BSNL Recruitment: ಬಿಎಸ್‌ಎನ್‌ಎಲ್‌ನಲ್ಲಿ ಉದ್ಯೋಗಗಳು ಖಾಲಿ ಇವೆ, ಮಾಸಿಕ ₹75000 ವೇತನ, ವಿವರ
ಬೆಂಗಳೂರು, ಫೆಬ್ರವರಿ 23: ಭಾರತೀಯ ಟೆಲಿಕಾಂ ವಲಯದಲ್ಲಿ ಬಳಕೆದಾರರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿರುವ ಭಾರತ್ ಸಂಚಾರ ನಿಗಮ ನಿಯಮಿತ (BSNL) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಮುಂದಾಗಿದೆ. ಈ ಸಂಬಂಧ ಅಧಿಕೃತ ಅಧಿಸೂಚನೆ ಹೊರಿಡಿಸಿದೆ. ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಅತ್ಯುತ್ತಮ ಅವಕಾಶ ಇಲ್ಲಿದೆ. ಕೂಡಲೇ ಅರ್ಜಿ ಸಲ್ಲಿಸಬೇಕಿದೆ.
ಭಾರತ್ ಸಂಚಾರ ನಿಗಮ ನಿಯಮಿತ (BSNL) ತನ್ನಲ್ಲಿ ಖಾಲಿ ಇರುವ ಕಾನೂನು ಸಲಹೆಗಾರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈ ನಿಮಿತ್ತ ಅರ್ಹ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ವಿವಿಧ ಹುದ್ದೆಗಳಿಗೆ ಮುಂದಿನ ತಿಂಗಳು ಮಾರ್ಚ್ 14 ರೊಳಗೆ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ.

BSNL ನೇಮಕಾತಿ ಪೂರ್ಣ ಮಾಹಿತಿ
ಸಂಸ್ಥೆಯ ಹೆಸರು: ಭಾರತ್ ಸಂಚಾರ್ ನಿಗಮ ಸಂಸ್ಥೆ (BSNL)
ಹುದ್ದೆ ಹೆಸರು: ಕಾನೂನು ಸಲಹೆಗಾರ
ಒಟ್ಟು ಹುದ್ದೆಗಳು: ಮೂರು
ಮಾಸಿಕ ವೇತನ: 75000 ರೂ.
ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್
ಅರ್ಜಿ ಸಲ್ಲಿಕೆ ಕೊನೆ ದಿನ: ಮಾರ್ಚ್ 14
ಪೋಸ್ಟಿಂಗ್: ದೆಹಲಿ
ಶೈಕ್ಷಣಿಕ ಅರ್ಹತೆಗಳು
ಕೇಂದ್ರ ಸರ್ಕಾರಿ ವ್ಯಾಪ್ತಿಯಲ್ಲಿ ಉದ್ಯೋಗ ಪಡೆಯಲು ಬಯಸುವ ಆಸಕ್ತ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಎಲ್‌ಎಲ್‌ಬಿ ಪದವಿ ಪಡೆದಿರಬೇಕು. ಇಂತವರು ಮಾತ್ರವೇ ಅರ್ಜಿ ಸಲ್ಲಿಸಲು ಅರ್ಹರು ಎಂದು BSNL ಅಧಿಸೂಚನೆ ತಿಳಿಸಿದೆ.

ವಯೋಮಿತಿ ವಿವರ
ಭಾರತ್ ಸಂಚಾರ್ ನಿಗಮ ನಿಯಮಿತ ನೇಮಕಾತಿಗೆ ಒಳಪಡುವ ಅಭ್ಯರ್ಥಿಗಳು ಗರಿಷ್ಠ 32 ವರ್ಷ ವಯಸ್ಸಿನವರು ಅರ್ಜಿ ಸಲ್ಲಿಸಬಹುದು. ಜಾತಿ ಮೀಸಲಾತಿ ಆಧಾರದಲ್ಲಿ ವಯೋಮಿತಿಯಲ್ಲಿನ ಸಡಿಲಿಕೆ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಅರ್ಜಿ ಸಲ್ಲಿಕೆ ಹೇಗೆ?
ಅರ್ಜಿ ಸಲ್ಲಿಸುವವರು ಮೊದಲಿಗೆ ಭಾರತ್ ಸಂಚಾರ ನಿಗಮ ಲಿ. ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಬೆಕು. ಅರ್ಹತೆ ಸೇರಿದಂತೆ ಅಗತ್ಯ ಮಾಹಿತಿ ಅರಿತುಕೊಳ್ಳಬೇಕು. ನಂತರ ಸೂಕ್ತ ದಾಖಲೆಗಳ ಸಮೇತ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ನಿಮ್ಮ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ನಮೂದಿಸಬೇಕು. ಗುರುತಿನ ಚೀಟಿ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಕಾರ್ಯಾನುಭವ ಮಾಹಿತಿ ನೀಡಬೇಕು. ಅರ್ಜಿ ನಮೂನೆಯಲ್ಲಿ ಕೇಳಲಾದ ಎಲ್ಲ ಅಗತ್ಯ ಮಾಹಿತಿ ನೀಡಬೇಕು. ಕೇಳಲಾದ ದಾಖಲೆ ಸ್ಕ್ಯಾನ್ ಮಾಡಿ ನೀಡಬಹುದು. ಯಾರಿಗೆಲ್ಲ ಸೂಚನೆ ಇದೆಯೋ ಅವರು ಶುಲ್ಕ ಪಾವತಿಸಿಬೇಕು.












Click it and Unblock the Notifications