Karnataka Govt Jobs: ಮಹತ್ವದ ಮಾಹಿತಿ: ವಿವಿಧ ಇಲಾಖೆಗಳ ನೇಮಕಾತಿಗಳ ಸಂಕ್ಷಿಪ್ತ ಪಟ್ಟಿ, ಅರ್ಹರು ಗಮನಿಸಿ
ಬೆಂಗಳೂರು, ಮೇ 13: ಕರ್ನಾಟಕ ರಾಜ್ಯ ಸರ್ಕಾರವು ಈ ವರ್ಷ ಅತ್ಯಧಿಕ ಉದ್ಯೋಗಿಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಅಗತ್ಯಕ್ಕನುಗುಣವಾಗಿ ಆಯಾ ಸರ್ಕಾರಿ ಇಲಾಖೆಗಳು ತಮ್ಮಲ್ಲಿ ಖಾಲಿ ಇರುವ ಸಾವಿರಾರು ಹುದ್ದೆಗಳ ನೇಮಕಾತಿ ನಡೆಸುತ್ತಿವೆ. ನಿರುದ್ಯೋಗಿಗಳು ಹಾಗೂ ಆಸಕ್ತ ಅಭ್ಯರ್ಥಿಗಳು ಸರ್ಕಾರಿ ಉದ್ಯೋಗ ಬಯಸಿದ್ದರೆ ಇಲ್ಲಿನ ಸಂಕ್ಷಿಪ್ತ ಮಾಹಿತಿ ತಿಳಿಯಿರಿ.
ಕರ್ನಾಟಕ ರಾಜ್ಯ ಸರ್ಕಾರದ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ, ಕೇಂದ್ರ ವ್ಯಾಪ್ತಿಯ ರೈಲ್ವೇ ಪೋಲೀಸ್, ಕೇಂದ್ರ ಸಶಸ್ತ್ರ ಪೋಲೀಸ್, ಬಿಎಂಟಿಸಿ ಹಾಗೂ ಹಿಂದುಳಿದ ವರ್ಗಗಳ ಇಲಾಖೆಗಳಲ್ಲಿ ಖಾಲಿ ಹುದ್ದೆಗಳಿಗೆ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹಾಗಾದರೆ ಯಾವೆಲ್ಲ ಇಲಾಖೆಗಳಲ್ಲಿ ಎಷ್ಟು ಹುದ್ದೆ ಖಾಲಿ ಇವೆ, ವಿದ್ಯಾರ್ಹತೆ ಏನಿರಬೇಕು? ಉದ್ಯೋಗ ಸ್ಥಳ, ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ಮಾಹಿತಿ, ಪಟ್ಟಿ ಇಲ್ಲಿದೆ.
1. ಗ್ರಾಮೀಣಾಭಿವೃದ್ಧಿ-ಪಂಚಾಯತ್ ರಾಜ್ ಇಲಾಖೆ
* ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ನೇಮಕಾತಿ
* ಖಾಲಿ ಹುದ್ದೆಗಳ ಸಂಖ್ಯೆ: 247
* ಶೈಕ್ಷಣಿಕ ಅರ್ಹತೆ : ಯಾವುದೇ ಪದವಿ
* ಉದ್ಯೋಗ ಸ್ಥಳ: ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಉದ್ಯೋಗ/ ನೇಮಕಾತಿ
* ಅರ್ಜಿ ಕಡೆಯ ದಿನ: 2024 ಮೇ 15.
2. ಕಂದಾಯ ಇಲಾಖೆ ನೇಮಕಾತಿ-2024
* ಹಿಂದುಳಿದ ವರ್ಗಗಳ ಇಲಾಖೆ ತಾಲೂಕು
* ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ನೇಮಕಾತಿ
* ಒಟ್ಟು ಹುದ್ದೆಗಳ ಸಂಖ್ಯೆ: 1000
* ಶೈಕ್ಷಣಿಕ ಅರ್ಹತೆ: PUC/ITI/Deploma
* ಪೋಸ್ಟಿಂಗ್ ಎಲ್ಲಿ?: ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಉದ್ಯೋಗ/ ನೇಮಕಾತಿ
* ಅರ್ಜಿ ಸಲ್ಲಿಕೆ ಕೊನೆ ದಿನ: 2024 ಮೇ 15.

3. ರೈಲ್ವೆ ಇಲಾಖೆ ನೇಮಕಾತಿ -2024
* ರೈಲ್ವೇ ಪೋಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ
* ಖಾಲಿ ಹುದ್ದೆಗಳ ಸಂಖ್ಯೆ : 4208
* ವಿದ್ಯಾರ್ಹತೆ : 10 ನೇ ತರಗತಿ (SSLC)
* ಅರ್ಜಿ ಸಲ್ಲಿಕೆ ಕಡೆಯ ದಿನ: 2024 ಮೇ 14.
4. ರೈಲ್ವೆ ಇಲಾಖೆ ನೇಮಕಾತಿ -2024
* ರೈಲ್ವೇ ಪೋಲೀಸ್ ಸಬ್ ಇನ್ಸಪೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ
* ಒಟ್ಟು ಖಾಲಿ ಹುದ್ದೆಗಳ ಸಂಖ್ಯೆ: 452
* ಶೈಕ್ಷಣಿಕ ಅರ್ಹತೆ : ಯಾವುದೇ ಪದವಿ
* ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 2024 ಮೇ 14.
5. ಕೇಂದ್ರ ಗೃಹ ಇಲಾಖೆ ನೇಮಕಾತಿ-2024
* ಕೇಂದ್ರ ಸಶಸ್ತ್ರ ಪೋಲೀಸ್-CRPF ಅಸಿಸ್ಟೆಂಟ್ ಕಮಾಂಡೆಂಟ್ ಹುದ್ದೆಗಳು
* ಎಷ್ಟು ಹುದ್ದೆಗಳಿವೆ : 506
* ವಿದ್ಯಾರ್ಹತೆ ಏನಿರಬೇಕು : ಯಾವುದೇ ಪದವಿ
* ಅರ್ಜಿ ಸಲ್ಲಿಕೆ ಕೊನೆ ದಿನಾಂಕ : 2024 ಮೇ 14.
6. ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ನೇಮಕಾತಿ-2024
* ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ವಿಸ್ತರಣಾಧಿಕಾರಿ ಹುದ್ದೆಗಳು
* ಒಟ್ಟು ಹುದ್ದೆಗಳ ಸಂಖ್ಯೆ : 50
* ಶೈಕ್ಷಣಿಕ ಅರ್ಹತೆ : ಬಿ.ಕಾಂ ಆಗಿರಬೇಕು
* ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 2024 ಮೇ 28.
7. ಹಿಂದುಳಿದ ವರ್ಗಗಳ ಇಲಾಖೆ ನೇಮಕಾತಿ-2024
* ಹಿಂದುಳಿದ ವರ್ಗಗಳ ಇಲಾಖೆ ತಾಲೂಕು ಅಧಿಕಾರಿ ಹುದ್ದೆಗಳು
* ಖಾಲಿ ಹುದ್ದೆಗಳು : 21
* ವಿದ್ಯಾರ್ಹತೆ : ಯಾವುದೇ ಪದವಿ ಆಗಿರಬೇಕು
* ಅರ್ಜಿ ಸಲ್ಲಿಕೆ ಕಡೆಯ ದಿನಾಂಕ : 2024 ಮೇ 14.
8. ಸಾರಿಗೆ ಇಲಾಖೆ ನೇಮಕಾತಿ-2024
* BMTC ನಿರ್ವಾಹಕ ಹುದ್ದೆಗಳು
* ಒಟ್ಟು ಹುದ್ದೆಗಳ ಸಂಖ್ಯೆ : 3500
* ಶೈಕ್ಷಣಿಕ ಅರ್ಹತೆ : ದ್ವಿತೀಯ PUC ಪಾಸ್
* ಅರ್ಜಿ ಸಲ್ಲಿಕೆ ಕಡೆಯ ದಿನ: 2024 ಮೇ 18.
ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕವರೆಗೆ ಕಾಯದೇ ಈ ಕೂಡಲೇ ಅರ್ಜಿಗಳನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಆಯಾ ಇಲಾಖೆಗಳ ಅಧಿಕೃತ ಜಾಲತಾಣಗಳಿಗೆ ಭೇಟಿ ನೀಡಬಹುದು ಎಂದು ನೇಮಕಾತಿ ಅಧಿಸೂಚನೆಗಳು ತಿಳಿಸಿವೆ.












Click it and Unblock the Notifications