ಐಬಿಪಿಎಸ್ ನೇಮಕಾತಿ 2022; ಯಾವ ಬ್ಯಾಂಕ್‌ಗಳಲ್ಲಿ ಎಷ್ಟು ಹುದ್ದೆಗಳಿವೆ
ಬೆಂಗಳೂರು, ಆಗಸ್ಟ್ 02: ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (ಐಬಿಪಿಎಸ್) 6432 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಪ್ರೊಬೆಷನರಿ ಆಫೀಸರ್(PO) ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಗಸ್ಟ್ 22ರ ತನಕ ಅರ್ಜಿ ಸಲ್ಲಿಸಬಹುದು.
ದೇಶಾದ್ಯಾಂತ ಖಾಲಿ ಇರುವ ಕ್ಲರ್ಕ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಕರೆದಿದೆ. "ಪಾರ್ಟಿಸಿಪೇಟಿಂಗ್ ಬ್ಯಾಂಕ್‌ಗಳಲ್ಲಿ ಕ್ಲೆರಿಕಲ್ ಕೇಡರ್ ಹುದ್ದೆಗಳಿಗೆ ಸಿಬ್ಬಂದಿಯ ಆಯ್ಕೆಗಾಗಿ ಮುಂದಿನ ಸಾಮಾನ್ಯ ನೇಮಕಾತಿ ಪ್ರಕ್ರಿಯೆಗಾಗಿ ಆನ್‌ಲೈನ್ ಪರೀಕ್ಷೆ (ಪೂರ್ವಭಾವಿ ಮತ್ತು ಮುಖ್ಯ) ಅಕ್ಟೋಬರ್ 2022 ಮತ್ತು ನವೆಂಬರ್ 2022 ರಲ್ಲಿ ತಾತ್ಕಾಲಿಕವಾಗಿ ನಿಗದಿಪಡಿಸಲಾಗಿದೆ" ಎಂದು ಅಧಿಕೃತ ಪ್ರಕಟಣೆಯಲ್ಲಿ ಹೇಳಲಾಗಿದೆ.
ಸಂಸ್ಥೆ ಹೆಸರು: ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (ಐಬಿಪಿಎಸ್)
ಒಟ್ಟು ಹುದ್ದೆ : 6432
ಉದ್ಯೋಗ ಸಂಸ್ಥೆ: ಭಾರತದೆಲ್ಲೆಡೆ
ಹುದ್ದೆ ಹೆಸರು: ಪ್ರೊಬೆಷನರಿ ಆಫೀಸರ್(PO)
ಸಂಬಳ ವಿವರ: 52000-55000/- ಪ್ರತಿ ತಿಂಗಳು
ಐಪಿಬಿಎಸ್ ಕ್ಲರ್ಕ್ ನೇಮಕಾತಿ 2022 ಬ್ಯಾಂಕ್ ವಿವರ:
ಬ್ಯಾಂಕ್ ಹೆಸರು- ಒಟ್ಟು ಹುದ್ದೆ
ಬ್ಯಾಂಕ್ ಆಫ್ ಬರೋಡಾ: 535
ಕೆನರಾ ಬ್ಯಾಂಕ್: 2500
ಪಂಜಾಬ್ ನ್ಯಾಷನಲ್ ಬ್ಯಾಂಕ್: 500
ಪಂಜಾಬ್ ಅಂಡ್ ಸಿಂದ್ ಬ್ಯಾಂಕ್: 253
ಯುಕೋಬ್ಯಾಂಕ್: 550
ಯೂನಿಯನ್ ಆಫ್ ಇಂಡಿಯಾ: 2094

ವಿದ್ಯಾರ್ಹತೆಯ ವಿವರ: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ ಅರ್ಹತೆ. ಹೆಚ್ಚಿನ ವಿವರಗಳನ್ನು ಅಧಿಸೂಚನೆಯಲ್ಲಿ ಪಡೆದುಕೊಳ್ಳಬಹುದು.
ವಯೋಮಿತಿ ವಿವರಗಳು: 20 ರಿಂದ 30ವರ್ಷ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷದ ವಯೋಮಿತಿ ಸಡಿಲಿಕೆ ಇರುತ್ತದೆ. ಪ್ರಿಲಿಮಿನರಿ ಪರೀಕ್ಷೆ, ಮುಖ್ಯ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
ಅರ್ಜಿ ಶುಲ್ಕ:
ಅರ್ಜಿಗಳನ್ನು ಸಲ್ಲಿಸುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲ ಅಭ್ಯರ್ಥಿಗಳು 155 ರೂ. (ಜಿಎಸ್ಟಿ ಸೇರಿಸಿ) ಶುಲ್ಕವನ್ನು ಪಾವತಿ ಮಾಡಬೇಕು. ಉಳಿದ ಅಭ್ಯರ್ಥಿಗಳು 850 ರೂ. ಶುಲ್ಕ ಪಾವತಿಸಬೇಕು. ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಶುಲ್ಕ ಪಾವತಿಸಬೇಕು.
ನೇಮಕಾತಿ ಪ್ರಕ್ರಿಯೆ:
ಪೂರ್ವಭಾವಿ ಪರೀಕ್ಷೆ (100 ಅಂಕಗಳು), ಮುಖ್ಯ ಪರೀಕ್ಷೆ(225 ಅಂಕಗಳು) ಹಾಗೂ ಸಂದರ್ಶನ
ಪ್ರಮುಖ ದಿನಾಂಕ
ಅರ್ಜಿ ಸಲ್ಲಿಸುವ ಆರಂಭ ದಿನಾಂಕ: ಆಗಸ್ಟ್ 02, 2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಆಗಸ್ಟ್ 22, 2022

ಅರ್ಜಿಗಳನ್ನು ಸಲ್ಲಿಕೆ ಮಾಡುವ ವಿಧಾನ:
ಅರ್ಜಿಗಳನ್ನು ಸಲ್ಲಿಕೆ ಮಾಡುವ ಮೊದಲು ನಿಗದಿತ ವೆಬ್ ಸೈಟ್‌ನಲ್ಲಿ ಸರಿಯಾದ ಇ-ಮೇಲ್ ಐಡಿ, ಮೊಬೈಲ್ ನಂಬರ್ ನಮೂದು ಮಾಡಬೇಕು. ಅರ್ಜಿಗಳನ್ನು ಸಲ್ಲಿಕೆ ಮಾಡಲು ವಿಳಾಸ ಸರಿಯಾಗಿದೆಯೆ ಪರಿಶೀಲಿಸಿ.
ಮೊದಲನೆಯದಾಗಿ IBPS ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುವುದನ್ನು ಖಚಿತಪಡಿಸಿಕೊಳ್ಳಿ.
ಆನ್‌ಲೈನ್ ಮೋಡ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.
IBPS ಪ್ರೊಬೇಷನರಿ ಆಫೀಸರ್ (PO) ಆನ್‌ಲೈನ್‌ನಲ್ಲಿ Apply ಕ್ಲಿಕ್ ಮಾಡಿ
IBPS ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ನಿಮ್ಮ ಇತ್ತೀಚಿನ ಫೋಟೋಗ್ರಾಫ್ (ಅನ್ವಯಿಸಿದರೆ) ಜೊತೆಗೆ ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.
ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)
IBPS ನೇಮಕಾತಿ 2022 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಲ್ಲಿಸು ಬಟನ್ ಅನ್ನು ಕೊನೆಯದಾಗಿ ಕ್ಲಿಕ್ ಮಾಡಿ. ಹೆಚ್ಚಿನ ಉಲ್ಲೇಖಕ್ಕಾಗಿ ಅರ್ಜಿ ಸಂಖ್ಯೆ ಅಥವಾ ವಿನಂತಿ ಸಂಖ್ಯೆಯನ್ನು ಅತ್ಯಂತ ಮುಖ್ಯವಾಗಿ ಕ್ಯಾಪ್ಚರ್ ಮಾಡಿ. ಸೇವ್ ಮಾಡಿಕೊಳ್ಳಿ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ibps.in ವೆಬ್ ಸೈಟ್‌ಗೆ ಭೇಟಿ ನೀಡಬಹುದಾಗಿದೆ.












Click it and Unblock the Notifications