DRDO CEMILAC Jobs 2023: ಬೆಂಗಳೂರಿನಲ್ಲೇ ₹2,40 ಲಕ್ಷ ಸಂಬಳದ ಉದ್ಯೋಗ, ನೇಮಕಾತಿ ವಿವರ ನೋಡಿ ಅರ್ಜಿ ಹಾಕಿ
ಬೆಂಗಳೂರು, ಅಕ್ಟೋಬರ್ 24: ಮಿಲಿಟರಿ ಏರ್‌ವರ್ತಿನೆಸ್ ಮತ್ತು ಪ್ರಮಾಣೀಕರಣ ಕೇಂದ್ರ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO CEMILAC) ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
ಮಿಲಿಟರಿ ಏರ್‌ವರ್ತಿನೆಸ್ ಮತ್ತು ಪ್ರಮಾಣೀಕರಣ ಕೇಂದ್ರ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO CEMILAC) ನಲ್ಲಿ ಒಟ್ಟು 12 ಕನ್ಸಲ್ಟೆಂಟ್ ಹುದ್ದೆಗಳು ಖಾಲಿ ಇವೆ. ಬೆಂಗಳೂರಿನಲ್ಲಿ ಉದ್ಯೋಗ ಅರಸುತ್ತಿರುವ ಅರ್ಹ ಅಭ್ಯರ್ಥಿಗಳು ಈ ಕೂಡಲೇ ಅಂಚೆ ಮೂಲಕ (Offline) ಮೂಲಕ ಅರ್ಜಿಯನ್ನು ಸಲ್ಲಿಸಬೇಕು ಎಂದು ಅಧಿಸೂಚನೆ ತಿಳಿಸಿದೆ. ಇದಕ್ಕು ಮೊದಲು ಅಭ್ಯರ್ಥಿಗಳು ಹುದ್ದೆ ಬಗೆಗಿನ ಪೂರ್ಣ ಮಾಹಿತಿ ತಿಳಿದುಕೊಳ್ಳಿರಿ.

ನೇಮಕಾತಿಯ ಪೂರ್ಣ ಮಾಹಿತಿ
ಸಂಸ್ಥೆ ಹೆಸರು: ಡಿಆರ್‌ಡಿಓ
ಹುದ್ದೆ ಹೆಸರು: ಕನ್ಸಲ್ಟೆಂಟ್
ಮಾಸಿಕ ವೇತನ: 80,000ನಿಂದ 2,40,000 ರೂಪಾಯಿ
ಪೋಸ್ಟಿಂಗ್: ಬೆಂಗಳೂರು
ಖಾಲಿ ಹುದ್ದೆ ಸಂಖ್ಯೆ: 12
ಅರ್ಜಿ ಸಲ್ಲಿಕೆ ಕೊನೆ ದಿನ: ಅಕ್ಟೋಬರ್ 25 ಬುಧವಾರ
ವಿದ್ಯಾರ್ಹತೆ ಏನಿರಬೇಕು
ಡಿಆರ್‌ಡಿಓ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ, ಬಿಇ/ಬಿ.ಟೆಕ್, ಎಂಇ/ಎಂ.ಟೆಕ್, ಸ್ನಾತಕೋತ್ತರ ಪದವಿ ಇಲ್ಲವೇ ಎಂ.ಎಸ್‌ಸಿ, ಪಿಎಚ್.ಡಿಯನ್ನು ಮಾಡಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಗರಿಷ್ಠ ವಯಸ್ಸಿನ ಮಾಹಿತಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಇದೇ ತಿಂಗಳ ಅಕ್ಟೋಬರ್ 25 ಗರಿಷ್ಠ 63 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರಲಿದೆ ಎಂದು ಮಿಲಿಟರಿ ಏರ್‌ವರ್ತಿನೆಸ್ ಮತ್ತು ಪ್ರಮಾಣೀಕರಣ ಕೇಂದ್ರ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಹೇಳಿದೆ.

ಆಯ್ಕೆ ಹೇಗೆ ನಡೆಯಲಿದೆ?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲು ಲಿಖಿತ ಪರೀಕ್ಷೆ ಎದುರಿಸಬೇಕು. ಅಲ್ಲಿ ಉತ್ತೀರ್ಣವಾಗುವವರಿಗೆ ನೇರ ಸಂದರ್ಶನ ನಡೆಯಲಿದೆ. ಇಲ್ಲಿ ಆಯ್ಕೆ ಆಗುವವರಿಗೆ ಮಾಸಿಕ ₹80,000ರಿಂದ 2,40,000 ಲಕ್ಷ ವೇತನ ಸಹಿತ ಕರ್ನಾಟಕದ ಬೆಂಗಳೂರು ಸೇರಿದಂತೆ, ಕಾನ್ಪುರ, ಹೈದರಾಬಾದ್ ಹಾಗೂ ಕೊರಾಪುಟ್ ನಲ್ಲಿ ಪೋಸ್ಟಿಂಗ್ ಸಿಗಲಿದೆ.
ಅಭ್ಯರ್ಥಿಗಳು ಅಗತ್ಯ ದಾಖಲೆಗಳ ಸಹಿತ ಭರ್ತಿ ಮಾಡಿದ ಅರ್ಜಿಯನ್ನು ''ಮುಖ್ಯ ಕಾರ್ಯನಿರ್ವಾಹಕ (ವಾಯುಯೋಗ್ಯತೆ),
ಮಿಲಿಟರಿ ವಾಯು ಯೋಗ್ಯತೆ ಮತ್ತು ಪ್ರಮಾಣೀಕರಣ ಕೇಂದ್ರ (CEMILAC), DRDO, ರಕ್ಷಣಾ ಸಚಿವಾಲಯ, ಭಾರತ ಸರ್ಕಾರ, ಮಾರತ್ತಹಳ್ಳಿ ಕಾಲೋನಿ ಅಂಚೆ, ಬೆಂಗಳೂರು - 560037' ಈ ವಿಳಾಸಕ್ಕೆ ಕಳುಹಿಸಬೇಕು.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 080-25121123/1108ಗೆ ಸಂಪರ್ಕಿಸಬಹುದು.











Click it and Unblock the Notifications