ಕರ್ನಾಟಕ : ಉಗ್ರಾಣ ನಿಗಮದಲ್ಲಿ ಕೆಲಸ ಖಾಲಿ ಇದೆ

Posted By:
Subscribe to Oneindia Kannada

ಬೆಂಗಳೂರು, ಮೇ 09 : ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ವೃಂದ ಮತ್ತು ವೃಂದ ನೇಮಕಾತಿ ನಿಯಮಾವಳಿಗಳು 2005 ಮತ್ತು ತಿದ್ದುಪಡಿ 2007ರ ಅನ್ವಯ 'ಎ', 'ಬಿ' ಮತ್ತು 'ಸಿ' ದರ್ಜೆಗಳ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಜೂನ್ 4, 2016. ಅರ್ಜಿ ಶುಲ್ಕವನ್ನು ಪಾವತಿ ಮಾಡಲು ಕೊನೆಯ ದಿನಾಂಕ ಜೂನ್ 6. [ಎಸ್ ಬಿಐನಲ್ಲಿ 2200 ಹುದ್ದೆಗಳಿವೆ ಈಗಲೇ ಅರ್ಜಿ ಹಾಕಿ]

job

ಹುದ್ದೆಗಳು : ಗ್ರೂಪ್ 'ಎ' ಉಪ ಪ್ರಧಾನ ವ್ಯವಸ್ಥಾಪಕರು/ಪ್ರಾದೇಶಿಕ ವ್ಯವಸ್ಥಾಪಕರು 2, ಉಪ ವ್ಯವಸ್ಥಾಪಕರು (ಫೀಲ್ಡ್) 03, ಗ್ರೂಪ್ 'ಬಿ' ಸಹಾಯಕ ವ್ಯವಸ್ಥಾಪಕರು 8, ಉಗ್ರಾಣ ವ್ಯವಸ್ಥಾಪಕರು ದರ್ಜೆ - 1 10. [ನೇಮಕಾತಿ ಆದೇಶ ಕನ್ನಡದಲ್ಲಿ ಓದಿ]

ಗ್ರೂಪ್ 'ಸಿ' ಉಗ್ರಾಣ ವ್ಯವಸ್ಥಾಪಕರು ದರ್ಜೆ - 2 14, ಕಿರಿಯ ಅಭಿಯಂತರರು (ಸಿವಿಎಲ್) 3, ಆಂತರಿಕ ಲೆಕ್ಕಪರಿಶೋಧಕರು/ಲೆಕ್ಕಿಗರು ಹಾಗೂ ಖಜಾಂಚಿ 2, ತಾಂತ್ರಿಕ ಸಹಾಯಕರು 48, ಹಿರಿಯ ಗುಮಾಸ್ತರು/ಸ್ವಾಗತಗಾರರು 10, ಲೆಕ್ಕಿಗರು 11, ಚಾಲಕರು 3. [ಕೊಪ್ಪಳದಲ್ಲಿ ಮೇ 13ರಂದು ಉದ್ಯೋಗ ಮೇಳ]

ವಯೋಮಿತಿ : ಸಾಮಾನ್ಯ ಅರ್ಹತೆ 35 ವರ್ಷ. ಪ್ರವರ್ಗ 2ಎ/2ಬಿ/3ಎ/3ಬಿ 38 ವರ್ಷಗಳು. ಪ.ಜಾ/ಪ.ಪಂ/ಪ್ರವರ್ಗ 40 ವರ್ಷಗಳು. [ಅರ್ಜಿ ಸಲ್ಲಿಸಲು ವಿಳಾಸ]

ಅರ್ಜಿ ಶುಲ್ಕ : ಅಭ್ಯರ್ಥಿಗಳು ಪಾವತಿ ಮಾಡಬೇಕಾದ ಶುಲ್ಕ ಸಾಮಾನ್ಯ ವರ್ಗ/ಪ್ರವರ್ಗ 2 (ಎ)/2 (ಬಿ) /3 (ಎ) /3 (ಬಿ) ಸೇರಿದ ಅಭ್ಯರ್ಥಿಗಳಿಗೆ 500 ರೂ., ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ -1/ ಮಾಜಿ ಸೈನಿಕ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 250 ರೂ..

ಉದ್ಯೋಗವಕಾಶಗಳು

* ಕೇಂದ್ರ ಲೋಕಸೇವಾ ಆಯೋಗ ಭಾರತ ಅರಣ್ಯ ಸೇವೆ (ಐಎಫ್‌ಎಸ್)ಯಲ್ಲಿ 110 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಮೇ 27 ಕೊನೆಯ ದಿನವಾಗಿದೆ. [ವಿವರಗಳಿಗೆ ಕ್ಲಿಕ್ ಮಾಡಿ]

* ಬೆಂಗಳೂರು ದೂರದರ್ಶನ ಕೇಂದ್ರದ ಪ್ರಾದೇಶಿಕ ಸುದ್ದಿ ವಿಭಾಗವು ಜಿಲ್ಲಾ ಕೇಂದ್ರಗಳಲ್ಲಿ ಸ್ಟ್ರಿಂಜರ್‌ಗಳಾಗಿ ಕಾರ್ಯನಿರ್ವಹಿಸಲು ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಮೇ 13, 2016 ಅರ್ಜಿ ಸಲ್ಲಿಸಲು ಕೊನೆಯ ದಿನ. [ವಿವರಗಳು ಇಲ್ಲಿವೆ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka State Warehousing Corporation (KSWC) invited application for various posts. June 4, 2016 last date for submit application.
Please Wait while comments are loading...