Get Updates
Get notified of breaking news, exclusive insights, and must-see stories!

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ನೇಮಕಾತಿ

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಕಲಬುರಗಿ, ಫೆಬ್ರವರಿ 12; ಗುತ್ತಿಗೆ ಆಧಾರದ ಮೇಲೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತರು ಫೆಬ್ರವರಿ 13ರಿಂದ ಫೆಬ್ರವರಿ 20ರ ಸಂಜೆ ಗಂಟೆಯ ತನಕ ಅರ್ಜಿ ಸಲ್ಲಿಕೆ ಮಾಡಬಹುದು.

ಕಲಬುರಗಿಯ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಮಾತ್ರ ಅರ್ಜಿ ಆಹ್ವಾನಿಸಲಾಗಿದೆ.

ಮಂಡಳಿಯ ಉಪ ಕಾರ್ಯದರ್ಶಿಗಳು ಈ ಉದ್ಯೋಗ ಮಾಹಿತಿ ಕುರಿತು ಪ್ರಕಟಣೆ ಹೊರಡಿಸಿದ್ದಾರೆ. ಸ್ಟ್ಯಾಟಿಸ್ಟಿಕಲ್ ಕೋ-ಆರ್ಡಿನೇಟರ್ 2 ಹುದ್ದೆ, ಸ್ಟ್ಯಾಟಿಸ್ಟಿಕಲ್ ಅಸಿಸ್ಟೆಂಟ್ 3 ಹುದ್ದೆ, ಅಕೌಂಟ್ ಅಸಿಸ್ಟಂಟ್ 1 ಹುದ್ದೆ, ಟೆಕ್ನಿಕಲ್ ಕೋ-ಆರ್ಡಿನೇಟರ್ 2 ಹುದ್ದೆಗಳು, ಟೆಕ್ನಿಕಲ್ ಅಸಿಸ್ಟೆಂಟ್ 1 ಹುದ್ದೆ, ಪ್ರೋಗ್ರಾಮರ್ ಅಕೌಂಟ್ ಅಸಿಸ್ಟಂಟ್ 3 ಹುದ್ದೆ, ಜೂನಿಯರ್ ಪ್ರೋಗ್ರಾಮರ್ 4 ಹುದ್ದೆ ಹಾಗೂ ಇನ್ಫಾರ್ಮೇಶನ್ ಟೆಕ್ನಾಲಜಿ ಅಸಿಸ್ಟಂಟ್ 10 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.

Kalyana Karnataka Region Development Board Recruitment Apply Till February 20

ಅಭ್ಯರ್ಥಿಗಳು ಮಂಡಳಿಯ www.hkrdb.kar.nic.in ವೆಬ್‍ಸೈಟ್‍ದಲ್ಲಿ ಆನ್‍ಲೈನ್ ಮೂಲಕ ಫೆಬ್ರವರಿ 13 ರಿಂದ 20ರ ಸಂಜೆ 5 ಗಂಟೆಯೊಳಗೆ ಅರ್ಜಿ ಸಲ್ಲಿಸಬೇಕು. ಅಂಚೆ, ಖುದ್ದಾಗಿ ಸಲ್ಲಿಕೆ ಮಾಡುವ ಯಾವುದೇ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಸಷ್ಟಪಡಿಸಲಾಗಿದೆ.

ಆಸಕ್ತರು ನೇಮಕಾತಿ ಅಧಿಸೂಚನೆ, ಮಾನದಂಡ, ವಿದ್ಯಾರ್ಹತೆ, ಅನುಭವ ಹಾಗೂ ಮಾಸಿಕ ವೇತನ ಮತ್ತಿತರ ಹೆಚ್ಚಿನ ಮಾಹಿತಿಯನ್ನು ಮಂಡಳಿಯ ವೆಬ್‍ಸೈಟ್‌ನಲ್ಲಿ ಪಡೆಯಬಹುದು.

ಅಭ್ಯರ್ಥಿಗಳು ತಮಗೆ ಯಾವುದೇ ಗೊಂದಲ ಹಾಗೂ ಪ್ರಶ್ನೆಗಳಿದ್ದಲ್ಲಿ ಫೆಬ್ರವರಿ 20ರೊಳಗಾಗಿ ಮಂಡಳಿಯ [email protected] ಇ-ಮೇಲ್ ವಿಳಾಸಕ್ಕೆ ಸಂಪರ್ಕಿಸಬಹುದು.

ಗ್ರಾಮ ಕಾಯಕ ಮಿತ್ರ ನೇಮಕಕ್ಕೆ ಅರ್ಜಿ ಆಹ್ವಾನ; ಬಳ್ಳಾರಿ ತಾಲೂಕಿನ ನರೇಗಾ ಯೋಜನೆಯಡಿ 2021-22ನೇ ಸಾಲಿನಲ್ಲಿ 20 ಸಾವಿರ ಮಾನವ ದಿನಗಳಿಗಿಂತ ಹೆಚ್ಚಿನ ಉದ್ಯೋಗ ಸೃಜನೆ ಮಾಡಿದ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಕಾಯಕ ಮಿತ್ರರನ್ನ್ರು ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಗ್ರಾಮ ಪಂಚಾಯಿತಿಗಳಾದ ಕೊರ್ಲಗುಂದಿ, ಕೊಳಗಲ್ಲು, ಬೆಳಗಲ್ಲು, ಪರಮದೇವನಹಳ್ಳಿ, ಮೋಕಾ, ಶಂಕರಬಂಡೆ, ಸಂಗನಕಲ್ಲು, ಯರ್ರಗುಡಿ, ಸಿರಿವಾರ ಮತ್ತು ಬೈರದೇವನಹಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ನೇಮಕ ಮಾಡಲು ಅರ್ಜಿ ಕರೆಯಲಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 25 ಆಗಿರುತ್ತದೆ.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08392-266695ಗೆ ಕರೆ ಮಾಡಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+