ಇಂಡಿಯನ್ ಬ್ಯಾಂಕಿನಲ್ಲಿ 324 ಪ್ರೊಬೆಷನರಿ ಅಧಿಕಾರಿ ಹುದ್ದೆಗಳಿವೆ
ಇಂಡಿಯನ್ ಬ್ಯಾಂಕಿನಲ್ಲಿ 324 ಪ್ರೊಬೆಷನರಿ ಆಫೀಸರ್ ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದೆ.ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಡಿಸೆಂಬರ್ 22, 2016 ಕೊನೆ ದಿನಾಂಕವಾಗಿದೆ.
ಬೆಂಗಳೂರು, ಡಿಸೆಂಬರ್ 16: ಇಂಡಿಯನ್ ಬ್ಯಾಂಕಿನಲ್ಲಿ 324 ಪ್ರೊಬೆಷನರಿ ಆಫೀಸರ್ ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು 2017-18ನೇ ಸಾಲಿನ ಮಣಿಪಾಲ್ ಗ್ಲೋಬಲ್ ಎಜುಕೇಷನ್ ಸರ್ವೀಸಸ್ ನಲ್ಲಿ ಕೋರ್ಸ್ ಗೆ ಅರ್ಹರಾಗುತ್ತದೆ. ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಡಿಸೆಂಬರ್ 22, 2016 ಕೊನೆ ದಿನಾಂಕವಾಗಿದೆ.
ಹುದ್ದೆ: ಪ್ರೊಬೆಷನರಿ ಅಧಿಕಾರಿ
ಒಟ್ಟು ಹುದ್ದೆ: 324
ಎಸ್ಸಿ: 48
ಎಸ್ಟಿ: 24
ಒಬಿಸಿ: 87
ಮೀಸಲಾತಿ ರಹಿತ: 165

ವಯೋಮಿತಿ: 01/07/2016ರ ಅನ್ವಯ ಅಭ್ಯರ್ಥಿಯ ವಯಸ್ಸು 20 ರಿಂದ 28 ವಯೋಮಿತಿಯೊಳಗಿರಬೇಕು. (02/07/1988 ರಿಂದ 01/07/1996ರೊಳಗೆ ಜನಿಸಿರಬೇಕು) ಎಸ್ ಸಿ ಹಾಗೂ ಎಸ್ಟಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ವಿನಾಯಿತಿಯಿದೆ.
ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಕನಿಷ್ಠ ಶೇ 60ರಷ್ಟು ಅಂಕ (50% ಎಸ್ ಸಿ/ಎಸ್ ಟಿ ಅಭ್ಯರ್ಥಿಗಳಿಗೆ)
ಆಯ್ಕೆ ಪ್ರಕ್ರಿಯೆ: ಆನ್ ಲೈನ್ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ.
ಆಯ್ಕೆ ಶುಲ್ಕ: 100 ರು -ಎಸ್ ಸಿ/ಎಸ್ಟಿ ಅಭ್ಯರ್ಥಿಗಳಿಗೆ. ಸಾಮಾನ್ಯ ವರ್ಗಕ್ಕೆ 600 ರು. ಆನ್ ಲೈನ್, ಡೆಬಿಟ್ ಕಾರ್ಡ್ (RuPay/ Visa/ Master Card/ Maestro), ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 22/12/2016
ಅಭ್ಯರ್ಥಿ ಸಿಗಬಹುದಾದ ಸಂಬಳ, ಪರೀಕ್ಷಾ ದಿನಾಂಕ ಇನ್ನಿತರೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಜಾಹೀರಾತನ್ನು ಇಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ
(ಒನ್ಇಂಡಿಯಾ ಸುದ್ದಿ)
Download











Click it and Unblock the Notifications