Get Updates
Get notified of breaking news, exclusive insights, and must-see stories!

ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕರ ಹುದ್ದೆಗೆ ಅರ್ಜಿ ಆಹ್ವಾನ

ಬೆಂಗಳೂರು, ಜುಲೈ. 11: ಸರ್ಕಾರದ ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ)ಗೆ ಸಂಯೋಜನೆಯಾಗಿರುವ ನೋಂದಾಯಿತ ಸ್ವಾಯತ್ತ ಸಂಸ್ಥೆಯಾದ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕರ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕೆಎಸ್‌ಎನ್‌ಡಿಎಂಸಿಯ ನಿರ್ದೇಶಕರ ಹುದ್ದೆಗೆ ನಿಯೋಜನೆ ಆಧಾರದ ಮೇಲೆ ನೇಮಕಾತಿಗಾಗಿ ರಾಜ್ಯ / ಕೇಂದ್ರ ಸರ್ಕಾರದಲ್ಲಿ ಅಥವಾ ರಾಜ್ಯ / ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಯ ವೇತನ ಶ್ರೇಣಿ ರೂ. 90,500 ರಿಂದ 1,23,300 ಇದೆ. ಹೆಚ್ಚಿನ ಶ್ರೇಣಿಗಳಿಗೆ ವೇತನ ರಕ್ಷಣೆಯನ್ನು ನೀಡಲಾಗುವುದು. ಅಭ್ಯರ್ಥಿಯು ಕನ್ನಡದಲ್ಲಿ ವ್ಯವಹಾರ ಜ್ಞಾನ ಹೊಂದಿರುವುದರ ಜೊತೆಗೆ ಕೆಳಕಂಡ ಕನಿಷ್ಠ ಅಗತ್ಯ ವಿದ್ಯಾರ್ಹತೆ ಮತ್ತು ಅನುಭವ ಹೊಂದಿರಬೇಕು.

Karnataka State Natural Disaster Monitoring Center

1 . ಭೂವಿಜ್ಞಾನ/ ಅನ್ವಯಿಕ ಭೂ ವಿಜ್ಞಾನ / ಹೈಡ್ರಾಲಜಿ / ಅಗ್ರೋ ಮೀಟಿಯರಾಲಜಿ/ಭೌತಶಾಸ್ತ್ರ/ ಕೃಷಿ ವಿಜ್ಞಾನ(ಅಗ್ರಾನಮಿ) ವಿಷಯದಲ್ಲಿ ಸ್ನಾತಕೋತ್ತರ ಪದವಿ.

2. ಸ್ನಾತಕೋತ್ತರ ಪದವಿಯಲ್ಲಿ ಅಧ್ಯಯನ ಮಾಡಿರುವ ವಿಷಯದಲ್ಲಿ ಪಿಹೆಚ್. ಡಿ ಪದವಿ.

3. ಸಂಬಂಧಪಟ್ಟ ಕ್ಷೇತ್ರದಲ್ಲಿ 20 ವರ್ಷಗಳ ಅನುಭವ (ಖಾಯಂ ಸೇವೆ). ಇದರಲ್ಲಿ 6 ವರ್ಷ ಪ್ರಧಾನ ವೈಜ್ಞಾನಿಕಾಧಿಕಾರಿ/ಜಂಟಿ ನಿರ್ದೇಶಕ ಅಥವಾ ತತ್ಸಮಾನ ದರ್ಜೆಯಲ್ಲಿ ಅನುಭವ ಹೊಂದಿರಬೇಕು.

4 . ಹೊರಗಿನ ಅಭ್ಯರ್ಥಿಗಳಿಗೆ ವಯಸ್ಸು 50 ವರ್ಷಗಳಿಗೆ ಮೇಲ್ಪಟ್ಟಿರಬೇಕು ಮತ್ತು 55 ವರ್ಷಗಳಿಗಿಂತ ಕೆಳಪಟ್ಟಿರಬೇಕು.

5. ಆಂತರಿಕ ಅಭ್ಯರ್ಥಿಗಳಿಗೆ ವಯಸ್ಸು 50 ವರ್ಷಗಳಿಗೆ ಮೇಲ್ಪಟ್ಟಿರಬೇಕು ಮತ್ತು 58 ವರ್ಷಗಳಿಗೆ ಕೆಳಪಟ್ಟಿರಬೇಕು.

ಹೆಚ್ಚಿನ ವಿವರಗಳನ್ನು www.ksndmc.org ವೆಬ್‌ಸೈಟ್‌ನಿಂದ ಪಡೆದುಕೊಳ್ಳಬಹುದು.

ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಅಧಿಕೃತ ದಾಖಲೆಗಳೊಂದಿಗೆ ತಮ್ಮ ಮೇಲಾಧಿಕಾರಿಯ ಅನುಮೋದನೆಯೊಂದಿಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ), ಕರ್ನಾಟಕ ಸರ್ಕಾರ, ಕೊಠಡಿ ಸಂಖ್ಯೆ 627, 6 ನೇ ಮಹಡಿ, 1 ನೇ ಗೇಟ್, ಬಹುಮಹಡಿ ಕಟ್ಟಡ, ಬೆಂಗಳೂರು- 560001 ವಿಳಾಸಕ್ಕೆ ನೊಂದಾಯಿತ ಅಂಚೆಯ ಮೂಲಕ ಅಥವಾ ಇ-ಮೇಲ್ [email protected], [email protected] ಗೆ ದಿನಾಂಕ:10.08.2023 ರೊಳಗೆ ಸಲ್ಲಿಸಬೇಕು.

ಲಕೋಟೆಯ ಎಡಭಾಗದ ಮೂಲೆಯಲ್ಲಿ "ಕೆಎಸ್‌ಎನ್‌ಡಿಎಂಸಿಯ ನಿರ್ದೇಶಕರ ಹುದ್ದೆಗೆ ಅರ್ಜಿ" ಎಂದು ಬರೆದು ಅಗತ್ಯ ದೃಢೀಕೃತ ದಾಖಲೆಗಳನ್ನೊಳಗೊಂಡ ಅರ್ಜಿಯ ಲಕೋಟೆಯನ್ನು ಸಲ್ಲಿಸಬೇಕು. ಹೆಚ್ಚಿನ ವಿವರಗಳನ್ನು www.ksndmc.org ಇಂದ ಪಡೆದುಕೊಳ್ಳಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+