ಬೆಂಗಳೂರಿನಲ್ಲಿ ಫೆಬ್ರವರಿ 12ರಂದು ಉದ್ಯೋಗ ಮೇಳ
ಬೆಂಗಳೂರಿನ ಬಸವನಗುಡಿಯಲ್ಲಿ ಫೆಬ್ರವರಿ 12ರಂದು ಬೃಹತ್ ಉದ್ಯೋಗ ಮೇಳ ನಡೆಯಲಿದೆ.
ಬೆಂಗಳೂರು, ಫೆಬ್ರವರಿ 05; ಬೆಂಗಳೂರಿನಲ್ಲಿ ಫೆಬ್ರವರಿ 12ರಂದು ಬೃಹತ್ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿದೆ. 100ಕ್ಕೂ ಹೆಚ್ಚು ಕಂಪನಿಗಳು ಆಗಮಿಸಲಿದ್ದು, 10,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ವಿಧಾನ ಪರಿಷತ್ ಸದಸ್ಯ, ಬಸವನಗುಡಿ ಕಾಂಗ್ರೆಸ್ ಸಾರ್ವಜನಿಕ ಸೇವಾ ಕೇಂದ್ರದ ವತಿಯಿಂದ ಬಸವನಗುಡಿ ಬೃಹತ್ ಉದ್ಯೋಗ ಮೇಳ ಆಯೋಜನೆ ಮಾಡಲಾಗಿದೆ. ಆಸಕ್ತ ಮತ್ತು ಅರ್ಹರು ಪಾಲ್ಗೊಳ್ಳಬಹುದಾಗಿದೆ.
ರಿಟೈಲ್, ಮಾರ್ಕೆಟಿಂಗ್, ಇಂಡಸ್ಟ್ರಿಯಲ್, ಐಟಿ-ಬಿಟಿ, ಬಿಪಿಓ, ಆಟೋ ಮೊಬೈಲ್, ಎಜುಕೇಶಷನ್, ಹೌಸ್ ಕೀಪಿಂಗ್, ಫಾರ್ಮಸಿ ಮತ್ತು ಇನ್ನಿತರ ಕ್ಷೇತ್ರಗಳಿಗೆ ವಿವಿಧ ಕಂಪನಿಗಳು ನೇಮಕಾತಿ ಮಾಡಿಕೊಳ್ಳಲಿವೆ.

ಐಟಿಐ, ಡಿಪ್ಲೊಮಾ, ಯಾವುದೇ ಪದವಿ, ಸ್ನಾತಕೋತ್ತರ ಪದವಿ, ಎಂಬಿಎ, ಇಂಜಿನಿಯರಿಂಗ್, ಇನ್ನಿತರೆ ಕೋರ್ಸ್‌ಗಳನ್ನು ವ್ಯಾಸಂಗ ಮಾಡಿದವರು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ.
ಅನುಭವ ಇರುವ ಅಭ್ಯರ್ಥಿಗಳು ಅಥವ ಹೊಸದಾಗಿ ಕೆಲಸ ಹುಡುಕುತ್ತಿರುವವರು ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ. ಅಭ್ಯರ್ಥಿಗಳು ಕನಿಷ್ಠ 10 ರೆಸ್ಯೂಮ್‌ನೊಂದಿಗೆ ಪಾಲ್ಗೊಳ್ಳಬೇಕು ಎಂದು ಕರೆ ನೀಡಲಾಗಿದೆ.
ಇನ್ಫೋಸಿಸ್, ಟಿಸಿಎಸ್, ಬಾಲ್ಕ್, ಮಾರುತಿ, ಎಸ್‌ಬಿಐ ಲೈಫ್, ಟೊಯೋಟಾ, ಇಂಡಸ್‌ಲ್ಯಾಂಡ್ ಬ್ಯಾಂಕ್, ಮೈಂಡ್ ಟ್ರೀ, ಎಲ್ & ಟಿ ಸೇರಿದಂತೆ 100ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿವೆ.
ಉದ್ಯೋಗ ಮೇಳ ನಡೆಯುವ ವಿಳಾಸ; 12/2/2023ರ ಭಾನುವಾರ ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯ ತನಕ ಉದ್ಯೋಗ ಮೇಳ ಶ್ರೀ ಕೃಷ್ಣ ಪಿಯು ಕಾಲೇಜು, ನಂ 2ಪಿ, ಐಟಿಐ ಲೇಔಟ್, ಕತ್ರಿಗುಪ್ಪೆ ಮುಖ್ಯ ರಸ್ತೆ, ಬಿಎಸ್‌ಕೆ 3ನೇ ಹಂತ, ಬೆಂಗಳೂರು ಇಲ್ಲಿ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆಗಳು 980005152, 7676338272, 9916735881.
ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ಆಸಕ್ತಿ ಇರುವ ಕಂಪನಿಗಳು 7975821231 ಸಂಖ್ಯೆಗೆ ಕರೆ ಮಾಡಬಹುದಾಗಿದೆ.












Click it and Unblock the Notifications