KPSC ಕಚೇರಿಯಲ್ಲಿ 34 ಹುದ್ದೆ ಭರ್ತಿ, ಅರ್ಜಿ ಹಾಕಲು ಸಿದ್ಧರಾಗಿ
ಬೆಂಗಳೂರು, ನವೆಂಬರ್ 28; ಕರ್ನಾಟಕ ಲೋಕಸೇವಾ ಆಯೋಗ (KPSC) ಗಣಕ ಕೇಂದ್ರದ ಬಲವರ್ಧನೆಗಾಗಿ ಹೊಸ ಹುದ್ದೆಗಳನ್ನು ಸೃಜಿಸುವ ಬಗ್ಗೆ ಆಯೋಗದ ಕಾರ್ಯದರ್ಶಿಗಳು ಪ್ರಸ್ತಾವನೆ ಸಲ್ಲಿಸಿದ್ದರು.
ಸರ್ಕಾರದ ಮುಖ್ಯ ಕಾಯರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ 27/02/2018ರಂದು ನಡೆದ ಸಭೆಯಲ್ಲಿ ಪ್ರಥಮವಾಗಿ ಆಯೋಗದ ಗಣಕ ಕೇಂದ್ರದಲ್ಲಿ ಬದಲಾವಣೆ ಹಾಗೂ ಸದೃಢತೆ ತರಬೇಕಾಗಿರುವುದರಿಂದ ಹೆಚ್ಚುವರಿ ಹುದ್ದೆಗಳ ಸೃಜನೆಗಾಗಿ ಮತ್ತು ವೃಂದ ಮತ್ತು ನೇಮಕಾತಿ ನಿಯಮಗಳನ್ನು ಸಮಗ್ರವಾಗಿ ವರಿಶೀಲಿಸುವ ಬಗ್ಗೆ ಚರ್ಚೆ ನಡೆಯಿತು.
ಕರ್ನಾಟಕ ರಾಜ್ಯ ಸೇವೆಗಳಲ್ಲಿನ ಹುದ್ದೆಗಳಿಗೆ ಮತ್ತು ಸೇವೆಗಳಿಗೆ ಆಯ್ಕೆ ಮಾಡುವಲ್ಲಿ ಮುಕ್ತ, ನಿಷ್ಪಕ್ಷಪಾತವಾದ ಮತ್ತು ಅರ್ಹತಾ ಆಧಾರಿತ ಆಯ್ಕೆಗಳನ್ನು ಮಾಡಲು ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಜಾರಿಯಲ್ಲಿರುವ ವ್ಯವಸ್ಥೆ ಮತ್ತು ಪ್ರಕ್ರಿಯೆಗಳನ್ನು ಪರಿಷ್ಕರಿಸುವ ಉದ ಆದಿಂದ ಕರ್ನಾಟಕ ಸರ್ಕಾರವು ಪಿ. ಸಿ. ಹೋಟಾ ನೇತೃತ್ವದ ಸಮಿತಿಯನ್ನು ರಚನೆ ಮಾಡಿತ್ತು.

ಈ ಸಮಿತಿ ಸರ್ಕಾರಕ್ಕೆ, ನೀಡಿರುವ ವರದಿಯಲ್ಲಿಯೂ ಸಹ ಆಯೋಗದ ಗಣಕ ಕೇಂದ್ರವನ್ನು ಬಲಪಡಿಸುವ ಬಗ್ಗೆ ತಿಳಿಸಿದೆ. ಅದರಂತೆ ಕರ್ನಾಟಕ ಲೋಕಸೇವಾ ಆಯೋಗದ ಗಣಕ ಕೇಂದ್ರಕ್ಕೆ ಸಂಬಂಧಿಸಿದಂತೆ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರುವ ಹಾಗೂ ಹೆಚ್ಚುವರಿ ಹುದ್ದೆಗಳನ್ನು ಸೃಜಿಸುವ ಬಗ್ಗೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು.
ಆಯೋಗದ ಗಣಕ ಕೇಂದ್ರದಲ್ಲಿ ಬದಲಾವಣೆ ಹಾಗೂ ಸದೃಢತೆ ತರಬೇಕಾಗಿರುವುದರಿಂದ ಹೆಚ್ಚುವರಿ ಹುದ್ದೆಗಳ ಸೃಜನೆಗಾಗಿ ಹಾಗೂ ಪರೀಕ್ಷಾ ಪ್ರಾವಿತ್ರ್ಯತೆ, ಗೌಪ್ಯತೆ ಮತ್ತು ಪಾರದರ್ಶಕತೆಯನ್ನು ಕಾಪಾಡಬಹುದಾಗಿರುತ್ತದೆ.

ಅದರಂತೆ ವಿವಿಧ ನೇಮಕಾತಿ ಪ್ರಕ್ರಿಯೆಗಳನ್ನು ತ್ವರಿತವಾಗಿ ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವ ಸಲುವಾಗಿ ಗಣಕ ಕೇಂದ್ರದ ಬಲವರ್ಧನೆಗಾಗಿ ಹೊಸ ಹುದ್ದೆಗಳನ್ನು ಸೃಜಿಸುವಂತೆ ಕೋರಿ ಮರು ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.
ಈ ಬಗ್ಗೆ ಆರ್ಥಿಕ ಇಲಾಖೆಯೊಂದಿಗೆ ಸಮಾಲೋಚಿಸಿ, ಸರ್ಕಾರವು ಪರಿಶೀಲಿಸಿ ಈ ಆದೇಶವನ್ನು ನೀಡಿದೆ. ಹೆಚ್. ಕೆ. ಶಾಂತರಾಜು ಸರ್ಕಾರದ ಅಧೀನ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಈ ಕುರಿತು ಆದೇಶ ಹೊರಡಿಸಿದ್ದಾರೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಸೇವಾ ಆಯೋಗಕ್ಕೆ, ಈ ಕೆಳಕಂಡಂತೆ ಹೊಸದಾಗಿ ಒಟ್ಟು 34 ಹುದ್ದೆಗಳನ್ನು ಸೃಜಿಸಿ, ಭರ್ತಿ ಮಾಡಲು ಒಪ್ಪಿಗೆ ನೀಡಲಾಗಿದೆ.












Click it and Unblock the Notifications