ಮೈಸೂರಿನಲ್ಲಿ ಜೂನ್ 30ರಂದು ಉದ್ಯೋಗ ಮೇಳ
ಮೈಸೂರು, ಜೂ.26 : ಮೈಸೂರು ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಮತ್ತು ಜಿ.ವಿ.ಕೆ ಇ.ಎಂ.ಆರ್.ಐ 108 ಬೆಂಗಳೂರು ಇವರು ಜೂನ್ 30ರಂದು ಉದ್ಯೋಗ ಮೇಳ ಆಯೋಜಿಸಿದ್ದಾರೆ. ಜಿಲ್ಲೆಯಲ್ಲಿ ಖಾಲಿ ಇರುವ ಸ್ಟಾಫ್ ನರ್ಸ ಹಾಗೂ ಡ್ರೈವರ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಜೂನ್ 30ರ ಮಂಗಳವಾರ ಬೆಳಗ್ಗೆ 10 ಗಂಟೆಗ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಆವರಣದಲ್ಲಿ ಉದ್ಯೋಗ ಮೇಳ ನಡೆಯಲಿದೆ. ನಿರುದ್ಯೋಗ ನರ್ಸಿಂಗ್ ಹಾಗೂ ಡ್ರೈವರ್ ತರಬೇತಿ ಪಡೆದ ಪುರುಷ/ಮಹಿಳಾ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ. [ಇಂಧನ ಇಲಾಖೆಯಲ್ಲಿ 8 ಸಾವಿರ ಹುದ್ದೆ ಭರ್ತಿ, ವಿವರಗಳು]

ಸ್ಟಾಫ್ ನರ್ಸ ಹುದ್ದೆಗಳ ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳು ಎ.ಎನ್.ಎಂ ಅಥವಾ ಜಿ.ಎನ್.ಎಂ ತರಬೇತಿ ಪಡೆದು ತೇರ್ಗಡೆಯಾಗಿರಬೇಕು. ವಯೋಮಿತಿ 18 ರಿಂದ 28 ವರ್ಷಗಳು. ಡ್ರೈವರ್ ಹುದ್ದೆಗಳ ಸಂದರ್ಶನಕ್ಕೆ ಆಗಮಿಸುವವರು ಎಸ್‍ಎಸ್‍ಎಲ್‍ಸಿ ಉತ್ತೀರ್ಣರಾಗಿರಬೇಕು. ಭಾರಿ ವಾಹನಾ ಚಾಲನಾ ಪರವಾನಗಿ ಪಡೆದು 5 ವರ್ಷಗಳಾಗಿರಬೇಕು. ವಯೋಮಿತಿ 25 ರಿಂದ 35 ವರ್ಷ.
ಹೆಚ್ಚಿನ ಮಾಹಿತಿಗೆ ಸಿ.ವಿಶ್ವನಾಥ ಭರಣಿ ಸಹಾಯಕ ನಿರ್ದೇಶಕರು, ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಮೈಸೂರು, ಇವರನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಅಥವ 0821-2489972 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು. [ಕಾವೇರಿ ಬ್ಯಾಂಕಿನಲ್ಲಿ ಕನ್ನಡ ಬಲ್ಲವರಿಗೆ ಉದ್ಯೋಗ]
ಸ್ವಚ್ಛತಾ ನೌಕರರ ಹುದ್ದೆ ಖಾಲಿ ಇದೆ : ಟಿ.ನರಸೀಪುರ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ಖಾಲಿ ಇರುವ ಅರೆಕಾಲಿಕ ಸ್ವಚ್ಫತಾ ನೌಕರರ ಹುದ್ದೆಯನ್ನು 3 ವರ್ಷಗಳ ಅವಧಿಗೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಈ ಹಿಂದೆ ಸರ್ಕಾರಿ ಕಚೇರಿಗಳಲ್ಲಿ ಶೌಚಾಲಯವನ್ನು ಸ್ವಚ್ಫಗೊಳಿಸುವ ಕಾರ್ಯವನ್ನು ನಿರ್ವಹಿಸಿದ ಅನುಭವವಿರುವವರು ಅರ್ಜಿ ಸಲ್ಲಿಸಬಹುದು. ಜುಲೈ 16 ಅರ್ಜಿ ಸಲ್ಲಿಸಲು ಕೊನೆಯ ದಿನ. ಆಯ್ಕೆಯಾದ ಅಭ್ಯರ್ಥಿಗಳಿಗೆ 3,000/- ಮಾಸಿಕ ವೇತನ ನೀಡಲಾಗುತ್ತದೆ.












Click it and Unblock the Notifications