ಎಕ್ಸಿಂ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳಿವೆ, ಅರ್ಜಿ ಹಾಕಿ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್. 14 : ಎಕ್ಸ್‌ಪೋರ್ಟ್‌-ಇಂಪೋರ್ಟ್ ಬ್ಯಾಂಕ್‌ ಆಫ್‌ ಇಂಡಿಯಾನಲ್ಲಿ ಖಾಲಿ ಇರುವ ಮ್ಯಾನೇಜರ್ ಹಾಗೂ ಡೆಪ್ಯೂಟಿ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

6 ಮ್ಯಾನೇಜರ್ ಹುದ್ದೆಗಳು, 2 ಡೆಪ್ಯೂಟಿ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಮಾರ್ಚ್ 20ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕ ಏಪ್ರಿಲ್ 8ರೊಳಗೆ ಅರ್ಜಿ ಸಲ್ಲಿಬಹುದಾಗಿದೆ.[ಕೆಪಿಎಸ್‌ಸಿ ಗ್ರೂಪ್ 'ಸಿ' ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಏ,15 ಕೊನೆ ದಿನ]

EXIM Bank Recruitment: Apply Now

* ಮ್ಯಾನೇಜರ್ ಹುದ್ದೆ:
a) ವಯೋಮಿತಿ: ಗರಿಷ್ಠ 35 ವರ್ಷ.
b) ವಿದ್ಯಾರ್ಹತೆ: ಸಿಎ, ಸ್ನಾತಕೋತ್ತರ ಅಥವಾ ಡಿಗ್ರಿಯಲ್ಲಿ(ಪದವಿ) ಶೇ.50ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
c) ವೇತನ: 31,705 ರಿಂದ 45,950 ರು. (ತಿಂಗಳಿಗೆ).

* ಡೆಪ್ಯೂಟಿ ಮ್ಯಾನೇಜರ್ ಹುದ್ದೆ:
a) ವಯೋಮಿತಿ: ಗರಿಷ್ಠ 32 ವರ್ಷ.
b) ವಿದ್ಯಾರ್ಹತೆ: ಸ್ನಾತಕೋತ್ತರ ಅಥವಾ ಡಿಗ್ರಿಯಲ್ಲಿ(ಪದವಿ) ಶೇ.50ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
c) ವೇತನ: 23,700 ರಿಂದ 25,700 ರು.(ತಿಂಗಳಿಗೆ).

* ಆಯ್ಕೆ: ಮ್ಯಾನೇಜರ್ ಹಾಗೂ ಡೆಪ್ಯೂಟಿ ಮ್ಯಾನೇಜರ್ ಹುದ್ದೆಗಳಿಗೆ ಲಿಖಿತ ಪರೀಕ್ಷೆ ವೈಯಕ್ತಿ ಸಂದರ್ಶನ ಮೂಲಕ ಆಯ್ಕೆ ಮಾಡಿಲಾಗುತ್ತದೆ.

* ವಿಶೇಷ ಸೂಚನೆ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತಯ ಹಿಂದುಳಿದ ವರ್ಗದ ಅಭ್ಯರ್ಥಿಗಳು ಮಾತ್ರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಬಗ್ಗೆ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಸಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Export-Import Bank of India (EXIM) has released an official employment notification. Interested, eligible candidates can apply for the positions of Manager and Deputy Manager through special recruitment drive for SC/ ST/ OBC/ Persons With Disabilities. The last date of submission of online application is April 8, 2017.
Please Wait while comments are loading...