HAL Recruitment: ಬೆಂಗಳೂರಿನಲ್ಲಿದೆ ಭರ್ಜರಿ ಉದ್ಯೋಗ, ಕೈ ತುಂಬ ಸಂಬಳ
ಬೆಂಗಳೂರು, ಮೇ 19: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಸಂಸ್ಥೆಯು ತನ್ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಅದಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಬೆಂಗಳೂರಿನಲ್ಲೇ ಉದ್ಯೋಗ ಹುಡುಕುತ್ತಿರುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ.
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಸಂಸ್ಥೆಯಲ್ಲಿ ಒಂದು ವಿಸಿಟಿಂಗ್ ಕನ್ಸಲ್ಟೆಂಟ್ ಹುದ್ದೆ ಖಾಲಿ ಇದೆ. ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಆಯ್ಕೆ ಆಗುವವರಿಗೆ ಬೆಂಗಳೂರಿನಲ್ಲೇ ಪೋಸ್ಟಿಂಗ್ ನೀಡಲಾಗುವುದು.

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಇಲ್ಲಿ ನೀಡಲಾಗಿರುವ ನೇಮಕಾತಿಯ ಪೂರ್ವ ವಿವರ, ವೇತನ, ವಯೋಮಿತಿ, ಅರ್ಜಿ ಸಲ್ಲಿಕೆ ವಿಧಾನ ತಿಳಿದು ಮಾಹಿತಿ ಸಲ್ಲಿಸಬೇಕು.
HAL ನೇಮಕಾತಿ ಪೂರ್ಣ ವಿವರ
ಸಂಸ್ಥೆ ಹೆಸರು: ಎಚ್‌ಎಎಲ್
ಹುದ್ದೆ ಹೆಸರು: ವಿಸಿಟಿಂಗ್ ಕನ್ಸಲ್ಟೆಂಟ್
ಒಟ್ಟು ಹುದ್ದೆ ಸಂಖ್ಯೆ: ಒಂದು
ವೇತನ: ಒಂದು ಭೇಟಿಗೆ 7000 ರೂಪಾಯಿ.
ಉದ್ಯೋಗ ಸ್ಥಳ: ಬೆಂಗಳೂರು
ಅರ್ಜಿ ಸಲ್ಲಿಕೆ ಕೊನೆ ದಿನ: 2024 ಮೇ 28.
ಶೈಕ್ಷಣಿಕ ಅರ್ಹತೆ
ಅರ್ಜಿ ಸಲ್ಲಿಸಲು ಬಯಸುವ ಯಾವುದೇ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಇಲ್ಲವೇ ಮಂಡಳಿಯಿಂದ ಕಡ್ಡಾಯವಾಗಿ ಎಂಬಿಬಿಎಸ್, ಎಂಡಿ, ಡಿಎನ್ಬಿ, ಡಿಎಂ ಪೂರ್ಣಗೊಳಿಸಿರಬೇಕು ಎಂದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನೇಮಕಾತಿ ಮಾಹಿತಿ ನೀಡಿದೆ.

ವಯಸ್ಸಿನ ಮೀತಿ
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ತಿಳಿಸುವಂತೆ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಇದೇ ವರ್ಷ 2024 ಮೇ 1ಕ್ಕೆ ಗರಿಷ್ಠ 65 ವರ್ಷ ಮೀರಿರಬಾರದು. ಜಾತಿ ಮೀಸಲಾತಿ ಅನುಗುಣವಾಗಿ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ ಎಂದು ಹೇಳಲಾಗಿದೆ.
ಅರ್ಜಿ ಸಲ್ಲಿಕೆ ಹೇಗೆ?
ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕವರೆಗೂ ಕಾಯದೇ ಈ ಕೂಡಲೇ ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳ ಜತೆ ಇಲ್ಲಿನ ವಿಳಾಸಕ್ಕೆ ಕಳುಹಿಸಬೇಕು. ಆಯ್ಕೆ ಆಗುವವರಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುವುದು ಎಂದು ಅಧಿಸೂಚನೆ ಮಾಹಿತಿ ನೀಡಿದೆ.
ಅರ್ಜಿ ಸಲ್ಲಿಕೆ ವಿಳಾಸ
ಅಭ್ಯರ್ಥಿಗಳು ಅರ್ಜಿಯನ್ನು ಅಂಚೆ ಇಲ್ಲವೇ ಖುದ್ದು ನೀವೆ, ''ಮುಖ್ಯ ವ್ಯವಸ್ಥಾಪಕರು (HR), ಕೈಗಾರಿಕಾ ಆರೋಗ್ಯ ಕೇಂದ್ರ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಬೆಂಗಳೂರು ಕಾಂಪ್ಲೆಕ್ಸ್), ಸುರಂಜನದಾಸ್ ರಸ್ತೆ, (ಹಳೆಯ ವಿಮಾನ ನಿಲ್ದಾಣದ ಹತ್ತಿರ), ಬೆಂಗಳೂರು-560017' ಇಲ್ಲಿಗೆ ಕಳುಹಿಸಬೇಕು.
ಅರ್ಜಿ ಸ್ವೀಕಾರ ಪ್ರಕ್ರಿಯೆಯನ್ನು ಇದೇ ಮೇ 14ರಿಂದ ಆರಂಭಿಸಲಾಗಿದೆ. ಮೇ 28 ಅರ್ಜಿ ಸಲ್ಲಿಕೆಯ ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ hal-india.co.in ಈ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು ಎಂದು ತಿಳಿಸಲಾಗಿದೆ.












Click it and Unblock the Notifications