Zomato: ಜೊಮಾಟೊದಲ್ಲಿ ಕೆಲಸ; ಒಂದು ವರ್ಷ ಸಂಬಳ ಇಲ್ಲ, ₹20 ಲಕ್ಷ ನೀವೆ ಕೊಡಬೇಕು!

ಜೊಮಾಟೊ ಸಂಸ್ಥೆಯಲ್ಲಿ ದೊಡ್ಡ ಕೆಲಸವೊಂದು ಖಾಲಿಯಿದೆ, ಆದರೆ ನಿಮಗೆ ಕೆಲಸ ಬೇಕೆಂದರೆ 20 ಲಕ್ಷ ರೂಪಾಯಿ ಕೊಡುವ ಜೊತೆಗೆ ಒಂದು ವರ್ಷ ಉಚಿತವಾಗಿ ಕೆಲಸ ಮಾಡಲು ಸಿದ್ದರಿರಬೇಕು. ಜೊಮಾಟೊ ಸಹ-ಸಂಸ್ಥಾಪಕ ಮತ್ತು ಸಿಇಒ ದೀಪಿಂದರ್ ಗೋಯಲ್ ಕೆಲಸ ಹುಡುಕುತ್ತಿರುವವರಿಗೆ ಈ ಆಫರ್ ಕೊಟ್ಟಿದ್ದಾರೆ. ಅಚ್ಚರಿ ಎಂದರೆ 20 ಲಕ್ಷ ಕೊಟ್ಟು, ಒಂದು ವರ್ಷ ಉಚಿತವಾಗಿ ಕೆಲಸ ಮಾಡಲು 10 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದಾರೆ.

ಜೊಮಾಟೊ ನೀಡಿರುವುದು ಯಾವುದೋ ಕಡಿಮೆ ಹಂತದ ಕೆಲಸದ ಆಫರ್ ಅಲ್ಲ, ಬದಲಾಗಿ ಅದೊಂದು ಉನ್ನತ ಹುದ್ದೆ. ಕಂಪನಿಯನ್ನು ನಡೆಸಲು ಸಹಾಯ ಮಾಡಲು ಸಿಬ್ಬಂದಿಯ ಮುಖ್ಯಸ್ಥರನ್ನು ಹುಡುಕುತ್ತಿದೆ. ಈ ಬಗ್ಗೆ ದೀಪಿಂದರ್ ಗೋಯಲ್ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ.

deepinder goyal seeks chief of staff at zomato emplotee to pay rs 20 lakh

20 ಲಕ್ಷ ಕೊಡಿ, ಒಂದು ವರ್ಷ ಉಚಿತವಾಗಿ ಕೆಲಸ ಮಾಡಿ

ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ನಾನು ನನಗಾಗಿ ಮುಖ್ಯ ಸಿಬ್ಬಂದಿಯನ್ನು ಹುಡುಕುತ್ತಿದ್ದೇನೆ. "ಈ ಉದ್ಯೋಗದಲ್ಲಿ ಯಾವುದೇ ಸಾಮಾನ್ಯ ಸವಲತ್ತುಗಳು ಇರುವುದಿಲ್ಲ. ಮೊದಲ ವರ್ಷ ಯಾವುದೇ ಸಂಬಳ ಸಿಗುವುದಿಲ್ಲ. ಈ ಉದ್ಯೋಗ ಬೇಕೆಂದರೆ ನೀವು ಮೊದಲು 20 ಲಕ್ಷ ರೂಪಾಯಿಗಳನ್ನು ನೇರವಾಗಿ ಫೀಡಿಂಗ್ ಇಂಡಿಯಾಗೆ ದೇಣಿಗೆ ರೂಪದಲ್ಲಿ ನೀಡಬೇಕಾಗುತ್ತದೆ" ಎಂದು ಹೇಳಿದ್ದಾರೆ.

ಹಣವನ್ನು ಉಳಿಸಲು ನಾವು ಉಚಿತವಾಗಿ ಕೆಲಸ ಮಾಡಲು ಕೇಳುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆಯ್ಕೆಯಾದ ಉದ್ಯೋಗಿ ಸೂಚಿಸುವ ಚಾರಿಟಿಗೆ ಜೊಮಾಟೋ 50 ಲಕ್ಷ ರೂಪಾಯಿ ದೇಣಿಗೆ ನೀಡುತ್ತದೆ ಎಂದು ಅವರು ಹೇಳಿದ್ದಾರೆ.

ಮೊದಲ ವರ್ಷ ನೀವು ಉಚಿತವಾಗಿ ಕೆಲಸ ಮಾಡಿದರೆ ಎರಡನೇ ವರ್ಷ ನಿಮಗೆ ಸಂಬಳ ಸಿಗುತ್ತದೆ. 50 ಲಕ್ಷ ರೂಪಾಯಿಗಳಿಂತ ಹೆಚ್ಚಿನ ಸಂಬಳ ಸಿಗುತ್ತದೆ, ಆದರೆ 2ನೇ ವರ್ಷದ ಆರಂಭದಲ್ಲಿ ಈ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ಹೇಳಿದ್ದಾರೆ. ಮೊದಲ ಒಂದು ವರ್ಷದಲ್ಲಿ ಯಾವುದೇ ಪ್ರತಿಷ್ಠಿತ ಕಾಲೇಜಿನ ಪದವಿಗಿಂದ 10 ಪಟ್ಟು ಹೆಚ್ಚು ಕಲಿಯಬಹುದು ಎಂದು ಹೇಳಿದ್ದಾರೆ.

ಈ ಕೆಲಸಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ಹೆಚ್ಚಿನ ಅನುಭವ ಹೊಂದಿರಬಾರದು, ಆದರೆ ಅತ್ಯುತ್ತಮ ಸಂವಹನ ಕೌಶಲ್ಯ ಹೊಂದಿರಬೇಕು ನಮ್ಮ ನಮ್ರತೆಯಿಂದ ಕೆಲಸ ಮಾಡಲು ಸಿದ್ದರಿರಬೇಕು ಎಂದು ಹೇಳಿದ್ದಾರೆ. ಈ ಕೆಲಸ ಬೇಕಾದವರು ನಿಮ್ಮ ರೆಸ್ಯೂಮ್ ಕಳಿಸುವ ಅವಶ್ಯಕತೆಯಿಲ್ಲ, ಆದರೆ 200 ಪದಗಳಲ್ಲಿ ಬರೆದಿರುವ ಕವರ್ ಲೆಟರ್ ಅನ್ನು [email protected] ಗೆ ಇಮೇಲ್ ಮಾಡಿ ಎಂದು ಝೊಮಾಟೊ ಮುಖ್ಯಸ್ಥರು ಸ್ಪಷ್ಟಪಡಿಸಿದ್ದಾರೆ. ಆಯ್ಕೆಯಾದವರು ಜೊಮಾಟೊದ ಗುರುಗ್ರಾಮದಲ್ಲಿರುವ ಪ್ರಧಾನ ಕಚೇರಿಯಲ್ಲಿ ಕೆಲಸ ಮಾಡಬೇಕು.

10,000 ಮಂದಿಯಿಂದ ಅರ್ಜಿ

ವಿಶೇಷ ಎಂದರೆ ಈ ಕೆಲಸಕ್ಕಾಗಿ ಈಗಾಗಲೇ 10,000 ಕ್ಕೂ ಹೆಚ್ಚು ಅಭ್ಯರ್ಥಿಗಳು ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ನವೆಂಬರ್ 21 ರಂದು ಸಂಜೆ 6 ಗಂಟೆಯವರೆಗೂ ಮಾತ್ರ ಅರ್ಜಿಗಳನ್ನು ಸ್ವೀಕರಿಸಲಾಗುವುದು ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+