ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಡಿಒ, ಜಿಪಿಎಸ್ ಹುದ್ದೆಗೆ ಅರ್ಜಿ ಸಲ್ಲಿಸುವುದು ಹೇಗೆ?

By Mahesh
|
Google Oneindia Kannada News

ಬೆಂಗಳೂರು, ಸೆ.26: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹಾಗೂ ಗ್ರಾಮ ಪ೦ಚಾಯಿತಿ ಕಾರ್ಯದರ್ಶಿ(ಜಿಪಿಎಸ್) ಗ್ರೇಡ್‍-1 ವೃ೦ದದ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿರುವ ಸುದ್ದಿ ಓದಿರುತ್ತೀರಿ. ಆಸಕ್ತರು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15/10/2016.

ಆರ್ಜಿಗಳನ್ನು ಆನ್ ಲೈನ್ ಮೂಲಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ ಸೈಟ್ ಮೂಲಕ ಸಲ್ಲಿಸಬಹುದು. ಯಾವುದೇ ತಾಂತ್ರಿಕ ಸಮಸ್ಯೆ ಎದುರಾದರೆ ಸಹಾಯವಾಣಿ 080- 23 460 460 ಗೆ ಕರೆ ಮಾಡಬಹುದು. ಅರ್ಜಿಯನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಲು ಅವಕಾಶವಿರುವುದಿಲ್ಲ.[1921 ಹುದ್ದೆಗೆ ಅರ್ಜಿ ಆಹ್ವಾನಿಸಿದ KPTCL]

ಪ್ರಮುಖ ದಿನಾಂಕಗಳು ಹೀಗಿವೆ:

* ಸೆ.16ರಿಂದ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ
* ಅಕ್ಟೋಬರ್ 15 ಅರ್ಜಿ ಸಲ್ಲಿಕೆಗೆ ಕೊನೆಯ ದಿನ
* ಪರೀಕ್ಷಾ ಶುಲ್ಕ ಪಾವತಿ ಮಾಡಲು ಅಕ್ಟೋರ್ 18 ಕೊನೆ ದಿನ (ಇ-ಅಂಚೆ ಕಚೇರಿಯಲ್ಲಿ ಶುಲ್ಕ ಪಾವತಿಸಬಹುದು)

How to Apply for Panchayat development officer (PDO) Karnataka Examinations Authority

ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಬಳಿ ಈ ದಾಖಲೆಗಳಿರಲಿ:
1. ಸ್ಕ್ಯಾನ್ ಮಾಡಿದ ಚಿತ್ರಗಳು(.JPG ಫಾರ್ಮ್ಯಾಟ್)
* ಅಭ್ಯರ್ಥಿಯ ಇತ್ತೀಚಿನ ಭಾವಚಿತ್ರ
* ಅಭ್ಯರ್ಥಿಯ ಸಹಿ
* ಅಭ್ಯರ್ಥಿಯ ಎಡಗೈ ಹೆಬ್ಬೆರಳ ಅಚ್ಚು
2. ಎಸ್ಸೆಸೆಲ್ಸಿ ಅಂಕಪಟ್ಟಿ ಪ್ರತಿ (ಹೆಸರು, ಜನ್ಮ ದಿನಾಂಕ, ನೋಂದಣಿ ಸಂಖ್ಯೆ, ತೇರ್ಗಡೆ ವರ್ಷ ದಾಖಲಿಸಲು)
3. ವಿದ್ಯಾರ್ಹತೆಗೆ ಬೇಕಾದ ಅಂಕ ಪಟ್ಟಿಗಳು(ಎಲ್ಲಾ ಸೆಮಿಸ್ಟರ್ ಗಳು)[159 ಹುದ್ದೆಗೆ ಅರ್ಜಿ ಆಹ್ವಾನಿಸಿದ KPSC]

ವೆಬ್ ಬ್ರೌಸರ್ ನಲ್ಲಿ http://kea.kar.nic.in ಗೆ ಲಾಗ್ ಇನ್ ಆಗಿ
ಅರ್ಜಿಯನ್ನು ಡೌನ್ ಲೋಡ್ ಮಾಡಿಕೊಂಡು ಆಫ್ ಲೈನ್ ನಲ್ಲಿ ಅರ್ಜಿ ತುಂಬಿ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು.

* Recruitment of PDO / GPS-Grade-1 Online Application ಆಯ್ಕೆ ಮಾಡಿಕೊಳ್ಳಿ
* ಅರ್ಜಿಯನ್ನು ತುಂಬಿದ ನಂತರ 'Submit Application' ಕ್ಲಿಕ್ ಮಾಡಿ.
* ಇದಕ್ಕೂ ಮುನ್ನ 'Preview' ಬಟನ್ ಒತ್ತಿ ನೋಡಬಹುದು.[ಗ್ರಾಮ ಪ೦ಚಾಯಿತಿ ಕಾರ್ಯದರ್ಶಿ, ಪಿಡಿಒ ನೇಮಕಾತಿ ವಿವರ]

* ಅರ್ಜಿ ಸಲ್ಲಿಸಿದ ಮೇಲೆ ಅಪ್ಲಿಕೇಷನ್ ಐಡಿ ನಿಮ್ಮ ಮೊಬೈಲ್ ನಂಬರ್ ಗೆ ಬರಲಿದೆ. ನಂತರ 'HOME' ಆಯ್ಕೆ ಮಾಡಿಕೊಳ್ಳಿ.

ಎರಡನೇ ಹಂತ:
1. ಅಭ್ಯರ್ಥಿಯ ಇತ್ತೀಚಿನ ಭಾವಚಿತ್ರ, ಸಹಿ, ಎಡಗೈ ಹೆಬ್ಬೆರಳ ಅಚ್ಚು ಇರುವ ಭಾವಚಿತ್ರ ಇರುವ ಸ್ಕ್ಯಾನ್ ಪ್ರತಿಗಳನ್ನು ಅಪ್ ಲೋಡ್ ಮಾಡಿ.
2. ಅರ್ಜಿಯ ಪ್ರಿಂಟ್ ಔಟ್ ಹಾಗೂ ಚಲನ್ ಕಾಪಿ ಪ್ರತಿಯನ್ನು ತೆಗೆದಿರಿಸಿಕೊಳ್ಳಿ.
3. ಶುಲ್ಕ ಪಾವತಿ: ಚಲನ್ ಮೇಲೆ ಪ್ರಿಂಟ್ ಆಗಿರುವ ಶುಲ್ಕವನ್ನು ಇ ಅಂಚೆ ಕಚೇರಿ ಮೂಲಕ ಪಾವತಿಸಿ
4. ಪ್ರಿಂಟ್ ಔಟ್ ತೆಗೆದುಕೊಂಡ ಪ್ರತಿಯನ್ನು ಅಗತ್ಯವಿದ್ದಾಗ ಹಾಜರುಪಡಿಸತಕ್ಕದ್ದು.(ಒನ್ಇಂಡಿಯಾ ಸುದ್ದಿ)

English summary
The Karnataka Examinations Authority (KEA) invites applications for Grama panchayat secretary and Panchayat development officer (PDO) post examination. October 15, 2016 last date for submit applications.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X