ಹಾಸನದಲ್ಲಿ ಕೆಲಸ ಖಾಲಿ ಇದೆ: ವಿವಿಧ ಹುದ್ದೆಗಳ ನೇಮಕಾತಿ, ವಿವರ
ಹಾಸನ, ಸೆಪ್ಟೆಂಬರ್ 07: ಹಾಸನ ಜಿಲ್ಲೆಯಲ್ಲಿ ಕೆಲಸ ಹುಡುಕುತ್ತಿರುವ ಯುವಕ/ ಯುವತಿಯರಿಗೆ ಮಾಹಿತಿಯೊಂದಿದೆ. ಜಿಲ್ಲೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅತಿಥಿ ಉಪನ್ಯಾಸಕರ ತಾತ್ಕಾಲಿಕ ಹುದ್ದೆ, ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕ ಹುದ್ದೆಗೆ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು. ಆಸಕ್ತರು ಅರ್ಜಿ ಸಲ್ಲಿಸಲು ನೇಮಕಾತಿಯ ವಿವರಗಳು ಕೆಳಗಿನಂತಿವೆ.
ಹಾಸನ ವಿಶ್ವವಿದ್ಯಾಲಯ, ಹೇಮಗಂಗೋತ್ರಿ ಹಾಸನದ ಸ್ನಾತಕೋತ್ತರ ಅಧ್ಯಯನ ವಿಭಾಗಗಳಿಗೆ ಮತ್ತು ಘಟಕ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ತಾತ್ಕಾಲಿಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಎಂ.ಎ ಕನ್ನಡ, ಇಂಗ್ಲೀಷ್, ಇತಿಹಾಸ, ಅರ್ಥಶಾಸ್ತ್ರ, ಸಮಾಜ ಕಾರ್ಯ, ಎಂ.ಎಸ್ಸಿ ಸಸ್ಯಶಾಸ್ತ್ರ, ವಿದ್ಯುನ್ಮಾನ ವಿಭಾಗ, ರಸಾಯನ ಶಾಸ್ತ್ರ, ಗಣಿತ ಶಾಸ್ತ್ರ, ವಾಣಿಜ್ಯ ವಿಭಾಗ ಎಂ.ಕಾಂ, ಮ್ಯಾನೇಜ್‌ಮೆಂಟ್, ಎಂಬಿಎ, ಕಂಪ್ಯೂಟರ್ ಅಪ್ಲಿಕೇಶನ್. ಎಂಸಿಎ ಹಳ್ಳಿಮೈಸೂರು ಘಟಕ ಕಾಲೇಜು ಕನ್ನಡ, ಇಂಗ್ಲೀಷ್, ಇತಿಹಾಸ, ಅರ್ಥಶಾಸ್ತ್ರ, ಡಿಜಿಟಲ್ ಪ್ಲೂಯೆನ್ಸಿ, ಹೆತ್ತೂರು ಘಟಕ ಕಾಲೇಜು ಕನ್ನಡ, ಇಂಗ್ಲೀಷ್ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ವಿಶ್ವವಿದ್ಯಾಲಯದ ಅಂತರ್ಜಾಲದಲ್ಲಿ HUH.KARNATAKA.GOV.IN ನಲ್ಲಿ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ ಅಥವಾ ಕಚೇರಿಯಿಂದ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಸೆಪ್ಟೆಂಬರ್ 12ರ ಸಂಜೆ 5ರೊಳಗೆ ನಿರ್ವಾಹಣ ಶುಲ್ಕ 500 ರೂ. ಅನ್ನು (ಎಸ್ಸಿ/ ಎಸ್ಟಿ/ ಪ್ರವರ್ಗ 250 ರೂ.) ಡಿಡಿ/ ಚಲನ್‌ನೊಂದಿಗೆ ಸಲ್ಲಿಸಬೇಕು.
ಅರ್ಜಿಗಳನ್ನು ಕುಲಸಚಿವರು ಹಾಸನ ವಿಶ್ವವಿವಿದ್ಯಾಲಯ ಹಾಸನ ಇವರಿಗೆ ಸಲ್ಲಿಸಬೇಕು. ಸಂದರ್ಶನ ದಿನದಂದು ಅರ್ಜಿಯ ಎರಡು ಪ್ರತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು ಎಂದು ಹೇಮಗಂಗೋತ್ರಿ ಹಾಸನ ವಿಶ್ವವಿದ್ಯಾಲಯದ ಕುಲಸಚಿವರು ತಿಳಿಸಿದ್ದಾರೆ.
ತಾಲೂಕು ತಾಂತ್ರಿಕ ವ್ಯವಸ್ಥಾಪಕ: ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ ಯೋಜನೆಯಡಿ, ಹೊಳೆನರಸೀಪುರ ತಾಲ್ಲೂಕಿನಲ್ಲಿ ಒಂದು ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕ ಹುದ್ದೆಗೆ ನೇರಗುತ್ತಿಗೆ ಆಧಾರದ ಮೇಲೆ ಸೀಮಿತ ಅವಧಿಗೆ ನೇಮಕಾತಿ ಮಾಡಿಕೊಳ್ಳಲು ಷರತ್ತಿಗೆ ಒಳಪಟ್ಟು ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕ ಹುದ್ದೆಗೆ ಅರ್ಹ ಅಭ್ಯರ್ಥಿಗಳು ಕೃಷಿ/ ಕೃಷಿ ಸಂಬಂಧಿತ ವಿಶ್ವ ವಿದ್ಯಾನಿಲಯಗಳು ನೀಡುವ ಕೃಷಿ ಸ್ನಾತಕೋತ್ತರ ಪದವಿಯೊಂದಿಗೆ ಕಂಪ್ಯೂಟರ್ ಜ್ಞಾನ ಹೊಂದಿದ್ದು, ಕನಿಷ್ಠ 2 ವರ್ಷಗಳ ಕೃಷಿ/ ಕೃಷಿ ಸಂಬಂಧಿತ ವಿಭಾಗಗಳಲ್ಲಿ ಕ್ಷೇತ್ರ ಮಟ್ಟದ ಅನುಭವ ಹೊಂದಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ 30 ಸಾವಿರ ರೂ.ಗಳು.
ಆಸಕ್ತ ಅಭ್ಯರ್ಥಿಗಳು ಆತ್ಮ ವಿಭಾಗ, ಜಂಟಿ ಕೃಷಿ ನಿರ್ದೇಶಕರ ಕಚೇರಿ, ಹಾಸನ ಇಲ್ಲಿ ಅರ್ಜಿಯನ್ನು ಪಡೆದು, ಭರ್ತಿ ಮಾಡಿದ ಪೂರ್ಣ ಮಾಹಿತಿಯೊಂದಿಗೆ ಸೆಪ್ಟೆಂಬರ್ 20 ಸಂಜೆ 5ರ ಒಳಗಾಗಿ ಸಲ್ಲಿಸಬೇಕು. ಅರ್ಜಿಯನ್ನು ಜಂಟಿ ಕೃಷಿ ನಿರ್ದೇಶಕರು, ಹಾಸನ ಇವರ ಕಚೇರಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಆತ್ಮ ವಿಭಾಗ ಸಂಪರ್ಕಿಸಬಹುದು.
ರೈತ, ರೈತ ಮಹಿಳೆಯರಿಗೆ ತರಬೇತಿ: ರೈತರಿಗೆ, ರೈತ ಮಹಿಳೆಯರಿಗೆ ಹಾಗೂ ಆಸಕ್ತ ಎಲ್ಲರಿಗೂ ಪಶು ಪಾಲನಾ ಇಲಾಖೆಯ ಪಶುವೈದ್ಯಕೀಯ ತರಬೇತಿ ಕೇಂದ್ರ ವತಿಯಿಂದ ತರಬೇತಿಯನ್ನು ಆಯೋಜಿಸಲಾಗಿದೆ. ತರಬೇತಿಯಲ್ಲಿ ಪಾಲ್ಗೊಳ್ಳುವ ಶಿಬಿರಾರ್ಥಿಗಳಿಗೆ ಯಾವುದೇ ಪ್ರಯಾಣ ಭತ್ಯೆ ಅಥವಾ ಸ್ಟೈಫಂಡ್ ನೀಡಲಾಗುವುದಿಲ್ಲ. ಆಸಕ್ತರು ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯೊಂದಿಗೆ ತರಬೇತಿ ಪ್ರಾರಂಭವಾಗುವ ಸೆಪ್ಟೆಂಬರ್ 12 ರಿಂದ 26 ರವರೆಗೆ ಬೆಳಗ್ಗೆ 10.30 ಗಂಟೆಯೊಳಗೆ ಉಪ ನಿರ್ದೇಶಕರ ಕಚೇರಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ, ಸಂತೇಪೇಟೆ, ಹಾಸನ ಇಲ್ಲಿಗೆ ಹಾಜರಾಗಬಹುದು.
ರೈತರಿಗೆ ಆಧುನಿಕ ಹೈನುಗಾರಿಕೆ ಬಗ್ಗೆ ತರಬೇತಿ ಸೆಪ್ಟೆಂಬರ್ 12ರಿಂದ 13 ರವರೆಗೆ, ಕೋಳಿ ಸಾಕಾಣಿಕೆ ತರಬೇತಿ ಸೆಪ್ಟೆಂಬರ್ 17 ರಿಂದ 18ರ ತನಕ, ಆಧುನಿಕ ಕುರಿ ಮತ್ತು ಮೇಕೆ ಸಾಕಣಿಕೆ ತರಬೇತಿ ಸೆಪ್ಟೆಂಬರ್ 20 ರಿಂದ 21ರ ತನಕ, ಆಧುನಿಕ ಹೈನುಗಾರಿಕೆ ಬಗ್ಗೆ ತರಬೇತಿ ಸೆಪ್ಟೆಂಬರ್ 25 ರಿಂದ 26ರ ತನಕ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 08172-235226 ಸಂಖ್ಯೆಗೆ ಕರೆ ಮಾಡಿದೆ.












Click it and Unblock the Notifications