Get Updates
Get notified of breaking news, exclusive insights, and must-see stories!

KFD Recruitment; 310 ಅರಣ್ಯ ವೀಕ್ಷಕ ಹುದ್ದೆ, ವಿವರ

ಬೆಂಗಳೂರು, ಸೆಪ್ಟೆಂಬರ್ 17; ಕರ್ನಾಟಕದ ಅರಣ್ಯ ಇಲಾಖೆ ಅರಣ್ಯ ವೀಕ್ಷಕ (Forest Watcher) ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 13 ವಲಯಗಳ 310 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತರು ಅರ್ಜಿ ಸಲ್ಲಿಕೆ ಮಾಡಲು ಅಕ್ಟೋಬರ್ 26 ಕೊನೆಯ ದಿನವಾಗಿದೆ.

ಅರಣ್ಯ ಇಲಾಖೆಯಲ್ಲಿ ವಿವಿಧ ವೃತ್ತಗಳ ಹಂತದಲ್ಲಿ ಖಾಲಿ ಇರುವ ಅರಣ್ಯ ವೀಕ್ಷಕ ಹುದ್ದೆಗಳ ನೇರ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಸರ್ಕಾರದ ಪತ್ರ ದಿನಾಂಕ 27/04/2022 413 ಅರಣ್ಯ ವೀಕ್ಷಕ ಹುದ್ದೆಗಳಲ್ಲಿ ವೃಂದ ಮತ್ತು ನೇಮಕಾತಿ ನಿಯಮಾನುಸಾರ ನೇರ ನೇಮಕಾತಿ ಮುಖಾಂತರ ಹುದ್ದೆ ಭರ್ತಿ ಮಾಡಿಕೊಳ್ಳಲು ಸರ್ಕಾರದ ಅನುಮತಿ ಪತ್ರವನ್ನು ಉಲ್ಲೇಖಿಸಲಾಗಿದೆ.

forest-department-recruitment-2023

ಅರಣ್ಯ ಇಲಾಖೆಯಲ್ಲಿ 2019-20, 2021-21 ಹಾಗೂ 2021-22ನೇ ಸಾಲಿನಲ್ಲಿ ಹೊಸದಾಗಿ ಸೃಜಿಸಲಾದ 413 ಅರಣ್ಯ ವೀಕ್ಷಕ ಹುದ್ದೆಗಳನ್ನು ಚಾಲ್ತಿಯಲ್ಲಿರುವ ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿ, ನೇಮಕಾತಿ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಹಾಗೂ ಮುಂದುವರೆಸಲು ಅನುಮತಿ ನೀಡಲಾಗಿದೆ.

ವೃಂದ ಮತ್ತು ನೇಮಕಾತಿ ನಿಯಮಗಳ ಷೆಡ್ಯೂಲ್-IIರ ಕ್ರಮ ಸಂಖ್ಯೆ 53ರಲ್ಲಿರುವ ಅರಣ್ಯ ವೀಕ್ಷಕ ವೃಂದದ ನೇಮಕಾತಿ ನಿಯಮಗಳನ್ವಯ ಶೇಕಡ 75ರಷ್ಟು ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಬೇಕಾಗಿದ್ದು, ಅದರನ್ವಯ 310 ಅರಣ್ಯ ವೀಕ್ಷಕ ಹುದ್ದೆಗಳಿಗೆ ನೇರ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಯಾವ ವೃತ್ತಕ್ಕೆ ಎಷ್ಟು ಅರಣ್ಯ ವೀಕ್ಷಕ ಹುದ್ದೆಗಳು ಎಂದು ಪಟ್ಟಿ ಮಾಡಿ, ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅಧಿಸೂಚನೆಯನ್ನು ಸಿದ್ಧಪಡಿಸಲಾಗಿದೆ. ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ ಅರ್ಜಿಗಳನ್ನು ಪಡೆಯಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದ ಸೂಚನೆ ನೀಡಲಾಗಿದೆ.

ವೃತ್ತ ಮತ್ತು ಹುದ್ದೆಗಳ ಸಂಖ್ಯೆ; ಬೆಂಗಳೂರು ವೃತ್ತ 33, ಬೆಳಗಾವಿ ವೃತ್ತ 20, ಬಳ್ಳಾರಿ ವೃತ್ತ 20, ಚಾಮರಾಜನಗರ ವೃತ್ತ 32, ಚಿಕ್ಕಮಗಳೂರು ವೃತ್ತ 25, ಧಾರವಾಡ 7, ಹಾಸನ 20, ಕೆನರಾ 32, ಕೊಡಗು 16, ಕಲಬುರಗಿ 23, ಮಂಗಳೂರು 20, ಮೈಸೂರು 32, ಶಿವಮೊಗ್ಗ ವೃತ್ತದಲ್ಲಿ 30 ಹುದ್ದೆಗಳು.

ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಅರಣ್ಯ ವೀಕ್ಷಕ ವೃಂದದ ಆಯ್ಕೆ ಪ್ರಾಧಿಕಾರವಾದ ಸಂಬಂಧಿಸಿದ ವೃತ್ತಗಳ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ/ ಅರಣ್ಯ ಸಂರಕ್ಷಣಾಧಿಕಾರಿಗಳು ನೇಮಕಾತಿ ಅಧಿಸೂಚನೆಯನ್ನು ದಿನಾಂಕ 19/9/2023ರಂದು ಹೊರಡಿಸಿ, ದಿನಾಂಕ 21/9/2023ರಂದು ಕರ್ನಾಟಕ ರಾಜ್ಯ ಪತ್ರದಲ್ಲಿ ಇ- ಗೆಜೆಟ್ ಮೂಲಕ ಅಧಿಸೂಚನೆಯನ್ನು ಅಧಿಸೂಚಿಸಬೇಕು.

ಅಲ್ಲದೆ, ಎರಡು ಪ್ರಮುಖ ಕನ್ನಡ ದಿನ ಪತ್ರಿಕೆಗಳಲ್ಲಿ ಅಧಿಸೂಚನೆಯನ್ನು ಸಂಕ್ಷಿಪ್ತವಾಗಿ ಪಕಟಿಸಿ ದಿನಾಂಕ 27/09/2023 ರಿಂದ 26/10/2023ರ ವರೆಗಿನ ಅವಧಿಯಲ್ಲಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ ಅರ್ಜಿಗಳನ್ನು ಪಡೆಯಲು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲು ಹಾಗೂ ರೋಸ್ಟರ್ ಮತ್ತು ಖಾಲಿ ಹುದ್ದೆಗಳ ವಹಿಯನ್ನು ಸಮರ್ಪಕವಾಗಿ ನಿರ್ವಹಿಸಲು ಸೂಚಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+