ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ; ಒಟ್ಟು ಮಂಜೂರಾಗಿರುವ, ಖಾಲಿ ಇರುವ ಹುದ್ದೆಗಳ ವಿವರ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 30; ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹುದ್ದೆಗಳು ಖಾಲಿ ಇರುವ ಬಗ್ಗೆ ಸದಾ ಚರ್ಚೆ ನಡೆಯುತ್ತದೆ. ಖಾಲಿ ಹುದ್ದೆಗಳನ್ನು ಸರ್ಕಾರ ಭರ್ತಿ ಮಾಡಿದರೆ ಆಡಳಿತ ಯಂತ್ರ ಚುರುಕಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತದೆ. ಹಾಗಾದರೆ ಖಾಲಿ ಇರುವ ಹುದ್ದೆಗಳು ಎಷ್ಟು?.

ಕರ್ನಾಟಕ ಸರ್ಕಾರ ವಿಧಾನ ಮಂಡಲದ ಮುಂಗಾರು ಅಧಿವೇಶನದಲ್ಲಿ ಸರ್ಕಾರದ ವಿವಿಧ ಇಲಾಖೆಗಳಿಗೆ ಒಟ್ಟು ಮಂಜೂರಾಗಿರುವ ಹುದ್ದೆಗಳು ಎಷ್ಟು?. ಭರ್ತಿ ಮಾಡಿರುವ ಹುದ್ದೆಗಳು ಎಷ್ಟು?, ಖಾಲಿ ಇರುವ ಹುದ್ದೆಗಳು ಎಷ್ಟು? ಎಂದು ಮಾಹಿತಿ ನೀಡಿದೆ.

ಕರ್ನಾಟಕ; ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳುಕರ್ನಾಟಕ; ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳು

ವಿಧಾನ ಪರಿಷತ್‌ ಕಲಾಪದಲ್ಲಿ ಕರ್ನಾಟಕ ಸರ್ಕಾರ ಈ ಕುರಿತು ಲಿಖಿತ ಉತ್ತರವನ್ನು ನೀಡಿದೆ. ಮಂಜೂರಾಗಿ, ಖಾಲಿ ಇರುವ ಹುದ್ದೆಗಳ ಪೈಕಿ ಗ್ರೂಪ್-ಸಿ ಮತ್ತು ಡಿ ವೃಂದಗಳಲ್ಲಿ ಅಂದಾಜು 82,700 ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಕರ್ನಾಟಕ; ವಿವಿಧ ಇಲಾಖೆಗಳಿಗೆ ಮಂಜೂರಾಗಿರುವ ಒಟ್ಟು ಹುದ್ದೆಗಳು ಕರ್ನಾಟಕ; ವಿವಿಧ ಇಲಾಖೆಗಳಿಗೆ ಮಂಜೂರಾಗಿರುವ ಒಟ್ಟು ಹುದ್ದೆಗಳು

ಎಲ್ಲಾ ಇಲಾಖೆಗಳು ಸೇರಿ ಒಟ್ಟು ಮಂಜೂರಾಗಿರುವ ಹುದ್ದೆಗಳು 7,69,981. ಭರ್ತಿಯಾಗಿರುವ ಹುದ್ದೆಗಳು 5,11,272 ಮತ್ತು ಖಾಲಿ ಇರುವ ಹುದ್ದೆಗಳು 2,58,709 ಆಗಿದೆ ಎಂದು ಸರ್ಕಾರ ತನ್ನ ಲಿಖಿತ ಉತ್ತರದಲ್ಲಿ ತಿಳಿಸಿದೆ.

ಕಲ್ಯಾಣ ಕರ್ನಾಟಕ; ಖಾಲಿ ಹುದ್ದೆಗಳು, ನೇಮಕಾತಿ ಮಾಡಬೇಕಾದ ಸಂಖ್ಯೆ ಕಲ್ಯಾಣ ಕರ್ನಾಟಕ; ಖಾಲಿ ಹುದ್ದೆಗಳು, ನೇಮಕಾತಿ ಮಾಡಬೇಕಾದ ಸಂಖ್ಯೆ

ಶಿಕ್ಷಣ, ಕಂದಾಯ, ಲೋಕೋಪಯೋಗಿ

ಶಿಕ್ಷಣ, ಕಂದಾಯ, ಲೋಕೋಪಯೋಗಿ

ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಇಲಾಖೆಗೆ ಒಟ್ಟು ಮಂಜೂರಾಗಿರುವ ಹುದ್ದೆಗಳು 2,81,862. ಭರ್ತಿಯಾಗಿರುವ ಹುದ್ದೆಗಳು 2,15,803 ಮತ್ತು ಖಾಲಿ ಇರುವ ಹುದ್ದೆಗಳು 66,059 ಆಗಿದೆ. ಲೋಕೋಪಯೋಗಿ ಇಲಾಖೆಗೆ ಮಂಜೂರಾದ ಹುದ್ದೆಗಳು 6,799. ಭರ್ತಿಯಾದ ಹುದ್ದೆಗಳು 4,736. ಖಾಲಿ ಇರುವ ಹುದ್ದೆಗಳು 2063 ಆಗಿದೆ. ಕಂದಾಯ ಇಲಾಖೆಗೆ ಮಂಜೂರಾದ ಹುದ್ದೆಗಳು 30,309 ಆಗಿದೆ. ಭರ್ತಿಯಾದ ಹುದ್ದೆಗಳು 21,688 ಆಗಿದೆ. ಖಾಲಿ ಇರುವ ಹುದ್ದೆಗಳು 10,621 ಆಗಿದೆ.

ರೇಷ್ಮೆ, ಪರಿಶಿಷ್ಟ ಪಂಗಡಗಳ ಕಲ್ಯಾಣ

ರೇಷ್ಮೆ, ಪರಿಶಿಷ್ಟ ಪಂಗಡಗಳ ಕಲ್ಯಾಣ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ 28,223 ಮಂಜೂರಾದ ಹುದ್ದೆಗಳು. ಭರ್ತಿಯಾದ ಹುದ್ದೆಗಳು 17,814 ಆಗಿದೆ. ಖಾಲಿ ಇರುವ ಹುದ್ದೆಗಳು10, 409 ಆಗಿದೆ. ಪರಿಶಿಷ್ಟ ಜಾತಿಗಳ ಕಲ್ಯಾಣ ಇಲಾಖೆಯಲ್ಲಿ ಮಂಜೂರಾದ ಹುದ್ದೆಗಳು 15,177 ಆಗಿದೆ. ಭರ್ತಿಯಾದ ಹುದ್ದೆಗಳು 5,585. ಖಾಲಿ ಇರುವ ಹುದ್ದೆಗಳು 9,592 ಆಗಿದೆ. ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಲ್ಲಿ 2,758 ಮಂಜೂರಾದ ಹುದ್ದೆಗಳು. ಭರ್ತಿಯಾದ ಹುದ್ದೆಗಳು 440 ಮತ್ತು ಖಾಲಿ ಇರುವ ಹುದ್ದೆಗಳು 2,318 ಆಗಿದೆ. ರೇಷ್ಮೆ ಇಲಾಖೆಯಲ್ಲಿ 4,560 ಮಂಜೂರಾದ ಹುದ್ದೆಗಳು. ಭರ್ತಿಯಾದ ಹುದ್ದೆಗಳು 1758 ಆಗಿದೆ. ಖಾಲಿ ಇರುವ ಹುದ್ದೆಗಳು 2,802 ಆಗಿದೆ.

ಸಣ್ಣ ಕೈಗಾರಿಕೆ, ಪ್ರವಾಸೋದ್ಯಮ ಇತರ ಇಲಾಖೆ

ಸಣ್ಣ ಕೈಗಾರಿಕೆ, ಪ್ರವಾಸೋದ್ಯಮ ಇತರ ಇಲಾಖೆ

ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಗೆ ಮಂಜೂರಾದ ಹುದ್ದೆಗಳು 6,838. ಭರ್ತಿಯಾದ ಹುದ್ದೆಗಳು 2,622 ಮತ್ತು ಖಾಲಿ ಇರುವ ಹುದ್ದೆಗಳು 4,216 ಆಗಿದೆ. ಸಣ್ಣ ಕೈಗಾರಿಕೆ ಇಲಾಖೆಗೆ ಮಂಜೂರಾದ ಹುದ್ದೆಗಳು 563 ಆಗಿದೆ. ಭರ್ತಿಯಾದ ಹುದ್ದೆಗಳು 207. ಖಾಲಿ ಇರುವ ಹುದ್ದೆಗಳು 356 ಆಗಿದೆ. ಪ್ರವಾಸೋದ್ಯಮ ಇಲಾಖೆಗೆ ಮಂಜೂರಾಗಿರುವ ಹುದ್ದೆಗಳು 440 ಆಗಿದೆ. ಭರ್ತಿಯಾದ ಹುದ್ದೆಗಳು 154, ಖಾಲಿ ಇರುವ ಹುದ್ದೆಗಳು 286 ಆಗಿದೆ.

ಸಾರಿಗೆ, ಆರೋಗ್ಯ ಇತರೆ ಇಲಾಖೆ

ಸಾರಿಗೆ, ಆರೋಗ್ಯ ಇತರೆ ಇಲಾಖೆ

ಸಾರಿಗೆ ಇಲಾಖೆಯಲ್ಲಿ ಮಂಜೂರಾದ ಹುದ್ದೆಗಳು 2,806 ಆಗಿದೆ. ಭರ್ತಿಯಾದ ಹುದ್ದೆಗಳು 1,204. ಖಾಲಿ ಇರುವ ಹುದ್ದೆಗಳು 1,602 ಆಗಿದೆ. ನಗರಾಭಿವೃದ್ಧಿ ಇಲಾಖೆಗೆ ಮಂಜೂರಾದ ಹುದ್ದೆಗಳು 1,433. ಭರ್ತಿಯಾದ ಹುದ್ದೆಗಳು 594. ಖಾಲಿ ಇರುವ ಹುದ್ದೆಗಳು 839 ಆಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮಂಜೂರಾದ ಹುದ್ದೆಗಳು 6,940. ಭರ್ತಿಯಾದ ಹುದ್ದೆಗಳು 3710 ಆಗಿದೆ. ಖಾಲಿ ಇರುವ ಹುದ್ದೆಗಳು 3230 ಆಗಿದೆ. ಯುವಜನ ಸೇವೆಗಳ ಇಲಾಖೆ ಮಂಜೂರಾದ ಹುದ್ದೆಗಳು 322. ಭರ್ತಿಯಾದ ಹುದ್ದೆಗಳು 115. ಖಾಲಿ ಇರುವ ಹುದ್ದೆಗಳು 207 ಆಗಿದೆ. ಆರೋಗ್ಯ & ವೈದ್ಯಕೀಯ ಶಿಕ್ಷಣ ಇಲಾಖೆಗೆ ಮಂಜೂರಾದ ಹುದ್ದೆಗಳು 74,857 ಆಗಿದೆ. ಭರ್ತಿಯಾದ ಹುದ್ದೆಗಳು 40,213 ಆಗಿದೆ. ಖಾಲಿ ಇರುವ ಹುದ್ದೆಗಳು 34,644 ಆಗಿದೆ.

English summary
Karnataka government written reply about post allotted for various departments and how much post vacant now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X