• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜನತಾ ಸೇವಾ ಸಹಕಾರಿ ಬ್ಯಾಂಕ್ ನೇಮಕಾತಿ; ಬೆಂಗಳೂರಲ್ಲಿ ಕೆಲಸ

|
Google Oneindia Kannada News

ಬೆಂಗಳೂರು, ನವೆಂಬರ್ 21; ಜನತಾ ಸೇವಾ ಸಹಕಾರಿ ಬ್ಯಾಂಕಿನಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಕರೆಯಲಾಗಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಕೆ ಮಾಡಲು ನವೆಂಬರ್ 30 ಕೊನೆಯ ದಿನವಾಗಿದೆ.

12 ಡೇಟಾ ಬೇಸ್ ಅಡ್ಮಿನಿಸ್ಟ್ರೇಟರ್ ಮತ್ತು 2 ಜ್ಯೂನಿಯರ್ ಅಸಿಸ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಕರೆಯಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಕೆಲಸ ಮಾಡಬೇಕಿದೆ.

ಬಿಎಂಟಿಸಿ ನೇಮಕಾತಿ; 10ನೇ ತರಗತಿ ಪಾಸಾದವರು ಅರ್ಜಿ ಹಾಕಿ ಬಿಎಂಟಿಸಿ ನೇಮಕಾತಿ; 10ನೇ ತರಗತಿ ಪಾಸಾದವರು ಅರ್ಜಿ ಹಾಕಿ

ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದಿರಬೇಕು. ಎಸ್‌ಎಸ್‌ಎಲ್‌ಸಿ ಅಥವ ತತ್ಸಮಾನ ತರಗತಿಯಲ್ಲಿ ಕನ್ನಡ ಅಧ್ಯಯನ ಮಾಡಿರಬೇಕು. ಕನ್ನಡದಲ್ಲಿ ಓದಲು ಬರೆಯಲು ಬರಬೇಕು.

ಬಿಇಎಲ್ ನೇಮಕಾತಿ 2021: ಹಿರಿಯ ಇಂಜಿನಿಯರಿಂಗ್ ಹುದ್ದೆಗಳಿವೆ ಬಿಇಎಲ್ ನೇಮಕಾತಿ 2021: ಹಿರಿಯ ಇಂಜಿನಿಯರಿಂಗ್ ಹುದ್ದೆಗಳಿವೆ

ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿದೆ. ಡೇಟಾ ಬೇಸ್ ಅಡ್ಮಿನಿಸ್ಟ್ರೇಟರ್ ಹುದ್ದೆಗೆ ಅಭ್ಯರ್ಥಿ ಕನಿಷ್ಠ 5 ವರ್ಷಗಳ ಅನುಭವನ್ನು ಡೇಟಾ ಸೆಂಟರ್ ನಿರ್ವಹಣೆಯಲ್ಲಿ ಹೊಂದಿರಬೇಕು.

ಹುಬ್ಬಳ್ಳಿ; ಕೆಲಸ ಖಾಲಿ ಇದೆ, ನವೆಂಬರ್ 26ರೊಳಗೆ ಅರ್ಜಿ ಹಾಕಿ ಹುಬ್ಬಳ್ಳಿ; ಕೆಲಸ ಖಾಲಿ ಇದೆ, ನವೆಂಬರ್ 26ರೊಳಗೆ ಅರ್ಜಿ ಹಾಕಿ

ಜನತಾ ಸೇವಾ ಸಹಕಾರಿ ಬ್ಯಾಂಕ್ ನೇಮಕಾತಿ ನಿಯಮಗಳ ಅನ್ವಯ ಕನಿಷ್ಠ ವಯೋಮಿತಿ 18 ಮತ್ತು ಗರಿಷ್ಠ ವಯೋಮಿತಿ 35 ವರ್ಷಗಳು. ಒಬಿಸಿ ಅಭ್ಯರ್ಥಿಗಳಿಗೆ 3, ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳ ಜೊತೆ ಸಲ್ಲಿಸಬೇಕು.

ದಾಖಲೆಗಳು

* ವ್ಯಾಸಂಗದ ಪ್ರಮಾಣ ಪತ್ರಗಳು (ಅಂಕಪಟ್ಟಿ & ಡಿಗ್ರಿ ಪ್ರಮಾಣ ಪತ್ರಗಳು)
* ಆಧಾರ್ ಕಾರ್ಡ್‌, ವಿಳಾಸದ ದೃಢೀಕರಣ
* 3 ಪಾಸ್ ಪೋರ್ಟ್ ಸೈಜಿನ ಕಲರ್ ಪೋಟೋಗಳು
* ಎಸ್‌ಸಿ/ ಎಸ್‌ಟಿ ಅಭ್ಯರ್ಥಿಯಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರ
* ಅನುಭವದ ಪ್ರಮಾಣ ಪತ್ರಗಳು

ಅರ್ಜಿ ಸಲ್ಲಿಸಲು ವಿಳಾಸ; Janatha Cooperative Bank, Post Box number 3, Hampinagara Bangalore 560014.

ಅರ್ಜಿ ನಮೂನೆ, ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ; ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಗಂಗಾವತಿಯಲ್ಲಿ ನಡೆಯುತ್ತಿರುವ ವಿವಿಧ ವೃತ್ತಿಗಳಿಗಾಗಿ 2021-22ನೇ ಸಾಲಿನಲ್ಲಿ ತರಬೇತಿದಾರರಿಗೆ ತರಬೇತಿಯನ್ನು ನೀಡಲು ಅತಿಥಿ ಬೋಧಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಕೆ ಅವಧಿಯನ್ನು ನವೆಂಬರ್ 25ರ ತನಕ ವಿಸ್ತರಣೆ ಮಾಡಲಾಗಿದೆ.

ಎಲೆಕ್ಟ್ರಿಷಿಯನ್ ಹುದ್ದೆಗೆ ಐಟಿಐ/ ಎಟಿಎಸ್/ ಡಿಇಇ/ ಬಿಇ (ಎಲೆಕ್ಟ್ರಿಕಲ್) ವಿದ್ಯಾರ್ಹತೆ. ಫಿಟ್ಟರ್ ಹುದ್ದೆಗೆ ಐಟಿಐ/ ಎಟಿಎಸ್/ ಡಿಇಇ/ ಬಿಇ (ಮೆಕ್ಯಾನಿಕಲ್) ವಿದ್ಯಾರ್ಹತೆ. ಎಲೆಕ್ಟ್ರಾನಿಕ್ ಮೆಕ್ಯಾನಿಕ್ ಹುದ್ದೆಗೆ ಐಟಿಐ/ ಎಟಿಎಸ್ ಡಿಇ&ಸಿ. ಮೆಕ್ಯಾನಿಕ್ ಮೋಟಾರ್ ವೆಹಿಕಲ್ ಹುದ್ದೆಗೆ ಐಟಿಐ/ ಎಟಿಎಸ್/ ಡಿಪ್ಲೊಮಾ ಆಟೋಮೊಬೈಲ್/ ಡಿಎಂಇ ವಿದ್ಯಾರ್ಹತೆ. ವರ್ಕ್‌ ಶಾಪ್ ಕ್ಯಾಲ್ಕುಲೇಷನ್ ಹುದ್ದೆಗೆ ಡಿಎಂಇ/ ಬಿಇ ವಿದ್ಯಾರ್ಹತೆ ಹೊಂದಿರುವ ಕನಿಷ್ಟ 2 ವರ್ಷಗಳ ಅನುಭವವಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ನವೆಂಬರ್ 25 ಕೊನೆಯ ದಿನವಾಗಿದೆ. ನಿಗದಿತ ದಿನಾಂಕದೊಳಗೆ ಅಭ್ಯರ್ಥಿಗಳು ಖುದ್ದಾಗಿ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಗಂಗಾವತಿ ಮೊಬೈಲ್ ಸಂಖ್ಯೆ 9448259832 ಕ್ಕೆ ಕರೆ ಮಾಡಬಹುದಾಗಿದೆ.

ಪ್ರೊಸೆಸ್ ಜಾರಿಕಾರ ಹುದ್ದೆಗೆ ಅರ್ಜಿ ಹಾಕಿ; ಶಿವಮೊಗ್ಗ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಘಟಕದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ 7 ಸಂಖ್ಯೆಯ ಪ್ರೊಸೆಸ್ ಜಾರಿಕಾರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತರು ಅರ್ಜಿಗಳನ್ನು ಶಿವಮೊಗ್ಗದ ಜಿಲ್ಲಾ ನ್ಯಾಯಾಲಯ ವೆಬ್‍ಸೈಟ್ https://districts.ecourts.gov.in/shivamogga ಅಥವಾ http://karnatakajudiciary.kar.nic.in/districtrecruitment.asp ನಲ್ಲಿ ನೀಡಲಾದ ಲಿಂಕ್ ಮೂಲಕ ನವೆಂಬರ್ 23ರಿಂದ ಡಿಸೆಂಬರ್ 30ರೊಳಗೆ ಸಲ್ಲಿಸಬಹುದು.

   Shreyas Iyer ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ವಿಶೇಷ ಕ್ಷಣಗಳು | Oneindia Kannada

   ಅರ್ಜಿ ಸಲ್ಲಿಸುವವರು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತೀರ್ಣ ಹೊಂದಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಕನಿಷ್ಟ ವಯೋಮಿತಿ 18 ವರ್ಷ ಮತ್ತು ಸಾಮಾನ್ಯ ವರ್ಗಕ್ಕೆ 35. 2ಎ/ 2ಬಿ/ 3ಎ/ 3ಬಿ ಅಭ್ಯರ್ಥಿಗೆ 38. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗದ ಅಭ್ಯರ್ಥಿಗೆ 40 ವರ್ಷಗಳ ವಯೋಮಿತಿ ನಿಗದಿ ಮಾಡಲಾಗಿದೆ.

   English summary
   Janatha Seva Cooperative Bank invited applications for various post. Candidates can apply till November 30.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X