Doctors Recruitment: ವರ್ಗಾವಣೆ ಪೋಸ್ಟಿಂಗ್‌ನಿಂದ ಖಾಲಿ ವೈದ್ಯ ಹುದ್ದೆಗಳು ಭರ್ತಿ

ಬೆಂಗಳೂರು, ಡಿಸೆಂಬರ್ 05: ರಾಜ್ಯದಲ್ಲಿ ಬಳ್ಳಾರಿ ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣ ಸಂಚಲನ ಸೃಷ್ಟಿ ಮಾಡಲಾಗಿದೆ. ಇದರ ಬೆನ್ನಲ್ಲೆ ಕರ್ನಾಟಕ ಸರ್ಕರವು ಎಚ್ಚೆತ್ತುಕೊಂಡಂತಿದೆ. ಸಾರ್ವಜನಿಕ ಆರೋಗ್ಯ ಸೇವೆಯನ್ನು ಮತ್ತಷ್ಟು ಬಲಗೊಳಿಸಲು ಖಾಲಿ ಇದ್ದ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿದೆ. 'ವರ್ಗಾವಣೆ ಪೋಸ್ಟಿಂಗ್' ಕ್ರಮದ ಮೂಲಕ ಖಾಲಿ ಹುದ್ದೆಗಳು ಭರ್ತಿ ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗುರುವಾರ ಮಾಹಿತಿ ನೀಡಿದೆ.

ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪಾರದರ್ಶಕ ಕೌನ್ಸೆಲಿಂಗ್ ಮುಖಾಂತರ 47 ವೈದ್ಯರ ವರ್ಗಾವಣೆ ಕ್ರಮವನ್ನು ಯಶಸ್ವಿಯಾಗಿ ನಡೆಸಿದೆ. ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಬಲಪಡಿಸುವ ಉದ್ದೇಶದಿಂದ ಖಾಲಿ ಹುದ್ದೆಗಳಿಗೆ ಅರ್ಹರನ್ನು ಬಡ್ತಿ ಸಮೇತ ವರ್ಗಾವಣೆ ಮಾಡಿ ಭರ್ತಿ ಮಾಡಿಕೊಳ್ಳಲಾಗಿದೆ. ಸರ್ಕಾರದ ಈ ಕ್ರಮದಿಂದ ರಾಜ್ಯಾದ್ಯಂತ ಪರಿಣಾಮಕಾರಿ ವೈದ್ಯಕೀಯ ಸೇವೆಯನ್ನು ಖಚಿತಪಡಿಸಲಾಗಿದೆ.

Karnataka Health and Family Welfare Department Filled 47 Doctor Posts Through Transfer

ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವ ಇಲಾಖೆ ಬದ್ಧತೆಗೆ ಅನುಗುಣವಾಗಿ ನಡೆಸಲಾದ ಈ ವರ್ಗಾವಣೆ ಪ್ರಕ್ರಿಯೆಯಿಂದ ರಾಜ್ಯಾದ್ಯಂತ ಖಾಲಿ ಇರುವ ತಾಲ್ಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ (PHC), ಸಮುದಾಯ ಆರೋಗ್ಯ ಕೇಂದ್ರಗಳ (CHC) ಸಾಮರ್ಥ್ಯ ಹೆಚ್ಚಿಸಲಾಗಿದೆ. ಇದರಿಂದ ಆಯಾ ಭಾಗದ ರೋಗಿಗಳಿಗೆ ತ್ವರಿತ ವೈದ್ಯಕೀಯ ಉಪಚಾರ ಸಿಗಲಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಹೊಸದಾಗಿ ವರ್ಗಾವಣೆಗೊಂಡ ವೈದ್ಯರ ಆರೋಗ್ಯ ವ್ಯವಸ್ಥೆಯಲ್ಲಿ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸಲಾಗಿದೆ. ಗುಣಮಟ್ಟದ ಆದ್ಯತೆ ನೀಡುವ ಗುರಿಯೊಂದಿಗೆ ಆರೋಗ್ಯ ವಲಯದಲ್ಲಿ ದೃಢವಾದ ವ್ಯವಸ್ಥೆ ನಿರ್ಮಿಸುವ ಧೈಯದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಈ ಹುದ್ದೆಗಳನ್ನು ಭರ್ತಿ ಮಾಡಿಕೊಂಡಿದೆ.

ಆರೋಗ್ಯಕರ ಕರ್ನಾಟಕ ನಿರ್ಮಾಣಕ್ಕಾಗಿ ಸರ್ಕಾರದ ಆಶಯಕ್ಕೆ ಬಾಕಿ ಉಳಿದ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಮತ್ತು ಸೇವಾ ಸೌಲಭ್ಯಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ. "ನಿಮ್ಮ ಆರೋಗ್ಯ ನಮ್ಮ ಆದ್ಯತೆ" ಎಂಬ ಇಲಾಖೆ ಘೋಷವಾಕ್ಯದಂತೆ ಜನೋಪಯೋಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಇಲಾಖೆಯು ಪ್ರಕಟಣೆ ಮೂಲಕ ತಿಳಿಸಿದೆ.

ಬಾಣಂತಿಯರ ಸಾವು: ತನಿಖೆಗೆ ತಜ್ಞರ ಸಮಿತಿ ರಚನೆ

ಬಳ್ಳಾರಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಒಟ್ಟು ಹತ್ತು ಮಂದಿ ಮಹಿಳೆಯರ ಸಾವು ಪ್ರಕರಣಕ್ಕೆ ಕಳಪೆ ಔಷಧಿ, ಸರ್ಕಾರ ಮತ್ತು ವೈದ್ಯಾಧಿಕಾರಿಗಳ ನಿರ್ಲಕ್ಷ್ಯ ಕಾರಣ ಎಂದು ಹೇಳಲಾಗುತ್ತಿದೆ. ಈ ಪ್ರಕರಣ ಸಂಬಂಧ ಸರ್ಕಾರ ಕೆಲವರನ್ನು ಅಮಾನತು ಮಾಡಿತು. ಬಳಿಕ ವಿಪಕ್ಷಗಳ ನಿರಂತರ ಒತ್ತಡ ಮೇರೆಗೆ ಪ್ರಕರಣದ ತನಿಖೆಗೆ ತಜ್ಞರ ಸಮಿತಿ ರಚನೆ ಮಾಡಿದೆ.

ತಜ್ಞರಾದ ಡಾ.ಹರ್ಷ, ಡಾ.ಸವಿತಾ ಹಾಗೂ ಡಾ. ಭಾಸ್ಕರ್ ಅವರು ಇರುವ ಈ ಸಮಿತಿಯು ಬಾಣಂತಿಯರ ಸಾವಿಗೆ ನಿಖರ ಕಾರಣವೇನು, ತಪ್ಪಾಗಿದ್ದೆಲ್ಲಿ?, ಕಳಪೆ ಔಷಧಿ ಸರಬರಾಜಿನಿಂದ ಹೀಗಾಯಿತಾ ಎಂದೆಲ್ಲವನ್ನು ಸಮಿತಿ ತನಿಖೆ ಮಾಡಿ ಸರ್ಕಾರಕ್ಕೆ ತುರ್ತು ವರದಿ ನೀಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+