Govt Jobs: ಎಸ್‌ಎಸ್‌ಎಲ್ಸಿ ಪಾಸಾದವರಿಗೆ ಸರ್ಕಾರಿ ಉದ್ಯೋಗ, ಮಾಸಿಕ ₹60,000 ವೇತನ
IB Recruitment: ಗೃಹ ಸಚಿವಾಲಯದ (MHA) ಅಧೀನದಲ್ಲಿ ಕೆಲಸ ಮಾಡುವ ಗುಪ್ತಚರ ಬ್ಯೂರೋ (IB) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಯಾರೆಲ್ಲ ಎಸ್‌ಎಸ್‌ಎಲ್‌ಸಿ ಮೇಲೆ ಸರ್ಕಾರಿ ಉದ್ಯೋಗ ಹುಡುಕುತ್ತಿದ್ದಿರೋ ಅವರಿಗೆಲ್ಲ ಇದೊಂದು ಉತ್ತಮ ಅವಕಾಶವಾಗಿದೆ.
ಗುಪ್ತಚರ ಬ್ಯೂರೋ (IB) ತನ್ನಲ್ಲಿ ಖಾಲಿ ಇರುವ 455 ಭದ್ರತಾ ಸಹಾಯಕ (ಮೋಟಾರು ಸಾರಿಗೆ) ಹುದ್ದೆಗಳಿಗೆ ನೇಮಕಾತಿ ಆರಂಭಿಸಿದೆ. ಅರ್ಹ ಅಭ್ಯರ್ಥಿಗಳು ಇದೇ ಸೆಪ್ಟೆಂಬರ್ 28 ರಂದು ಮಧ್ಯರಾತ್ರಿ 12 ಗಂಟೆ ಒಳಗೆ ಆನ್‌ಲೈನ್ ಮೂಲಕ (mha.gov.in) ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿ, ವಯೋಮಿತಿ, ವಿದ್ಯಾರ್ಹತೆ ವಿವರ ಇಲ್ಲಿದೆ.

ಐಬಿ ನೇಮಕಾತಿ ಸಂಪೂರ್ಣ ವಿವರ
ನೇಮಕಾತಿ ಸಂಸ್ಥೆ : ಗುಪ್ತಚರ ಬ್ಯೂರೋ (IB)
ಹುದ್ದೆ ಹೆಸರು : ಭದ್ರತಾ ಸಹಾಯಕ (ಮೋಟಾರು ಸಾರಿಗೆ) ಹುದ್ದೆ
ಒಟ್ಟು ಹುದ್ದೆಗಳು: 455
ವಿದ್ಯಾರ್ಹತೆ: SSLC
ಅರ್ಜಿ ಸಲ್ಲಿಕೆ ಕೊನೆ ದಿನಾಂಕ: ಸೆಪ್ಟಂಬರ್ 28
ಪೋಸ್ಟಿಂಗ್ ಎಲ್ಲಿ: ದೇಶಾದ್ಯಂತ
ಭಾರತದಲ್ಲಿರುವ ಸಂಸ್ಥೆಯ ಏಜೆನ್ಸಿಯ ಪ್ರಾದೇಶಿಕ ಘಟಕಗಳ ಕಾರ್ಯಾಚರಣೆ ಬಲಪಡಿಸಲು ಈ ನೇಮಕಾತಿ ನಡೆಯುತ್ತಿದೆ. ದೇಶದ ಎಲ್ಲ ರಾಜ್ಯ ಹಾಗೂ ಅಂಗಸಂಸ್ಥೆಗಳಲ್ಲಿ ಪೋಸ್ಟಿಂಗ್ ಪಡೆಯಬಹುದಾಗಿದೆ. ಮುಖ್ಯವಾಗಿ ಎಸ್‌ಎಸ್‌ಎಲ್‌ಸಿ ಮುಗಿಸಿದ ಬೆನ್ನಲ್ಲೆ ಕೆಲಸ ಪಡೆಯಲು ಇಚ್ಛಿಸುವವರಿಗೆ ಇದೊಂದು ಉತ್ತಮ ಅವಾಶ ಎನ್ನಬಹುದು.
ವಿದ್ಯಾರ್ಹತೆ ಏನಿರಬೇಕು?
ಯಾರೆಲ್ಲ ಅರ್ಜಿ ಸಲ್ಲಿಸಲು ಬಯಸುತ್ತಾರೋ ಅವರೆಲ್ಲ ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಪಾಸ್ ಆಗಿರಬೇಕು. ಅಲ್ಲದೇ ಅಭ್ಯರ್ಥಿಗಳಿಗೆ ಮಾನ್ಯ ಲಘು ಮೋಟಾರು ವಾಹನ (LMV) ಪರವಾನಗಿ ಹೊಂದಿರಬೇಕು. ಒಂದು ವರ್ಷ ಚಾಲನಾ ಅನುಭವ ಹೊಂದಿರಬೇಕು.
ಅರ್ಜಿದಾರರ ವಯೋಮಿತಿ, ಸಡಿಲಿಕೆ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 2025 ಸೆಪ್ಟೆಂಬರ್ 28ಕ್ಕೆ ಕನಿಷ್ಠ 18 ಹಾಗೂ ಗರಿಷ್ಠ 27 ವರ್ಷಗಳ ಮಧ್ಯೆ ಇರಬೇಕು. ಇನ್ನೂ ನಿಯಮಗಳ ಪ್ರಕಾರ ಅಭ್ಯರ್ಥಿಗಳ ಜಾರಿಗೆ ಅನುಗುಣವಾಗಿ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ ಎಂದು ನೇಮಕಾತಿ ಅಧಿಸೂಚನೆ ಮಾಹಿತಿ ನೀಡಿದೆ.
ಅರ್ಜಿ ಶುಲ್ಕದ ವಿವರ
ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಬಳಿಕ 100 ರೂಪಾಯಿ ಅರ್ಜಿ ಶುಲ್ಕ, 550 ರೂಪಾಯಿ ಸಂಸ್ಕರಣಾ ಶುಲ್ಕವನ್ನು ಕಟ್ಟಬೇಕು. ನೀವು ಇದನ್ನು ಡಿಜಿಟಲ್ ಬ್ಯಾಂಕಿಂಗ್, ಯುಪಿಐ, ಡೆಬಿಟ್/ಕ್ರೆಡಿಟ್ ಕಾರ್ಡ್ ಇಲ್ಲವೇ ಚಲನ್ ಮೂಲಕವು ಪಾವತಿಸಬಹುದು.
ಅಭ್ಯರ್ಥಿಗಳ ಆಯ್ಕೆ & ಮಾಸಿಕ ವೇತನ
ಅರ್ಜಿ ಸ್ವೀಕಾರಗೊಂಡ ಬಳಿಕ ಅಭ್ಯರ್ಥಿಗಳಿಗೆ ಒಟ್ಟು ಎರಡು ಪರೀಕ್ಷೆಗಳನ್ನು ಬರೆಯಬೇಕು. ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆ ಆದ ಅಭ್ಯರ್ಥಿಗಳಿಗೆ ಕನಿಷ್ಠ 21,700 ರೂಪಾಯಿಯಿಂದ ಗರಿಷ್ಠ 69,100 ರೂ.ವರೆಗೆ ವೇತನ ನೀಡಲಾಗುತ್ತದೆ. ಇತರ ಭ್ಯತ್ಯೆಗಳು ಸೇರಿವೆ.












Click it and Unblock the Notifications