ಚಿತ್ರದುರ್ಗ ಜಿಲ್ಲಾ ಸಹಕಾರ ಬ್ಯಾಂಕ್ ನೇಮಕಾತಿ; 68 ಹುದ್ದೆ, ವೇತನ

ಚಿತ್ರದುರ್ಗ, ಸೆಪ್ಟೆಂಬರ್ 18; ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ. ಚಿತ್ರದುರ್ಗ ವಿವಿಧ ವೃಂದದ 68 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಕೆ ಮಾಡಲು 16/10/2023.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಬಳಿಕ ಅಕ್ಟೋಬರ್ 16ರೊಳಗೆ ಅರ್ಜಿ ಶುಲ್ಕವನ್ನು ಪಾವತಿಸಬೇಕು. ಅರ್ಜಿ ಶುಲ್ಕ ಪಾವತಿ ಮಾಡದ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.

Chitradurga DCCB Recruitment Apply For 68 Post

ಸಹಾಯಕ ವ್ಯವಸ್ಥಾಪಕರು 6 ಹುದ್ದೆ, ಪ್ರಥಮ ದರ್ಜೆ ಗುಮಾಸ್ತರು 9, ದ್ವಿತೀಯ ದರ್ಜೆ ಗುಮಾಸ್ತರು 35, ಕಂಪ್ಯೂಟರ್ ಇಂಜಿನಿಯರ್ 2, ವಾಹನ ಚಾಲಕರು 2, ಅಟೆಂಡರ್ಸ್/ ಸಹಾಯಕರು 14 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ವೇತನ; ಸಹಾಯಕ ವ್ಯವಸ್ಥಾಪಕ ಹುದ್ದೆಗೆ 40,900-78,200 ರೂ., ಪ್ರಥಮ ದರ್ಜೆ ಗುಮಾಸ್ತ 37,900-70,850 ರೂ., ದ್ವಿತೀಯ ದರ್ಜೆ ಗುಮಾಸ್ತ 30,350-58,250 ರೂ., ಕಂಪ್ಯೂಟರ್ ಇಂಜಿನಿಯರ್ 30,350-58,250 ರೂ., ವಾಹನ ಚಾಲಕರು 27,650-52,650 ರೂ. ಮತ್ತು ಅಟೆಂಡರ್ಸ್/ ಸಹಾಯಕರು ಹುದ್ದೆಗೆ 23,500-47,650 ರೂ. ವೇತನ ನಿಗದಿ ಮಾಡಲಾಗಿದೆ.

ಅರ್ಜಿ ಸಲ್ಲಿಕೆ ಮಾಡಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಗರಿಷ್ಠ ವಯೋಮಿತಿ ಸಾಮಾನ್ಯ ವರ್ಗ 35, 2ಎ/ 2ಬಿ/ 3ಎ/ 3ಬಿ 38 ವರ್ಷ, ಪ. ಜಾ/ ಪ.ಪಂ/ ಪ್ರವರ್ಗ-1 40 ವರ್ಷಗಳನ್ನು ಮೀರಿರಬಾರದು. ಮಾಜಿ ಸೈನಿಕರಿಗೆ ಮಿಲಿಟರಿ ಸೇವೆಯಲ್ಲಿ ಸೇವೆ ಸಲ್ಲಿಸಿದ ಅವಧಿ, ವಿಧವೆಯರಿಗೆ 10 ವರ್ಷ, ಅಂಗವಿಕಲರಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕು. ಸಾಮಾನ್ಯ ವರ್ಗ, ಪ್ರವರ್ಗ 2(ಎ), 2(ಬಿ), 3 (ಎ), 3(ಬಿ)ಗೆ ಸೇರಿದ ಅಭ್ಯರ್ಥಿಗಳಿಗೆ 1500 ರೂ.ಗಳು ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಅಂಗವಿಕಲ, ಮಾಜಿ ಸೈನಿಕ ಹಾಗೂ ವಿಧವಾ ಅಭ್ಯರ್ಥಿಗಳಿಗೆ ರೂ. 750 ಶುಲ್ಕವನ್ನು ನಿಗದಿ ಮಾಡಲಾಗಿದೆ.

ಈ ನೇಮಕಾತಿ ಪ್ರಕಟಣೆಯಲ್ಲಿ ತಿಳಿಸಿರುವ ಹುದ್ದೆಗಳ ಸಂಖ್ಯೆ ಮತ್ತು ವರ್ಗೀಕರಣವು ಅನಿವಾರ್ಯ ಸಂದರ್ಭದಲ್ಲಿ ಬದಲಾವಣೆಯಾಗಬಹುದಾಗಿದ್ದು, ನೇಮಕಾತಿ ಪ್ರಾಧಿಕಾರವು ಬದಲಾವಣೆ ಮಾಡುವ ಮತ್ತು ರದ್ದುಪಡಿಸುವ ಅಧಿಕಾರವನ್ನು ಕಾಯ್ದಿರಿಸಿಕೊಂಡಿದೆ. ಅಭ್ಯರ್ಥಿಗಳು ಒಂದು ಹುದ್ದೆಗೆ ಒಂದೇ ಅರ್ಜಿ ಸಲ್ಲಿಸತಕ್ಕದ್ದು, ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದ್ದಲ್ಲಿ ಅರ್ಹತೆ ಪಡೆದ ಅರ್ಜಿಯನ್ನು ಮಾತ್ರ ಪರಿಗಣಿಸಲಾಗುವುದು.

ಅರ್ಜಿಗಳನ್ನು ಆನ್‌ಲೈನ್ ಮುಖಾಂತರ ಮಾತ್ರ ಸಲ್ಲಿಸತಕ್ಕದ್ದು, ಅರ್ಜಿಗಳನ್ನು ಖುದ್ದಾಗಿ ಅಥವಾ ಕೋರಿಯರ್ ಅಥವಾ ಅಂಚೆ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿರುವುದಿಲ್ಲ. ಅಭ್ಯರ್ಥಿಗಳು ಅರ್ಜಿಯನ್ನು Online ನಲ್ಲಿ ನೀಡಿರುವ ಸೂಚನೆಗಳನ್ವಯ ಭರ್ತಿ ಮಾಡತಕ್ಕದ್ದು.

ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಸಲ್ಲಿಸುವ ಅರ್ಜಿಗಳಲ್ಲಿ ಅಪೂರ್ಣ ಹಾಗೂ ಅಸ್ಪಷ್ಟ ದಾಖಲೆಗಳನ್ನು ಅಥವಾ ತಪ್ಪು/ ಅಪೂರ್ಣ ಮಾಹಿತಿ ನೀಡಿದ್ದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಒಂದಕ್ಕಿಂತ ಹೆಚ್ಚಿನ ವೃಂದದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸಿದ್ದಲ್ಲಿ ಅಂತಹ ಅಭ್ಯರ್ಥಿಗಳು ಪ್ರತ್ಯೇಕ ನೋಂದಣಿ ಸಂಖ್ಯೆಯಡಿಯಲ್ಲಿಯೇ ಪ್ರತಿ ಹುದ್ದೆಗೆ ಪ್ರತ್ಯೇಕ ಅರ್ಜಿ ಶುಲ್ಕ ಪಾವತಿಸಿ, ಪ್ರತ್ಯೇಕ ಅರ್ಜಿ ಸಲ್ಲಿಸತಕ್ಕದ್ದು.

ಈ ನೇಮಕಾತಿ ಸಂಬಂಧ ಅಭ್ಯರ್ಥಿಗಳು ಸ್ಪಷ್ಟೀಕರಣ, ಪ್ರಶ್ನೋತ್ತರಗಳು, ತಕರಾರು ಇತ್ಯಾದಿಗಳಿಗೆ ಪತ್ರ/ ಇ-ಮೇಲ್ ವ್ಯವಹಾರಗಳಿಗೆ ಯಾವುದೇ ಅವಕಾಶಗಳು ಇರುವುದಿಲ್ಲ. ಅಭ್ಯರ್ಥಿಯು ಸಂಬಂಧ ಪಟ್ಟ ವಿದ್ಯಾರ್ಹತೆ, ಜಾತಿ ಪ್ರಮಾಣಪತ್ರ, ಅಂಗವಿಕಲ ದೃಡೀಕರಣ ಪತ್ರ, ಕನ್ನಡ ಮಾಧ್ಯಮ ಪ್ರಮಾಣ ಪತ್ರ, ಗ್ರಾಮೀಣ ಪ್ರಮಾಣ ಪತ್ರ ಮತ್ತು ಮಾಜಿ ಸೈನಿಕ ಪ್ರಮಾಣಪತ್ರ ಇತ್ಯಾದಿ ನಕಲು ಪ್ರತಿಗಳಿಗೆ ಪತ್ರಾಂಕಿತ ಅಧಿಕಾರಿ (Gezetted Officer)ಗಳಿಂದ ದೃಡೀಕರಿಸಿ, ಸಂಬಂಧಪಟ್ಟ ಎಲ್ಲಾ ಪ್ರಮಾಣಪತ್ರಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡತಕ್ಕದ್ದು.

ನೇಮಕಾತಿ ಆದೇಶ, ಅಧಿಸೂಚನೆ ವಿವರಕ್ಕಾಗಿ ವೆಬ್‌ಸೈಟ್‌ಗೆ ಭೇಟಿ ನೀಡಿ https://www.chitradurgadccbank.com/

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+