ತರಬೇತಿ) (ಕೃಷಿ) 1 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.

ಶೀಘ್ರಲಿಪಿಗಾರ ದರ್ಜೆ-2 1, ಕಿರಿಯ ಸಿಸ್ಟಂ ಆಪರೇಟರ್ 15, ಹಿರಿಯ ಕೋ-ಆರ್ಡಿನೇಟರ್ (ಪ್ರೊಟೆಕ್ಷನ್) 6, ಸ್ಟಾಪ್ ನರ್ಸ್‌ 3, ಕಿರಿಯ ತಾಂತ್ರಿಕ (ಮೆಕಾಟ್ರಾನಿಕ್ಸ್) 12, ಕಿರಿಯ ತಾಂತ್ರಿಕ (ರಿಫ್ರಿಜರೇಷನ್ & ಏರ್ ಕಂಡೀಷನ್) 18, ಕಿರಿಯ ತಾಂತ್ರಿಕ (ಫಿಟ್ಟರ್) 25, ಕಿರಿಯ ತಾಂತ್ರಿಕ (ಟರ್ನರ್) 19, ಕಿರಿಯ ತಾಂತ್ರಿಕ (ವೆಲ್ಡರ್) 12, ಕಿರಿಯ ತಾಂತ್ರಿಕ (ಎಲೆಕ್ಟ್ರಿಕಲ್) 45 ಹುದ್ದೆಗಳು.

ಕೆಎಂಎಫ್ ನೇಮಕಾತಿ, ವಿವಿಧ ಹುದ್ದೆ

ಕೆಎಂಎಫ್ ನೇಮಕಾತಿ, ವಿವಿಧ ಹುದ್ದೆ

ಸಹಾಯಕ ನಿರ್ದೇಶಕ (ತರಬೇತಿ) (ಎಂ. ಎಸ್. ಡಬ್ಲ್ಯು) 1, ಸಹಾಯಕ ನಿರ್ದೇಶಕ (ತರಬೇತಿ) (ಸಹಕಾರ) 1, ಕಾರ್ಮಿಕ ಕಲ್ಯಾಣ/ ಕಾನೂನು ಅಧಿಕಾರಿ 1, ಅಧೀಕ್ಷಕ (ಖರೀದಿ/ ಉಗ್ರಾಣ) 2, ಅಧೀಕ್ಷಕ (ಆಡಳಿತ) 1, ಅಧೀಕ್ಷಕ (ಮಾರುಕಟ್ಟೆ) 10, ಅಧೀಕ್ಷಕ (ಕೋ-ಆರ್ಡಿನೇಟರ್ ಪ್ರೊಟೆಕ್ಷನ್) 4 ಹುದ್ದೆಗಳು.

ಹಿರಿಯ ಕೆಮಿಸ್ಟ್ 3, ಹಿರಿಯ ಕೆಮಿಸ್ಟ್ (ಮೈಕ್ರೋಬಯಾಲಜಿ) 3, ಅಧೀಕ್ಷಕ(ತರಬೇತಿ) 4, ಲೆಕ್ಕ ಸಹಾಯಕ ದರ್ಜೆ -1 13, ಡೇರಿ ಮೇಲ್ವಿಚಾರಕ ದರ್ಜೆ-2 1, ಆಡಳಿತ ಸಹಾಯಕ ದರ್ಜೆ-2 40, ಕಿರಿಯ ತಾಂತ್ರಿಕ ( ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್) 17, ಕಿರಿಯ ತಾಂತ್ರಿಕ (ಇನ್ಟ್ರುಮೆಂಟಲ್) 8, ಕಿರಿಯ ತಾಂತ್ರಿಕ (ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್) 12, ಕಿರಿಯ ತಾಂತ್ರಿಕ (ಮೆಕ್ಯಾನಿಸ್ಟ್) 4, ಕಿರಿಯ ತಾಂತ್ರಿಕ (ಬಾಯ್ಲರ್) 28, ಕೋ-ಆರ್ಡಿನೇಟರ್ (ಪ್ರೊಟೆಕ್ಷನ್) 10, ಸಹಾಯಕ 15 ಹುದ್ದೆಗಳಿವೆ.

ವಯೋಮಿತಿಯ ವಿವರಗಳು

ವಯೋಮಿತಿಯ ವಿವರಗಳು

ಅರ್ಜಿಗಳನ್ನು ಸಲ್ಲಿಕೆ ಮಾಡಲು ಕೊನೆಯ ದಿನಾಂಕ 19/11/2022ಕ್ಕೆ ಕನಿಷ್ಠ ವಯೋಮಿತಿ 18 ವರ್ಷಗಳು. ಗರಿಷ್ಠ ವಯೋಮಿತಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 40 ವರ್ಷಗಳು. ಪ್ರವರ್ಗ 2ಎ/ 2ಬಿ/ 3ಎ/ 3ಬಿ 38 ವರ್ಷಗಳು. ಸಾಮಾನ್ಯ ವರ್ಗಕ್ಕೆ 35 ವರ್ಷಗಳು.

ಅರ್ಜಿಗಳನ್ನು ಸಲ್ಲಿಕೆ ಮಾಡುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳು 500 ರೂ. ಶುಲ್ಕ, ಬ್ಯಾಂಕ್ ಶುಲ್ಕ ಪ್ರತ್ಯೇಕವಾಗಿ ಪಾವತಿಸಬೇಕು. ಇತರ ವರ್ಗದ ಅಭ್ಯರ್ಥಿಗಳು 1000 ರೂ. ಶುಲ್ಕ ಬ್ಯಾಂಕ್ ಶುಲ್ಕ ಪ್ರತ್ಯೇಕವಾಗಿ ಪಾವತಿ ಮಾಡಬೇಕು.

ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್‌ ವಿಳಾಸ ಕ್ಲಿಕ್ ಮಾಡಿ

English summary
Karnataka Milk Federation (KMF) invited applications from eligible candidates for 487 post. Candidates can apply online till 19/11/2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X