IISc Recruitment: ಬೆಂಗಳೂರಲ್ಲಿ ಕೈತುಂಬ ವೇತನದ ಉದ್ಯೋಗ ಖಾಲಿ ಇದೆ, ಮಾಹಿತಿ
ಬೆಂಗಳೂರು, ಮೇ 22: ಭಾರತೀಯ ವಿಜ್ಞಾನ ಸಂಸ್ಥೆ (IISc)ಯು ಉದ್ಯೋಗ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ತನ್ನಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಬೆಂಗಳೂರಿನಲ್ಲಿ ಕೆಲಸ ಮಾಡಲು ಇಚ್ಛಿಸುವ ಅಭ್ಯರ್ಥಿಗಳಿಗೆ ಜೂನ್ 10ರವರೆಗೂ ಅರ್ಜಿ ಸಲ್ಲಿಸಲು ಅವಕಾಶ ಇದೆ.
ಭಾರತೀಯ ವಿಜ್ಞಾನ ಸಂಸ್ಥೆ (IISc) ಯಲ್ಲಿ ಒಟ್ಟು ಒಂದು ಕ್ಲಿನಿಕಲ್ ಸೈಕಾಲಜಿಸ್ಟ್ ಹುದ್ದೆ ಖಾಲಿ ಇದೆ. ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಹಾಕುವಂತೆ ಸಂಸ್ಥೆ ತಿಳಿಸಿದೆ. ಆಯ್ಕೆ ಆಗುವವರಿಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೈತುಂಬ ವೇತನ ಕೆಲಸ ಸಿಗಲಿದೆ.

ಅಭ್ಯರ್ಥಿಗಳು ಕೊನೆಯ ದಿನಾಂಕವರೆಗೆ ಕಾಯದೇ ಈ ಕೂಡಲೇ ಅರ್ಜಿಗಳನ್ನು ಹಾಕಿದರೆ ಉತ್ತಮ. ಅದಕ್ಕೂ ಮೊದಲು ವಯೋಮಿತಿ, ವಿದ್ಯಾರ್ಹತೆ, ವೇತನ ಎಷ್ಟು ಎಂಬೆಲ್ಲ ನೇಮಕಾತಿ ಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.
ನೇಮಕಾತಿ ವಿವರ ಹೀಗಿದೆ
ಸಂಸ್ಥೆ ಹೆಸರು: ಭಾರತೀಯ ವಿಜ್ಞಾನ ಸಂಸ್ಥೆ (IISc)
ಹುದ್ದೆ ಹೆಸರು: ಕ್ಲಿನಿಕಲ್ ಸೈಕಾಲಜಿಸ್ಟ್
ಒಟ್ಟು ಹುದ್ದೆ: ಒಂದು
ಪೋಸ್ಟಿಂಗ್ : ಬೆಂಗಳೂರು
ಅರ್ಜಿ ಸಲ್ಲಿಕೆ ಕೊನೆ ದಿನ: ಮುಂದಿನ ಜೂನ್ 10
ಮಾಸಿಕ ವೇತನ: 50,000 ರೂಪಾಯಿ
ವಿದ್ಯಾರ್ಹತೆ ಏನಿರಬೇಕು?
ಭಾರತೀಯ ವಿಜ್ಞಾನ ಸಂಸ್ಥೆ ನೇಮಕಾತಿಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಎಂಎಸ್ಸಿ, ಎಂ.ಫಿಲ್, ಪಿಎಸ್ವೈ.ಡಿ ಪದವಿ ಪಡೆದಿರಬೇಕು ಎಂದು ಐಐಎಸ್‌ಸಿ ಅಧಿಸೂಚನೆ ತಿಳಿಸಿದೆ.
ವಯೋಮಿತಿ ಮಾಹಿತಿ
ಭಾರತೀಯ ವಿಜ್ಞಾನ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 52 ವರ್ಷ ಮೀರಿರಬಾರದು ಎಂದು ತಿಳಿಸಲಾಗಿದೆ. ಆಯಾ ಜಾತಿ ಮೀಸಲಾತಿಗೆ ಅನುಗುಣವಾಗಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ತಕ್ಕಮಟ್ಟಿನ ಸಡಿಲಿಕೆ ಸಿಗಲಿದೆ.

ಅಭ್ಯರ್ಥಿಗಳ ಆಯ್ಕೆ ಹೇಗೆ?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು. ಯಾವ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವನ್ನು ನಿಗದಿ ಮಾಡಿಲ್ಲ. ಸಂದರ್ಶನದಲ್ಲಿ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ಕೊಟ್ಟು ಮಾಸಿಕ 50000 ರೂ. ವೇತನ ನೀಡಲಾಗುವುದು ಎಂದು ಭಾರತೀಯ ವಿಜ್ಞಾನ ಸಂಸ್ಥೆ ತಿಳಿಸಿದೆ.
ಅರ್ಜಿ ಸಲ್ಲಿಕೆ ವಿಧಾನ
ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದೆ. ಅದಕ್ಕಾಗಿ ನೀವು ಇಲ್ಲಿ ನೀಡಲಾಗಿರುವ ಅಧಿಕೃತ ವೆಬ್‌ಸೈಟ್ ಮೂಲಕ (https://recruitment.iisc.ac.in/Temporary_Positions/) ಈ ಕೂಡಲೇ ಅರ್ಜಿ ಹಾಕೇಬೇಕಿದೆ.
ನೆನಪಿಡಬೇಕಾದ ದಿನಗಳು
IISc ಅರ್ಜಿ ಸಲ್ಲಿಕೆ ಆರಂಭ ದಿನ: ಮೇ 21
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 2024 ಜೂನ್ 10.












Click it and Unblock the Notifications