ರಾಮನಗರದ ಯುವಜನತೆಗಾಗಿ "ಬೃಹತ್ ಉದ್ಯೋಗ ಮೇಳ" ಆಯೋಜನೆ
ರಾಮನಗರ, ಮೇ 6: ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ, ಜೀವನೋಪಾಯ ಇಲಾಖೆ ವತಿಯಿಂದ ರಾಮನಗರದಲ್ಲಿ ಯುವಜನತೆಗಾಗಿ ಬೃಹತ್ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿದೆ.
ಈ ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ ಕಂಪನಿಗಳ ಪಾಲ್ಗೊಳ್ಳಲಿದ್ದು, 5,000ಕ್ಕೂ ಹೆಚ್ಚು ಉದ್ಯೋಗಗಳ ನೇಮಕಾತಿ ನಿರೀಕ್ಷಿಸಲಾಗಿದೆ.
ಸ್ಥಳ: ಬಿಜಿಎಸ್ ವರ್ಲ್ಡ್ ಸ್ಕೂಲ್‌ನಲ್ಲಿ ಸಂದರ್ಶನ ನಡೆಯಲಿದೆ.
ದಿನಾಂಕ: 10 ಮೇ 2022(ಬೆಳಿಗ್ಗೆ 09 ರಿಂದ ಸಂಜೆ 06ರ ವರೆಗೆ)

ಆಸಕ್ತ ಅರ್ಹ ಅಭ್ಯರ್ಥಿಗಳು ಇಂದೇ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ವೆಬ್ ತಾಣದಲ್ಲಿ ಸಿಗಲಿರುವ ಲಿಂಕ್(http://skillconnect.kaushalkar.com/app/student-jobfair) ಮೂಲಕ ನೋಂದಾಯಿಸಿಕೊಳ್ಳಬಹುದು.
ವಿದ್ಯಾರ್ಹತೆ: ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಯಾವುದೇ ಪದವಿ ತೇರ್ಗಡೆ ಹೊಂದಿದ 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ತಮ್ಮ ರೆಸ್ಯೂಮ್ ಮತ್ತು ಆಧಾರ್ ಕಾರ್ಡ್ ಪ್ರತಿಯೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬಹುದು.
ಉದ್ಯೋಗ ಮೇಳದ ಪೂರ್ಣ ವಿಳಾಸ:
ಬಾಲಗಂಗಾಧರನಾಥ ಸ್ವಾಮೀಜಿ ವರ್ಲ್ಡ್ ಸ್ಕೂಲ್
ಅರ್ಚಕರಹಳ್ಳಿ, ಜನಪದ ಲೋಕದ ಪಕ್ಕ,
ಮೈಸೂರು ರಸ್ತೆ, ರಾಮನಗರ ಜಿಲ್ಲೆ
ಕನಕಪುರ 562159
ಸಂದರ್ಶನಕ್ಕೆ ಹಾಜರಾಗುವ ಮುನ್ನ ಈ ದಾಖಲೆಗಳನ್ನು ತಪ್ಪದೇ ತನ್ನಿ;
ಶೈಕ್ಷಣಿಕ ದಾಖಲೆಗಳ ಜೆರಾಕ್ಸ್ ಪ್ರತಿ, ಪಾಸ್ ಪೋರ್ಟ್ ಫೋಟೋ, ಆಧಾರ್ ಕಾರ್ಡ್ ಹಾಗೂ ಸ್ವವಿವರವುಳ್ಳ ಅರ್ಜಿ ಪ್ರತಿ.
ಆಸಕ್ತ ಅಭ್ಯರ್ಥಿಗಳು ತಮ್ಮ ಸ್ವ ವಿವರಗಳುಳ್ಳ ರೆಸ್ಯುಮ್ ಇಮೇಲ್ ಮಾಡಬಹುದು [email protected]
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: +91 96066 50597, + 91 74118 45322
ನೇರ ಸಂದರ್ಶನಕ್ಕೆ ಆಗಮಿಸುವ ಅಭ್ಯರ್ಥಿಗಳು ತಪ್ಪದೇ ಕೋವಿಡ್ 19 ಮಾರ್ಗಸೂಚಿಯನ್ನು ಪಾಲಿಸತಕ್ಕದ್ದು ಎಂದು ಕೌಶಲ್ಯ ಅಭಿವೃದ್ಧಿ ನಿಗಮ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.












Click it and Unblock the Notifications