ವಿಜಯಪುರ; ಕೆಲಸ ಖಾಲಿ ಇದೆ, ವೇತನ 51,400 ರೂ.ಗಳು
ವಿಜಯಪುರ, ಜನವರಿ 17: ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆ ನೌಕರರ ಪತ್ತಿನ ಸಹಕಾರಿ ಸಂಘ ನಿ. ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು, ಅರ್ಹರು ಅರ್ಜಿಗಳನ್ನು ಸಲ್ಲಿಕೆ ಮಾಡಲು 31/1/2024ರ ಸಂಜೆ 5.30 ಕೊನೆಯ ದಿನವಾಗಿದೆ.
ಲೆಕ್ಕಿಗ/ ಅಕೌಂಟೆಂಟ್/ ಗಣಕಯಂತ್ರ ನಿರ್ವಹಣೆಗಾರ 1 ಹುದ್ದೆ. ಕ್ಲರ್ಕ್/ ಕಂಪ್ಯೂಟರ್ ಆಪರೇಟರ್ 1 ಹುದ್ದೆ ಮತ್ತು ಅಟೆಂಡರ್/ ಸಿಪಾಯಿ 1 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಸಂಘದಿಂದ ಪಡೆದ ಅಧಿಕೃತ ಅರ್ಜಿ ಮುಖಾಂತರ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದಂದು ಕನಿಷ್ಟ 18 ವರ್ಷಗಳಾಗಿರಬೇಕು ಹಾಗೂ ಕರ್ನಾಟಕ ರಾಜ್ಯ ಸರ್ಕಾರದ ರಿತ್ಯಾ ಗರಿಷ್ಠ ವಯೋಮಿತಿಗೆ ಒಳಪಟ್ಟಿರಬೇಕು. ಸಾಮಾನ್ಯ ವರ್ಗ 35 ವರ್ಷ, ಪ್ರವರ್ಗ -2(ಎ), 2(ಬಿ) (ಬಿ) 38 ವರ್ಷ. ಪ.ಜಾ/ಪ.ಪಂ. ಹಾಗೂ ಇತರೆ ಹಿಂದುಳಿದ ವರ್ಗಗಳ ವರ್ಗ-1ಕ್ಕೆ ಸೇರಿರುವ ವ್ಯಕ್ತಿಗಳಾಗಿದ್ದಲ್ಲಿ 40 ವರ್ಷ.
ವಿದ್ಯಾರ್ಹತೆ, ವೇತನ ವಿವರ; ಲೆಕ್ಕಿಗ/ ಅಕೌಂಟೆಂಟ್/ ಗಣಕ ಯಂತ್ರ ನಿರ್ವಹಣೆಗಾರ ಹುದ್ದೆಗೆ ಅರ್ಜಿ ಸಲ್ಲಿಸುವವರು ಕರ್ನಾಟಕ ರಾಜ್ಯ ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದ ಪದವಿ ಪರೀಕ್ಷೆಯಲ್ಲಿ ಎಲ್ಲ ಸೆಮಿಸ್ಟರ್‌ಗಳಲ್ಲಿ ಸರಾಸರಿ (60ರಷ್ಟು ಅಂಕಗಳನ್ನು ಪಡೆದಿರಬೇಕು, ವಾಣಿಜ್ಯ/ ಸಹಕಾರ/ ನಿರ್ವಹಣೆ ಪದವಿ ಪಡೆದಿರಬೇಕು. ಕಂಪ್ಯೂಟರ್ ಆಪರೇಶನ್ ಮತ್ತು ಅಪ್ಲಿಕೇಶನ್ಸ್ ಜೊತೆಗೆ ಟ್ಯಾಲಿ ಕೋರ್ಸ್‌ನ ಜ್ಞಾನ ಕಡ್ಡಾಯವಾಗಿ ಹೊಂದಿರಬೇಕು.
ಕ್ಲರ್ಕ್/ ಕಂಪ್ಯೂಟರ್ ಆಪರೇಟರ್ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡುವವರು ದ್ವಿತೀಯು ಪಿಯುಸಿಯಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಕಂಪ್ಯೂಟರ್ ಆಪರೇಶನ್ ಮತ್ತು ಅಪ್ಲಿಕೇಶನ್ಸ್ ಜ್ಞಾನ ಕಡ್ಡಾಯವಾಗಿ ಹೊಂದಿರಬೇಕು. ಅಟೆಂಡರ್/ ಸಿಪಾಯಿ ಹುದ್ದೆಗೆ ಎಸ್.ಎಸ್.ಎಲ್.ಸಿಯಲ್ಲಿ ಉತ್ತೀರ್ಣರಾಗಿರಬೇಕು. ಕನ್ನಡದ ಓದು ಬರಹ ಜ್ಞಾನ ಹೊಂದಿರಬೇಕು.
ಲೆಕ್ಕಿಗ/ ಅಕೌಂಟೆಂಟ್/ ಗಣಕಯಂತ್ರ ನಿರ್ವಹಣೆಗಾರ ಹುದ್ದೆಗೆ 25,800-51,400 ರೂ.ಗಳು. ಕ್ಲರ್ಕ್/ ಕಂಪ್ಯೂಟರ್ ಆಪರೇಟರ್ ಹುದ್ದೆಗೆ 23,500-47,650 ರೂ.. ಮತ್ತು ಅಟೆಂಡರ್/ ಸಿಪಾಯಿ ಹುದ್ದೆಗೆ 18,600-32,600 ರೂ. ವೇತನ ನಿಗದಿ ಮಾಡಲಾಗಿದೆ.
ಲೆಕ್ಕಿಗ/ ಅಕೌಂಟೆಂಟ್/ ಗಣಕ ಯಂತ್ರ ನಿರ್ವಹಣೆಗಾರ ಹಾಗೂ ಕ್ಲರ್ಕ್/ ಕಂಪ್ಯೂಟರ್ ಆಪರೇಟರ್ ಹುದ್ದೆಗಳಿಗೆ ನಿಗದಿಪಡಿಸಿದ ಕನಿಷ್ಠ ವಿದ್ಯಾರ್ಹತೆ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು 1:20ರ ಅನುಪಾತದಲ್ಲಿ ಲಿಖಿತ ಪರೀಕ್ತಿಗೆ ಕರೆಯಲಾಗುವುದು. ಬಾಹ್ಯ ಮೂಲಗಳು ನಡೆಸುವ ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅರ್ಹತಾ ಪಟ್ಟಿಯನ್ನು ತಯಾರಿಸಿ ಅದನ್ನು ಆಧರಿಸಿ ಆಭ್ಯರ್ಥಿಗಳನ್ನು 1:5 ರ ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುವುದು. ಅಟೆಂಡರ್/ ಸಿಪಾಯಿ ಹುದ್ದೆಗೆ ನೇರ ನೇಮಕಾತಿಯನ್ನು ಸಂದರ್ಶನ (ಮೌಖಿಕ) ಮೂಲಕ ನೇಮಕಾತಿ ಮಾಡಿಕೊಳ್ಳಲಾಗುವುದು.
ಅರ್ಜಿ ಸಲ್ಲಿಕೆ ಮಾಡುವವರು ಶುಲ್ಕ 200 ರೂ. ಹಾಗೂ ಪರೀಕ್ಷಾ ಶುಲ್ಕ ಸಾಮಾನ್ಯ ಅಭ್ಯರ್ಥಿಗಳಿಗೆ ರೂ. 1000 ಹಾಗೂ ಪ.ಜಾ./ಪ.ಪಂ. ಅಭ್ಯರ್ಥಿಗಳಿಗೆ ರೂ. 500 ನಗದು/ ಡಿಡಿ ಮುಖಾಂತರ ಸಲ್ಲಿಸಬೇಕು. ಈ ಹಣವನ್ನು ಯಾವುದೇ ಸಂದರ್ಭದಲ್ಲಿ ಹಿಂದಿರುಗಿಸಲಾಗುವುದಿಲ್ಲ.
ಸಂಘದಿಂದ ಪಡೆದ ಅಧಿಕೃತ ಅರ್ಜಿ ಮುಖಾಂತರ ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ 31/1/2024ರ ಸಾಯಂಕಾಲ 5.30. ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕಛೇರಿಯನ್ನು ಸಂಪರ್ಕಿಸಬಹುದು.












Click it and Unblock the Notifications