544 ಸಬ್ ಇನ್​ಸ್ಪೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

Written By: Ramesh
Subscribe to Oneindia Kannada

ಬೆಂಗಳೂರು, ಅಕ್ಟೋಬರ್. 15 : ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಸಬ್ ಇನ್​ಸ್ಪೆಕ್ಟರ್ 544 ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಅವಧಿಯನ್ನು ವಿಸ್ತರಿಸಲಾಗಿದೆ. ಅಕ್ಟೋಬರ್ 13ರವರೆಗೆ ಇದ್ದ ಕೊನೆ ದಿನಾಂಕವನ್ನು ಅಕ್ಟೋಬರ್ 18 ರ ವರೆಗೆ ವಿಸ್ತರಿಸಲಾಗಿದೆ.

ಸತತವಾಗಿ 5 ದಿನಗಳ ಬ್ಯಾಂಕ್ ರಜೆ ಹಾಗೂ ಅಭ್ಯರ್ಥಿಗಳ ಕೋರಿಕೆ ಮೇರೆಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಅಕ್ಟೋಬರ್ 18ರ ಸಂಜೆ 6 ಗಂಟೆವರೆಗೆ ಹಾಗೂ ಅರ್ಜಿ ಶುಲ್ಕ ಪಾವತಿಸಲು ಅಕ್ಟೋಬರ್ 19ರ ಬ್ಯಾಂಕ್ ವ್ಯವಹಾರದ ಸಮಯದ ವರೆಗೆ ವಿಸ್ತರಿಸಲಾಗಿದೆ. [544 ಪಿಎಸ್‌ಐಗಳ ನೇಮಕಾತಿ ಅಧಿಸೂಚನೆ ಪ್ರಕಟ]

Police

ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ (ಡಿಎಆರ್‌, ಸಿಎಆರ್‌) 90, ವೈರ್‌ಲೆಸ್‌ ವಿಭಾಗದ 28, ಸಿವಿಲ್‌ ವಿಭಾಗದ 398 ಹಾಗೂ ಕೆಎಸ್‌ಆರ್‌ಪಿಯ 28 ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ಸೆ.19ರಂದು ಅರ್ಜಿ ಆಹ್ವಾನಿಸಿ ಅಕ್ಟೋಬರ್ 13ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು.

ಉಳಿದಂತೆ ಅರ್ಜಿ ಸಲ್ಲಿಸುವ ನಿಯಮಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಅಭ್ಯರ್ಥಿಗಳು ವಯೋಮಿತಿ, ವಿದ್ಯಾರ್ಹತೆ ಸಹಿಷ್ಣುತೆ ಮತ್ತು ದೇಹದಾರ್ಢ್ಯತೆ ಪರೀಕ್ಷೆ, ಲಿಖಿತ ಪರೀಕ್ಷೆ, ಮೌಖಿಕ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆ ಕುರಿತು ಹೆಚ್ಚಿನ ಮಾಹಿತಿಗಳನ್ನು www.ksp.gov.in ವೆಬ್‌ಸೈಟ್‌ನಲ್ಲಿ ನೋಡಬಹುದಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Due to continuous bank holidays many candidates have not been able to pay the application fee through bank challan and therefore there was lot of demand from the aspirants to extend the date for accepting the applications for the posts of PSI (Civil), RSI (CAR/DAR), Spl. RSI (KSRP) and PSI (Wireless).
Please Wait while comments are loading...