46 ಸಿವಿಲ್ ಪಿಎಸ್ಐ ಹುದ್ದೆಗಳಿಗೆ ಕರ್ನಾಟಕ ಪೊಲೀಸ್ ಅರ್ಜಿ ಆಹ್ವಾನ

Written By: Ramesh
Subscribe to Oneindia Kannada

ಬೆಂಗಳೂರು, ನವೆಂಬರ್. 17 : ಹೈದರಾಬಾದ್-ಕರ್ನಾಟಕ ಪ್ರದೇಶಮತ್ತು ಹೈ-ಕ ಯೇತ್ತರ ಅಭ್ಯರ್ಥಿಗಳಿಗೆ 46 ಪೊಲೀಸ್ ಸಬ್‍ಇನ್ಸ್ ಪೆಕ್ಟರ್ ಹುದ್ದೆಗಳಿಗೆ ಪುರುಷ ಮತ್ತು ಮಹಿಳೆಯಿರಿಗೆ ಕರ್ನಾಟಕ ಪೊಲೀಸ್ ಇಲಾಖೆ(ಕೆಎಸ್ ಪಿ) ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ನವೆಂಬರ್ 15 ರಿಂದ ಆನ್ ಲೈನ್ ಅರ್ಜಿ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಡಿಸೆಂಬರ್ 07 ಕೊನೆ ದಿನವಾಗಿದೆ. ಇನ್ನು ಅರ್ಜಿ ಶುಲ್ಕವನ್ನು ಡಿಸೆಂಬರ್ 09ರ ಒಳಗೆ ತುಂಬಬೇಕು.

ನಿಗದಿತ ಶುಲ್ಕವನ್ನು ಎಸ್‍ಬಿಎಂ/ಎಸ್‍ಬಿಚ್ ಬ್ಯಾಂಕಿನ ಯಾವುದಾದರೂ ಶಾಖೆಗಳಲ್ಲಿ ಬ್ಯಾಂಕಿನ ವೇಳೆಯಲ್ಲಿ ಚಲನ್ ನೀಡಿ ಹಣ ಪಾವತಿಸಬಹುದು.

karnataka psi recruitment notification 2016-17

ಹೈದ್ರಬಾದ್ ಕರ್ನಾಟಕ ಒಳಪಟ್ಟವರಿಗೆ:
ಎ) ಪೊಲೀಸ್ ಸಬ್‍ಇನ್ಸ್ ಪೆಕ್ಟರ್ (ಸಿವಿಲ್) ಪುರುಷ (ಸ್ಥಳೀಯ) 24 ಹುದ್ದೆಗಳು.
ಬಿ) ಮಹಿಳಾ ಪೊಲೀಸ್ ಸಬ್‍ಇನ್ಸ್ ಪೆಕ್ಟರ್ (ಸಿವಿಲ್) - 07.
ಸಿ) ಪೊಲೀಸ್ ಸಬ್‍ಇನ್ಸ್ ಪೆಕ್ಟರ್ (ಸಿವಿಲ್) ಸೇವೆಯಲ್ಲಿರುವವರಿಗೆ - 02
ಒಟ್ಟು:33

ಹೈ-ಕವಲ್ಲದ ಅಭ್ಯರ್ಥಿಗಳಿಗೆ:
ಎ) ಪೊಲೀಸ್ ಸಬ್‍ಇನ್ಸ್ ಪೆಕ್ಟರ್ (ಸಿವಿಲ್) ಪುರುಷ (ಪರಸ್ಥಳೀಯರು) - 09
ಬಿ) ಮಹಿಳಾ ಪೊಲೀಸ್ ಸಬ್‍ಇನ್ಸ್ ಪೆಕ್ಟರ್ (ಸಿವಿಲ್) - 02
ಸಿ) ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ (ಸಿವಿಲ್) ಸೇವೆಯಲ್ಲಿರುವವರಿಗೆ - 02
ಒಟ್ಟು:13

ವಿದ್ಯಾರ್ಹತೆ: ಯು.ಜಿ.ಸಿ. ಇಂದ ಮಾನ್ಯತೆ ಪಡೆದಿರುವ ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಪದವಿ ಅಥವಾ ತತ್ಸಮಾನ ಪದವಿಯನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ, ಅಂದರೆ 07.12.2016ಕ್ಕೆ ಹೊಂದಿರಬೇಕು.
ವೇತನ ಶ್ರೇಣಿ: 20000-500-21000-600-24600-700-28800-800-33600-900-36300.

ವಯಸ್ಸು: 21 ರಿಂದ 28 ಇರಬೇಕು. ಇನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 2 ವರ್ಷ ಹೆಚ್ಚಳವಿರಲಿದೆ(30).

ಅರ್ಜಿ ಶುಲ್ಕ: ಸಾಮಾನ್ಯ ವರ್ಗದವರಿಗೆ 250 ರು, ಎಸ್ ಸಿ ಹಾಗೂ ಎಸ್ ಸ್ಟಿ ಅಭ್ಯರ್ಥಿಗಳಿಗೆ 100 ರು.

ಆಯ್ಕೆ ವಿದಾನ: ಲಿಖಿತ ಪರೀಕ್ಷೆ, ದೇಹದಾಢ್ಯತೆ ಪರೀಕ್ಷೆ, ಹಾಗೂ ಸಂದರ್ಶನ ಮೂಲಕ ಅಭ್ಯರ್ಥಿಗಳು ಆಯ್ಕೆ ಮಾಡಲಾಗುತ್ತದೆ.

ಇಂಗ್ಲೀಷ್ ನಲ್ಲಿ ತಿಳಿಯಲು ಇಲ್ಲಿ ಕ್ಲಿಕ್ಕಿಸಿ. ಕರ್ನಾಟಕ ಪೊಲೀಸ್ ಹೊರಡಿಸಿದ ಅಧಿಸೂಚೆನೆಗಾಗಿ ಇಲ್ಲಿ ಕ್ಲಿಕ್ಕಿಸಿ .

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Karnataka police department released notification for the 46 police Sub inspector (PSI) recruitment. The last date for submission of online application is December 07, 2016.
Please Wait while comments are loading...