ಇಂದೇ ತಿಳಿಯಿರಿ: ಜಗತ್ತಿನಲ್ಲೇ ಅತಿಹೆಚ್ಚು ಮಂದಿಗೆ ಉದ್ಯೋಗ ಕೊಟ್ಟಿರುವ ಸಂಸ್ಥೆ ಯಾವುದು?
ನವದೆಹಲಿ, ಅಕ್ಟೋಬರ್ 29: ಜಗತ್ತಿನಲ್ಲೇ ಅತಿದೊಡ್ಡ ಉದ್ಯೋಗದಾತ ಸಂಸ್ಥೆ ಯಾವುದು ಎಂಬುದನ್ನು ಉತ್ತರ ಸಿಕ್ಕಿದೆ. ಭಾರತದ ರಕ್ಷಣಾ ಸಚಿವಾಲಯವು ವಿಶ್ವದ ಅತಿದೊಡ್ಡ ಉದ್ಯೋಗದಾತ ಎಂದು ಸ್ಟ್ಯಾಟಿಸ್ಟಾ ವರದಿ ಹೇಳಿದೆ. ಈ ಸಚಿವಾಲಯವು ಸಂಯೋಜಿತ ಸಕ್ರಿಯ ಸೇವಾ ಸಿಬ್ಬಂದಿ, ಮೀಸಲುದಾರರು ಮತ್ತು ನಾಗರಿಕ ಸಿಬ್ಬಂದಿ ಸೇರಿದಂತೆ ಒಟ್ಟು 29 ಲಕ್ಷಕ್ಕೂ ಅಧಿಕ ಸಿಬ್ಬಂದಿಯನ್ನು ಸಚಿವಾಲಯವು ಒಳಗೊಂಡಿದೆ ಎಂದು ವರದಿ ಹೇಳಿದೆ.
2022ರಲ್ಲಿ ವಿಶ್ವದಾದ್ಯಂತ ಅತಿದೊಡ್ಡ ಉದ್ಯೋಗಿಗಳನ್ನು ಹೊಂದಿರುವ ಉದ್ಯೋಗದಾತರ ಕುರಿತು ಸ್ಟ್ಯಾಟಿಸ್ಟಾ ಇನ್ಫೋಗ್ರಾಫಿಕ್ ಪ್ರಕಾರ 2.91 ಮಿಲಿಯನ್ ಜನರನ್ನು ನೇಮಿಸಿಕೊಂಡಿರುವ ಯುಎಸ್ ಡಿಪಾರ್ಟ್ಮೆಂಟ್ ಆಫ್ ಡಿಫೆನ್ಸ್ ಭಾರತದ ರಕ್ಷಣಾ ಸಚಿವಾಲಯಕ್ಕೆ ಸನ್ನಿಹಿತದಲ್ಲಿದೆ.
ಸ್ಟ್ಯಾಟಿಸ್ಟಾ ಜರ್ಮನಿ ಮೂಲದ ಖಾಸಗಿ ಸಂಸ್ಥೆಯಾಗಿದ್ದು, ಅದು ಪ್ರಪಂಚದಾದ್ಯಂತ ವಿವಿಧ ಸಮಸ್ಯೆಗಳ ಬಗ್ಗೆ ಡೇಟಾ ಮತ್ತು ಅಂಕಿ-ಅಂಶಗಳನ್ನು ಒದಗಿಸುತ್ತದೆ. ಅದೇ ರೀತಿ ಜಗತ್ತಿನ ಅತಿದೊಡ್ಡ ಉದ್ಯೋಗದಾತ ಸಂಸ್ಥೆ ಯಾವುದು ಎಂಬುದರ ಬಗ್ಗೆ ದತ್ತಾಂಶವನ್ನು ಒದಗಿಸಿದೆ. ಈ ಅಂಕಿ-ಅಂಶಗಳ ಪ್ರಕಾರ, ಭಾರತೀಯ ರಕ್ಷಣಾ ಸಚಿವಾಲಯವು ಹೇಗೆ ಅತಿದೊಡ್ಡ ಉದ್ಯೋಗದಾತ ಸಂಸ್ಥೆಯಾಗಿದೆ ಎಂಬುದನ್ನು ವರದಿಯಲ್ಲಿ ತಿಳಿದುಕೊಳ್ಳೋಣ.

ಅಗ್ರಸ್ಥಾನದಲ್ಲಿ ಭಾರತದ ರಕ್ಷಣಾ ಸಚಿವಾಲಯ
"ವಿಶ್ವದ ಅತಿದೊಡ್ಡ ಉದ್ಯೋಗದಾತರ ಶ್ರೇಯಾಂಕದಲ್ಲಿ ಭಾರತದ ರಕ್ಷಣಾ ಸಚಿವಾಲಯವು ಅಗ್ರಸ್ಥಾನದಲ್ಲಿದೆ. ಸಕ್ರಿಯ ಸೇವಾ ಸಿಬ್ಬಂದಿ, ಮೀಸಲುದಾರರು ಮತ್ತು ನಾಗರಿಕ ಸಿಬ್ಬಂದಿಯನ್ನು ಒಟ್ಟುಗೂಡಿಸಿ, ಒಟ್ಟು ಹೆಡ್‌ಕೌಂಟ್ 2.92 ಮಿಲಿಯನ್‌ಗಿಂತ ಹೆೆಚ್ಚು ಸಿಬ್ಬಂದಿಯನ್ನು ಹೊಂದಿದೆ. ಇದು ಯುನೈಟೆಡ್ ಸ್ಟೇಟ್ಸ್ ಸಮಾನವಾದ ರಕ್ಷಣಾ ಇಲಾಖೆಗಿಂತ ಮುಂದಿದೆ," ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಚೀನಾದ ಆರ್ಮಿಯಲ್ಲಿ 25 ಲಕ್ಷ ಉದ್ಯೋಗಿಗಳು
ಚೀನಾದಲ್ಲಿ, ನಾಗರಿಕ ಸ್ಥಾನಗಳನ್ನು ಒಳಗೊಂಡಿಲ್ಲದ ಪೀಪಲ್ಸ್ ಲಿಬರೇಶನ್ ಆರ್ಮಿಯು ಸುಮಾರು 25 ಲಕ್ಷ ಜನರನ್ನು ನೇಮಿಸಿಕೊಂಡಿದೆ ಎಂದು ಹ್ಯಾಂಬರ್ಗ್ ಮೂಲದ ಸಂಸ್ಥೆಯು ಮಾರುಕಟ್ಟೆ ಮತ್ತು ಗ್ರಾಹಕರ ಡೇಟಾದಲ್ಲಿ ಪರಿಣತಿಯನ್ನು ಹೊಂದಿದೆ. "ಯುಎಸ್ ಡಿಪಾರ್ಟ್ಮೆಂಟ್ ಆಫ್ ಡಿಫೆನ್ಸ್‌ಗೆ ಸಮಾನವಾದ ಚೀನಾದ ಸೆಂಟ್ರಲ್ ಮಿಲಿಟರಿ ಕಮಿಷನ್ ತನ್ನ ಸೇನೆಯಲ್ಲಿ 68 ಲಕ್ಷ ಜನರನ್ನು ಹೊಂದಿರಬಹುದು, ಆದರೂ ಆ ಅಂಕಿ-ಅಂಶವನ್ನು ಪಟ್ಟಿಯಲ್ಲಿ ಸೇರಿಸಲು ಸಾಕಷ್ಟು ವಿಶ್ವಾಸಾರ್ಹವೆಂದು ಪರಿಗಣಿಸಲಾಗಿದೆ," ಎಂದು ವರದಿ ಸೇರಿಸುತ್ತದೆ.

ಯಾವ ಕಂಪನಿಯಲ್ಲಿ ಅತಿಹೆಚ್ಚು ಉದ್ಯೋಗಿಗಳು ಇರುವರು?
ಈ ವರದಿಯ ಪ್ರಕಾರ, ವಿಶ್ವದ ಯಾವುದೇ ಕಂಪನಿಯು ವಾಲ್‌ಮಾರ್ಟ್‌ಗಿಂತ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿಲ್ಲ. "ಯುಎಸ್ ಚಿಲ್ಲರೆ ದೈತ್ಯ ಕಂಪನಿಯಲ್ಲಿ 23 ಲಕ್ಷ ಉದ್ಯೋಗಿಗಳಿದ್ದಾರೆ ಎಂದು ಇತ್ತೀಚಿನ ಅಂಕಿ-ಅಂಶಗಳಿಂದ ತಿಳಿದು ಬಂದಿದೆ. 16 ಲಕ್ಷ ಉದ್ಯೋಗಿಗಳೊಂದಿಗೆ ಅಮೆಜಾನ್ ಎಂಬ ಬೆಹೆಮೊತ್ ಕೂಡ ಎರಡನೇ ಸ್ಥಾನದಲ್ಲಿದೆ," ಎಂದು ಸ್ಟ್ಯಾಟಿಸ್ಟಾ ಉಲ್ಲೇಖಿಸಿದೆ. 2021ರಲ್ಲಿ ಒಟ್ಟು ಜಾಗತಿಕ ಮಿಲಿಟರಿ ವೆಚ್ಚವು USD 2113 ಶತಕೋಟಿ ತಲುಪಿದ ನಂತರ ಸ್ಟ್ಯಾಟಿಸ್ಟಾ ನೀಡಿರುವ ಇತ್ತೀಚಿನ ಇನ್ಫೋಗ್ರಾಫಿಕ್ ಮಾಹಿತಿಯಲ್ಲಿ ಯಾವುದೇ ಆಶ್ಚರ್ಯವಿಲ್ಲ.

ಅತಿಹೆೆಚ್ಚು ಹಣವನ್ನು ಸೇನೆಗಾಗಿ ಖರ್ಚು ಮಾಡಿದ ದೇಶಗಳು
ಸ್ಟಾಕ್‌ಹೋಮ್ ಇಂಟರ್‌ನ್ಯಾಶನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (SIPRI) ಪ್ರಕಾರ, 2021ರಲ್ಲಿ ಅತಿಹೆಚ್ಚು ಖರ್ಚು ಮಾಡಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಐದು ರಾಷ್ಟ್ರಗಳಿವೆ. ಯುನೈಟೆಡ್ ಸ್ಟೇಟ್ಸ್, ಚೀನಾ, ಭಾರತ, ಯುನೈಟೆಡ್ ಕಿಂಗ್‌ಡಮ್ ಮತ್ತು ರಷ್ಯಾದ ಒಟ್ಟಾರೆ ವೆಚ್ಚದ ಶೇ.62 ಪ್ರತಿಶತವನ್ನು ಹೊಂದಿವೆ. ಯುಎಸ್ ಮಿಲಿಟರಿ ವೆಚ್ಚವು 2021ರಲ್ಲಿ 801 ಬಿಲಿಯನ್ ಯುಎಸ್ ಡಾಲರ್ ಆಗಿದ್ದರೆ, ವಿಶ್ವದ ಎರಡನೇ ಅತಿ ದೊಡ್ಡ ಖರ್ಚು ಮಾಡುವ ಚೀನಾ ತನ್ನ ಮಿಲಿಟರಿಗಾಗಿ ಅಂದಾಜು 293 ಯುಎಸ್ ಡಾಲರ್ ಅನ್ನು ಖರ್ಚು ಮಾಡಿದೆ.
ಇದರ ಮಧ್ಯೆ SIPRI ವರದಿಯು ಭಾರತದ ಮಿಲಿಟರಿ ವೆಚ್ಚವು 76.6 ಶತಕೋಟಿ ಯುಎಸ್ ಡಾಲರ್ ಆಗಿದೆ. ಭಾರತವು ಸೇನೆಗಾಗಿ ಅತಿಹೆಚ್ಚು ಹಣವನ್ನು ಖರ್ಚು ಮಾಡಿದ ಮೂರನೇ ರಾಷ್ಟ್ರವಾಗಿದೆ.












Click it and Unblock the Notifications