544 ಪಿಎಸ್‌ಐಗಳ ನೇಮಕಾತಿ ಅಧಿಸೂಚನೆ ಪ್ರಕಟ

Posted By: Staff
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 17 : ಕರ್ನಾಟಕ ಸರ್ಕಾರ 544 ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದೆ. ಸೆಪ್ಟೆಂಬರ್‌ 19ರ ಸೋಮವಾರದಿಂದ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ (ಡಿಎಆರ್‌, ಸಿಎಆರ್‌) 90, ವೈರ್‌ಲೆಸ್‌ ವಿಭಾಗದ 28, ಸಿವಿಲ್‌ ವಿಭಾಗದ 398 ಹಾಗೂ ಕೆಎಸ್‌ಆರ್‌ಪಿಯ 28 ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.[ಉತ್ತರ ಕನ್ನಡದಲ್ಲಿ 53 ಗ್ರಾಮ ಲೆಕ್ಕಿಗ ಹುದ್ದೆಗಳು ಖಾಲಿ ಇವೆ]

police

ನೇಮಕಾತಿಗೆ ಸಂಬಂಧಪಟ್ಟ ಮಾಹಿತಿಗಳನ್ನು www.ksp.gov.in ವೆಬ್‌ಸೈಟ್‌ನಲ್ಲಿ ನೋಡಬಹುದಾಗಿದೆ.[ಇಂಗ್ಲೀಷ್ ನಲ್ಲಿ ಹೆಚ್ಚಿನ ವಿವರಗಳನ್ನು ಪಡೆಯಲು ಕ್ಲಿಕ್ ಮಾಡಿ]

ಉದ್ಯೋಗದ ಮಾಹಿತಿಗಳು

* ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಹಾಗೂ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಹಲವು ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಸಹಾಯಕ ಇಂಜಿನಿಯರ್ 52, ಸಹಾಯಕ ಇಂಜಿನಿಯರ್ (ವಿದ್ಯುತ್ ) 416, ಸಹಾಯಕ ಇಂಜಿನಿಯರ್ (ಸಿವಿಲ್) 24, ಸಹಾಯಕ ಲೆಕ್ಕಾಧಿಕಾರಿ 206, ಕಿರಿಯ ಇಂಜಿನಿಯರ್ (ವಿದ್ಯುತ್) 409, ಕಿರಿಯ ಇಂಜಿನಿಯರ್ (ಸಿವಿಲ್) 12, ಸಹಾಯಕ 422, ಕಿರಿಯ ಸಹಾಯಕ 290 ಸೇರಿ 1921 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.[ವಿವರ ಇಲ್ಲಿದೆ]

* ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹಾಗೂ ಗ್ರಾಮ ಪ೦ಚಾಯಿತಿ ಕಾರ್ಯದರ್ಶಿ ಗ್ರೇಡ್‍-1 ವೃ೦ದದ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15/10/2016.[ವಿವರಕ್ಕಾಗಿ ಕ್ಲಿಕ್ ಮಾಡಿ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka police department released notification for the 544 police Sub inspector (PSI) recruitment. Candidates can apply form September 19, 2016.
Please Wait while comments are loading...