2047ಕ್ಕೆ ಜಗತ್ತಿನಲ್ಲೇ ಭಾರತ ಆರ್ಥಿಕತೆಯಲ್ಲಿ ಬಲಿಷ್ಠ ರಾಷ್ಟ್ರ ಆಗಲಿದೆ: ಕೇಂದ್ರ ಸಚಿವ

ಹುಬ್ಬಳ್ಳಿ, ಜೂನ್‌, 13: ದೇಶದಲ್ಲಿ ಸುಮಾರು 10 ಲಕ್ಷ ಜನರಿಗೆ ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಉದ್ಯೋಗ ನೀಡುವ ಸಲುವಾಗಿ ರೋಜಗಾರ್‌ ಮೇಳವನ್ನು ಆರಂಭಿಸಲಾಗಿದೆ. ಹಾಗೆಯೇ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಹೊಸ ಹೊಸ ವಿಚಾರಗಳನ್ನು ತಿಳಿಸುತ್ತಿದ್ದಾರೆಂದು ಕೇಂದ್ರ ಸಚಿವ ಭಗವಂತ ಖುಬಾ ಹುಬ್ಬಳ್ಳಿಯಲ್ಲಿ ಹೇಳಿದರು.

ನಗರದ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮೋದಿಯವರ ವ್ಯಕ್ತಿತ್ವದಿಂದ ಇವತ್ತು ದೇಶ ಆರ್ಥಿಕವಾಗಿ ಮುಂದೆ ಬರುತ್ತಿದೆ. ಮುಂಬರುವಂತಹ ದಿನಗಳಲ್ಲಿ ಅಂದರೆ 2030-47ರಲ್ಲಿ ಭಾರತ ಜಗತ್ತಿನ ಮೂರನೇ ಆರ್ಥಿಕವಾಗಿ ಬಲಿಷ್ಠವಾಗಿ ಹೊರಹೊಮ್ಮಲಿದೆ. ಈಗ ಎಲ್ಲರೂ ದುಡಿಯುತ್ತಿದ್ದಾರೆ. ಇದರಿಂದಾಗಿ ದೇಶ ಅತೀ ವೇಗವಾಗಿ ಬೆಳೆಯುತ್ತಿದೆ. ಇನ್ನು ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಯಾರೆಲ್ಲ ಪರೀಕ್ಷೆ ಬರೆದಿದ್ದಾರೆಯೋ ಅವರಿಗೆಲ್ಲ ಯಾವುದೇ ರೀತಿಯ ತಾರತಮ್ಯ ಮಾಡದೇ ಉದ್ಯೋಗ ನೀಡಲಾಗುತ್ತಿದೆ ಎಂದರು.

India will become strongest country

ಇನ್ನು ಬ್ಯಾಂಕಿಂಗ್‌ಗಳಲ್ಲಿ ಕರ್ನಾಟಕದವರಿಗೆ ಅನ್ಯಾಯವಾಗುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಪರೀಕ್ಷೆಗೆ ಸಂಬಂಧಿಸಿದ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಿ. ತಾವು ಕೂಡ ಉತ್ತೀರ್ಣರಾಗಬೇಕೆಂದು ಸಲಹೆ ಮತ್ತು ಕಿವಿ ಮಾತು ಹೇಳಿದರು. ನನ್ನ ಯೋಗ್ಯತೆಗೆ ತಕ್ಕಂತೆ ಪ್ರಧಾನ ಮಂತ್ರಿಗಳು ಜವಾಬ್ದಾರಿಯನ್ನು ಕೊಟ್ಟಿದ್ದಾರೆ. ಆದ್ದರಿಂದ ನಾನು ಯಾವುದನ್ನು ಅಪೇಕ್ಷೆ ಪಡದೆನೇ ಪಕ್ಷ ಒಂದಿಲ್ಲೊಂದು ಜವಾಬ್ದಾರಿ ಕೊಡುತ್ತಾ ಬಂದಿದೆ. ಅದನ್ನು ಪ್ರಾಮಾಣಿಕ ಮತ್ತು ನಿಷ್ಠೆಯಿಂದ ನಿರ್ವಹಿಸುತ್ತಾ ಬಂದಿದೇನೆ ಎಂದರು.

ಇನ್ನು ಹಾಲಿ ಸಂಸದರಿಗೆ ಈ ಬಾರಿ ಟಿಕೇಟ್ ತಪ್ಪುತ್ತದೆ ಎಂಬ ಪ್ರಶ್ನೆಗೆ ಅದೆಲ್ಲ ಸುಳ್ಳು ಸುದ್ದಿ, ಅದಕ್ಕೆ ತಲೆಕೊಡುವುದಿಲ್ಲ. ಬಿಜೆಪಿಯಲ್ಲಿ ಚುನಾವಣೆ ಬಂದಾಗ ಬದಲಾವಣೆ ಮಾಡುವುದು ಕಾಮನ್. ಆದ್ರ ನಮಗೆ ಚುನಾವಣೆ ರಣತಂತ್ರ. ಜನರಿಗೆ ಗ್ಯಾರೆಂಟಿ ಟೋಪಿ ಹಾಕಿ ಮುಂದಿನ ದಿನಗಳಲ್ಲಿ ಆರ್ಥಿಕವಾಗಿ ಹಿಂದಾಗುತ್ತದೆ ಎಂದು ಕೇಂದ್ರ ಸಚಿವ ಭಗವಂತ ಖುಬಾ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+