Breaking; ನೇಮಕಾತಿಯ ನಕಲಿ ಪತ್ರ, ಅಭ್ಯರ್ಥಿಗಳಿಗೆ ಎಚ್ಚರಿಸಿದ ರೈಲ್ವೆ
ನವದೆಹಲಿ, ಏಪ್ರಿಲ್ 24; ಭಾರತೀಯ ರೈಲ್ವೆ ಇಲಾಖೆ ನೇಮಕಾತಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪತ್ರವೊಂದು ವೈರಲ್ ಆಗಿದೆ. ಈ ಪತ್ರ ನಕಲಿಯಾಗಿದ್ದು, ಅಭ್ಯರ್ಥಿಗಳು ಎಚ್ಚರಿಕೆಯಿಂದ ಇರಬೇಕು ಎಂದು ಸೂಚನೆ ನೀಡಲಾಗಿದೆ.
ನೈಋತ್ಯ ರೈಲ್ವೆ ಈ ಕುರಿತು ಟ್ವೀಟ್ ಮೂಲಕ ಮನವಿ ಮಾಡಿದೆ. 30/3/2022ರಲ್ಲಿ ಹೊರಡಿಸಲಾದ ನೇಮಕಾತಿ ಆದೇಶದಂತೆ ತಾಂತ್ರಿಕ ಮತ್ತು ತಾಂತ್ರಿಕೇತರ ಹುದ್ದೆಗಳ ನೇಮಕಾತಿ ಕುರಿತು ನಕಲಿ ಪತ್ರ ವೈರಲ್ ಆಗಿದೆ.
ರೈಲ್ವೆ ನೇಮಕಾತಿ ಕುರಿತು ನಕಲಿ ಪತ್ರವನ್ನು ಅಪರಿಚಿತರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ನೇಮಕಾತಿಗಳ ಕುರಿತ ಮಾಹಿತಿಗಾಗಿ https://www.rrbbnc.gov.in/ ವೆಬ್ ಸೈಟ್ ನೋಡಬೇಕು ಎಂದು ಟ್ವೀಟ್‌ನಲ್ಲಿ ಮನವಿ ಮಾಡಲಾಗಿದೆ.

ನೈಋತ್ಯ ರೈಲ್ವೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಪತ್ರವನ್ನು ಸಹ ಟ್ವೀಟ್ ಮಾಡಿದೆ. ರೈಲ್ವೆ ನೇಮಕಾತಿಯ ನಿರೀಕ್ಷೆಯಲ್ಲಿರುವವರು, ಈಗಾಗಲೇ ಪರೀಕ್ಷೆ ಬರೆದಿರುವವರು ನಕಲಿ ಪತ್ರದ ಬಗ್ಗೆ ಗಮನ ಹರಿಸದಂತೆ ಇಲಾಖೆ ಮನವಿ ಮಾಡಿದೆ.
ಈ ನಕಲಿ ಪತ್ರದಲ್ಲಿ ನೇಮಕಾತಿ ಆಗಿರುವ ಅಭ್ಯರ್ಥಿಗಳು/ ವರದಿ ಮಾಡಿಕೊಂಡಂತ ಅಭ್ಯರ್ಥಿಗಳು ಸಿಪಿಓ ಆದೇಶವನ್ನು ಪಾಲನೆ ಮಾಡದಿದ್ದರೆ ಅವರ ನೇಮಕಾತಿಯನ್ನು ರದ್ದು ಮಾಡಲಾಗುತ್ತದೆ ಎಂದು ಸಹ ಎಚ್ಚರಿಕೆ ನೀಡಲಾಗಿದೆ.
A fake letter of recruitment is being circulated by miscreants. Candidates are cautioned to not fall prey to such fraud. Refer to RRB website ONLY for all recruitment related information https://t.co/G6kO0Y4xoM#dontfallpreytofakenews@KarnatakaVarthe .@RailMinIndia pic.twitter.com/VQhns1DJoG
— South Western Railway (@SWRRLY) April 24, 2022












Click it and Unblock the Notifications