ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ಕೆಲಸ ಖಾಲಿ ಇದೆ

ಮಂಡ್ಯ, ಜನವರಿ 28; ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 1 ರಿಂದ ಮಾರ್ಚ್ 2ರ ತನಕ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ವಿವಿಧ ವೃಂದದ ಒಟ್ಟು 187 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಕರೆಯಲಾಗಿದೆ. ಅಭ್ಯರ್ಥಿಗಳು ಖುದ್ದಾಗಿ/ ಅಂಚೆ/ ಕೊರಿಯರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಫೆಬ್ರವರಿ 1 ರಿಂದ https://manmul.coop/recruitment-2022/ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

KMF MANMUL Recruitment Apply For 187 Posts

ಹುದ್ದೆಗಳ ವಿವರ; ಸಹಾಯಕ ವ್ಯವಸ್ಥಾಪಕರು 19, ಸಹಾಯಕ ವ್ಯವಸ್ಥಾಪಕರು (ಖರೀದಿ/ ಉಗ್ರಾಣ) 1, ಸಹಾಯಕ ವ್ಯವಸ್ಥಾಪಕರು (ಮೇವು/ ಪಶು ಆಹಾರ) 3, ಲೀಗಲ್ ಅಧಿಕಾರಿ 1, ತಾಂತ್ರಿಕ ಅಧಿಕಾರಿ 12, ಉಗ್ರಣಾಧಿಕಾರಿ / ಐ. ಎಂ. ಅಧಿಕಾರಿ 12 ಹುದ್ದೆಗಳು.

ಡೇರಿ ಪರಿವೀಕ್ಷಕರು ದರ್ಜೆ -2 ಸಿವಿಲ್ 1, ಡೇರಿ ಪರಿವೀಕ್ಷಕರು ದರ್ಜೆ -2 ಎಲೆಕ್ಟ್ರಾನಿಕ್ಸ್ & ಇನ್ಸ್‌ಟ್ರುಮೆನ್‌ಟೇಷನ್ 2, ಡೇರಿ ಪರಿವೀಕ್ಷಕರು ದರ್ಜೆ -2 ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ 2, ವಿಸ್ತರಣಾಧಿಕಾರಿ ದರ್ಜೆ - 3 22 ಹುದ್ದೆಗಳು.

ವಿಸ್ತರಣಾಧಿಕಾರಿ ದರ್ಜೆ -3 ಮಂಡ್ಯ ಹಾಲು ಒಕ್ಕೂಟ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿಗಳಿಗೆ 3, ಆಡಳಿತ ಸಹಾಯಕ ದರ್ಜೆ -2 14, ಲೆಕ್ಕ ಸಹಾಯಕ ದರ್ಜೆ -2 8, ಕೆಮಿಸ್ಟ್ ದರ್ಜೆ -2 9, ಜೂನಿಯರ್ ಸಿಸ್ಟಮ್ ಆಪರೇಟರ್ 10, ಕೋ-ಆರ್ಡಿನೇಟರ್ (ಪ್ರೊಟೆಕ್ಷನ್) 4 ಹುದ್ದೆಗಳು.

ಆರೋಗ್ಯ ನಿರೀಕ್ಷಕರು 1, ನರ್ಸ್ 2, ಮಾರುಕಟ್ಟೆ ಸಹಾಯಕ ದರ್ಜೆ -3 / ಡಿಸ್ ಪ್ಯಾಚರ್ಸ್ 10, ಮಾರುಕಟ್ಟೆ ಸಹಾಯಕ ದರ್ಜೆ - 3 ಡಿಸ್ ಪ್ಯಾಚರ್ಸ್ ಮಂಡ್ಯ ಹಾಲು ಒಕ್ಕೂಟ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿಗಳಿಗೆ 4 ಹುದ್ದೆಗಳು.

ಜ್ಯೂನಿಯರ್ ಟೆಕ್ನಿಷಿಯನ್ ಎಲೆಕ್ಟ್ರಿಕಲ್ 16, ಜ್ಯೂನಿಯರ್ ಟೆಕ್ನಿಷಿಯನ್ ಎಂ. ಆರ್. ವಿ. ಸಿ. 6, ಜ್ಯೂನಿಯರ್ ಟೆಕ್ನಿಷಿಯನ್ ವೆಲ್ಡರ್ 2, ಜ್ಯೂನಿಯರ್ ಟೆಕ್ನಿಷಿಯನ್ ಫಿಟ್ಟರ್ 9, ಜ್ಯೂನಿಯರ್ ಟೆಕ್ನಿಷಿಯನ್ ಬಾಯ್ಲರ್ 6, ಜ್ಯೂನಿಯರ್ ಟೆಕ್ನಿಷಿಯನ್ ಇನ್ಟ್ರುಮೆಂಟ್ ಮೆಕಾನಿಕ್ 5, ಜ್ಯೂನಿಯರ್ ಟೆಕ್ನಿಷಿಯನ್ ಎಲೆಕ್ಟ್ರಾನಿಕ್ ಮೆಕಾನಿಕ್ 6 ಹುದ್ದೆಗಳು.

ಚಾಲಕರು 6, ಕೃಷಿ ಸಹಾಯಕ 1, ತೋಟಗಾರಿಕಾ ಸಹಾಯಕ 1 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.

ನೇಮಕಾತಿಗಾಗಿ ಅರ್ಜಿಗಳನ್ನು ಆನ್‌ಲೈನ್ ಮೂಲಕ ಮಾತ್ರ ಮಾರ್ಚ್ 2ರ ತನಕ ಸಲ್ಲಿಸಬಹುದಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ವೆಬ್‌ಸೈಟ್‌ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.

ಅರ್ಜಿ ಆಹ್ವಾನ; ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದಿಂದ ಸ್ವಸಹಾಯ ಗುಂಪುಗಳಿಗೆ ಕಿರುಸಾಲ ಯೋಜನೆಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಸೌಲಭ್ಯ ಪಡೆಯಲು ಬಯಸುವ ಅರ್ಜಿದಾರರು ಪ್ರವರ್ಗ-1 ರಲ್ಲಿ ಬರುವ ಜಾತಿಗಳಿಗೆ ಸೇರಿದವರಾಗಿದ್ದು, ಸ್ವಸಹಾಯ ಸಂಘದ ಸದಸ್ಯರಾಗಿರಬೇಕು.

ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದಿಂದ ಅರಿವು ಶೈಕ್ಷಣಿಕ ಸಾಲ ಯೋಜನೆಯಲ್ಲಿ ಹಾಗೂ ಗಂಗಾ ಕಲ್ಯಾಣ ಯೋಜನೆಯಲ್ಲಿ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಯಲ್ಲಿ ಸೌಲಭ್ಯ ಪಡೆಯುವ ಅರ್ಜಿದಾರರು ಮಡಿವಾಳ ಹಾಗೂ ಅದರ ಉಪಜಾತಿಗೆ ಸೇರಿದವರಾಗಿರಬೇಕು.

ಕರ್ನಾಟಕ ಅಲೆಮಾರಿ/ ಅರೆ ಅಲೆಮಾರಿ ಅಭಿವೃದ್ಧಿ ನಿಗಮದಿಂದ ಅರಿವು ಶೈಕ್ಷಣಿಕ ಸಾಲ ಯೋಜನೆಯಲ್ಲಿ ಹಾಗೂ ಗಂಗಾ ಕಲ್ಯಾಣ ಯೋಜನೆಯಲ್ಲಿ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಗಳಲ್ಲಿ ಸೌಲಭ್ಯ ಪಡೆಯುವ ಅರ್ಜಿದಾರರು ಪ್ರವರ್ಗ-1 ರಲ್ಲಿ ಬರುವ ಅಲೆಮಾರಿ/ಅರೆ ಅಲೆಮಾರಿ ಜನಾಂಗಕ್ಕೆ ಸೇರಿದವರಾಗಿರಬೇಕು.

ಈ ನಿಗಮಗಳ ಯೋಜನೆಗಳಲ್ಲಿ ಸೌಲಭ್ಯ ಪಡೆಯ ಬಯಸುವವರು ಅರ್ಜಿಯನ್ನು ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ರಾಡ್ರಿಗಸ್ ಕಟ್ಟಡದ ಎದುರು, ರೇಸ್‍ಕೋರ್ಸ್ ರಸ್ತೆ, ಮಡಿಕೇರಿ ಇಲ್ಲಿಂದ ಪಡೆದು ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಫೆಬ್ರವರಿ 10 ರೊಳಗೆ ಕಚೇರಿಗೆ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 08272-221656 ಅನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+