Get Updates
Get notified of breaking news, exclusive insights, and must-see stories!

ದೇಶದ ಅಗ್ನಿವೀರರಿಗೆ ಉದ್ಯೋಗ ಆಫರ್ ಕೊಟ್ಟ ಆನಂದ್ ಮಹೀಂದ್ರಾ

ನವದೆಹಲಿ, ಜೂನ್ 20: ದೇಶದ ಸಶಸ್ತ್ರ ಪಡೆಗಳ ನೇಮಕಾತಿಗಾಗಿ ಹೊಸದಾಗಿ ಘೋಷಿಸಿದ ಅಗ್ನಿಪಥ್ ಯೋಜನೆಯಡಿ ತರಬೇತಿ ಪಡೆದಿರುವ ಯುವಕರನ್ನು ತಮ್ಮ ಕಂಪನಿಯಲ್ಲಿ ಸೇರಿಸಿಕೊಳ್ಳಲಾಗುವುದು ಎಂದು ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಘೋಷಿಸಿದ್ದಾರೆ.

ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯನ್ನು ಘೋಷಿಸಿದ ಬೆನ್ನಲ್ಲೇ ನಡೆಯುತ್ತಿರುವ ಪ್ರತಿಭಟನೆ ಮತ್ತು ಹಿಂಸಾಚಾರದ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಉದ್ಯಮಿ ಆನಂದ್ ಮಹೀಂದ್ರಾ, ಅಗ್ನಿವೀರರಿಗೆ ತಮ್ಮ ಕಂಪನಿಗಳಲ್ಲಿ ಉದ್ಯೋಗ ಅವಕಾಶವನ್ನು ನೀಡುವುದರ ಬಗ್ಗೆ ಟ್ವೀಟ್ ಮಾಡಿದ್ದಾರೆ.

"ಅಗ್ನಿಪಥ್ ಕಾರ್ಯಕ್ರಮದ ಸುತ್ತ ನಡೆದ ಹಿಂಸಾಚಾರದಿಂದ ಬೇಸರವಾಗಿದೆ. ಕಳೆದ ವರ್ಷ ಈ ಯೋಜನೆಯನ್ನು ಪ್ರಸ್ತಾಪಿಸಿದಾಗ ನಾನು ಹೇಳಿದ್ದೇನೆ ಮತ್ತು ನಾನು ಅದನ್ನು ಈಗ ಮತ್ತೆ ಪುನರಾವರ್ತಿಸುತ್ತೇನೆ. ಅಗ್ನಿವೀರ್‌ರ ಗಳಿಕೆಯು ಶಿಸ್ತು ಮತ್ತು ಕೌಶಲ್ಯಗಳು ಅವರನ್ನು ಅತ್ಯುತ್ತಮವಾಗಿಸುತ್ತದೆ. ಅಂತಹ ತರಬೇತಿ ಪಡೆದ, ಸಮರ್ಥ ಯುವಕರನ್ನು ನೇಮಿಸಿಕೊಳ್ಳುವ ಅವಕಾಶವನ್ನು ಮಹೀಂದ್ರಾ ಗ್ರೂಪ್ ಸ್ವಾಗತಿಸುತ್ತದೆ," ಎಂದು ಟ್ವೀಟ್ ಮಾಡಿದ್ದಾರೆ.

ಕಾರ್ಪೊರೇಟ್ ವಲಯದಲ್ಲಿ ಅಗ್ನಿವೀರ್‌ರ ಪಾತ್ರ:

"ಕಾರ್ಪೊರೇಟ್ ವಲಯದಲ್ಲಿ ಅಗ್ನಿವೀರ್‌ಗಳ ಉದ್ಯೋಗಕ್ಕೆ ದೊಡ್ಡ ಸಾಮರ್ಥ್ಯ. ನಾಯಕತ್ವ, ಟೀಮ್‌ವರ್ಕ್ ಮತ್ತು ದೈಹಿಕ ತರಬೇತಿಯೊಂದಿಗೆ, ಅಗ್ನಿವೀರ್‌ಗಳು ಉದ್ಯಮಕ್ಕೆ ಮಾರುಕಟ್ಟೆ-ಸಿದ್ಧ ವೃತ್ತಿಪರ ಪರಿಹಾರಗಳನ್ನು ಒದಗಿಸುತ್ತಾರೆ, ಕಾರ್ಯಾಚರಣೆಗಳಿಂದ ಆಡಳಿತ ಮತ್ತು ಪೂರೈಕೆ ಸರಪಳಿ ನಿರ್ವಹಣೆಯವರೆಗಿನ ಸಂಪೂರ್ಣ ಸ್ಪೆಕ್ಟ್ರಮ್ ಅನ್ನು ಒಳಗೊಂಡಿದೆ," ಎಂದು ಆನಂದ್ ಮಹೀಂದ್ರಾ ಮತ್ತೊಂದು ಟ್ವೀಟ್ ಸಂದೇಶದಲ್ಲಿ ಬರೆದುಕೊಂಡಿದ್ದಾರೆ.

Businessman Anand Mahindra Announces to Recruit Agnipath Scheme Trained Young People

ಅಗ್ನಿಪಥ್ ನೇಮಕಾತಿ ಯೋಜನೆ: ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯು ದೇಶದ ಮೂರು ಸೇನೆಗಳಿಗೆ ಯೋಧರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆಗೆ ಸಂಬಂಧಿಸಿದ್ದಾಗಿದೆ. 17.5 ರಿಂದ 23 ವಯೋಮಾನ ಯುವಕರನ್ನು ಒಪ್ಪಂದದ ಮೇರೆಗೆ ನಾಲ್ಕು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ.

ಈ ಅವಧಿಯಲ್ಲಿ 6 ತಿಂಗಳು ತರಬೇತಿಯೂ ಸೇರಿರುತ್ತದೆ. ನಾಲ್ಕು ವರ್ಷದ ಸೇವಾವಧಿಯಲ್ಲಿ ಮಾಸಿಕ 30 ರಿಂದ 40 ಸಾವಿರ ರೂಪಾಯಿ ವೇತನದ ಜೊತೆಗೆ ವೈದ್ಯಕೀಯ ವಿಮೆ ಮತ್ತು ಆರೋಗ್ಯ ವಿಮೆ ಸೌಲಭ್ಯವನ್ನು ನೀಡಲಾಗುತ್ತದೆ. ಆದರೆ ನಾಲ್ಕು ವರ್ಷಗಳ ನಂತರ ಅಗ್ನಿಪಥ್ ಯೋಜನೆಯಡಿ ನೇಮಕಗೊಂಡ ಶೇ.75ರಷ್ಟು ಯೋಧರನ್ನು ಸೇನೆಯಿಂದ ವಿಮುಕ್ತಿಗೊಳಿಸಲಾಗುವುದು. ತದನಂತರದಲ್ಲಿ ಈ ಯೋಧರಿಗೆ ಯಾವುದೇ ರೀತಿ ಪಿಂಚಣಿ ಸೌಲಭ್ಯವನ್ನು ನೀಡಲಾಗುವುದಿಲ್ಲ.

ಮುಂದಿನ ಒಂದೂವರೆ ವರ್ಷದ ಅವಧಿಯಲ್ಲಿ ಅಗ್ನಿಪಥ್ ಯೋಜನೆ ಅಡಿಯಲ್ಲಿ ಸುಮಾರು 10 ಲಕ್ಷ ಯುವಕರಿಗೆ ಉದ್ಯೋಗವನ್ನು ಕಲ್ಪಿಸುವ ಗುರಿಯೊಂದಿಗೆ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+