Booking.com Layoffs: ಪ್ರತಿಷ್ಠಿತ ಕಂಪನಿಯ ಉದ್ಯೋಗಿಗಳ ವಜಾ ಘೋಷಣೆ, ಕಾರಣಗಳೇನು
ಬೆಂಗಳೂರು, ನವೆಂಬರ್ 10: ವಿಶ್ವದ ಪ್ರತಿಷ್ಠಿತ ಕಂಪನಿಗಳಲ್ಲಿ ಮುಂಚೂಣಿಯಲ್ಲಿರುವ ಡಿಜಿಟಲ್ ಟ್ರಾವೆಲ್ ಕಂಪನಿಯು Booking.com ಉದ್ಯೋಗದಲ್ಲಿನ ಸುಧಾರಣೆ, ಮರು ಸಂಘಟನೆಯ ಭಾಗವಾಗಿ ಅನೇಕ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುಲು ತೀರ್ಮಾನಿಸಿದೆ. ಕಂಪನಿ ಈ ನಿರ್ಧಾರವು ಸಾವಿರಾರು ನೌಕರರ ಬದುಕಿನ ಮೇಲೆ ಪರಿಣಾಮ ಭೀರಲಿದೆ.
ಇತ್ತಿಚೆಗೆ ಬಾಷ್ ಕಂಪನಿ, ನಿಸ್ಸಾನ್, ಸ್ಯಾಮ್‌ಸಂಗ್ ಸೇರಿ ವಿವಿಧ ಕಂಪನಿಗಳು ಉದ್ಯೋಗ ಕಡಿತ ಪ್ರಕ್ರಿಯೆ ಮುಂದುವರಿಸಿದ್ದವು. ಅದರ ಬೆನ್ನಲ್ಲೆ ಬುಕ್ಕಿಂಗ್. ಕಾಮ್ ಸಂಸ್ಥೆ ಸಹ ಉದ್ಯೋಗ ಕಡಿತವನ್ನು ಶನಿವಾರ ನವೆಂಬರ್ 09 ಘೋಷಿಸಿದೆ. ಇದು ಕಂಪನಿಯ ನೌಕರರ ಸಮೂಹದಲ್ಲಿ ಆತಂಕಕ್ಕೆ ಕಾರಣವಾಗಿದೆ.

ಬುಕಿಂಗ್ ಹೋಲ್ಡಿಂಗ್ಸ್‌ನ ಘಟಕವು ತನ್ನ ನೌಕರರಿಗೆ ಮೇಲ್ ಮೂಲಕ ಸಂದೇಶ ಕಳುಹಿಸಿದೆ. ಕಂಪನಿಯು ಮರು ಸಂಘಟನೆಯ ಭಾಗವಾಗಿ ಉದ್ಯೋಗ ವಜಾ ನಿರ್ಧರಿಸಿದ್ದಾಗಿ ತಿಳಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಈ ಬುಕಿಂಗ್.ಕಾಮ್ ಕಂಪನಿಯು ಸ್ಪರ್ಧಾತ್ಮಕ ಉದ್ಯಮದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಉತ್ತಮ ಕೆಲಸ ಕಾರ್ಯ ನಿರ್ವಹಣೆಯಿಂದ ಖ್ಯಾತಿ ಗಳಿಸಿದೆ. ಗ್ರಾಹಕ-ಕೇಂದ್ರಿತ ನಾವೀನ್ಯತೆ ವೇಗದಲ್ಲಿ ಗ್ರಾಹಕ ಸ್ನೇಹಿಯಾಗಿ ಸೇವೆ ನೀಡುತ್ತಿದೆ. ಆಡಳಿತ ಸುಧಾರಣೆ, ಆರ್ಥಿಕ ಹೊಂದಾಣಿ ಹಾಗೂ ಇನ್ನಿತರ ಕಾರಣಗಳಿಂದಾಗಿ ಉದ್ಯೋಗ ಕಡಿತ ಘೋಷಿಸಿದೆ ಎನ್ನಲಾಗಿದೆ.
ಒಟ್ಟು ಎಷ್ಟು ಉದ್ಯೋಗಿಗಳ ವಜಾ
ರಿಯಲ್ ಎಸ್ಟೇಟ್ ಉಳಿತಾಯವನ್ನು ಹೆಚ್ಚಿಸಲು ಕಂಪನಿಯು ನೌಕರರ ವಜಾದಂತಹ ಬದಲಾವಣೆಯತ್ತ ಮುಖ ಮಾಡಿದೆ. ಕಂಪನಿ ಪುನ ಸಂಘಟನೆಯು ಅನೇಕ ನೌಕರ ಕೆಲಸದ ಮೇಲೆ ಪರಿಣಾಮ ಉಂಟು ಮಾಡುತ್ತಿದೆ. ಆದರೆ ಎಷ್ಟು ಮಂದಿ ಕೆಲಸ ಬಿಟ್ಟು ಹೊರನಡೆಯಲಿದ್ದಾರೆ ಎಂಬ ಖಚಿತ ಅಂಕಿ ಸಂಖ್ಯೆಗಳು ಸಿಕ್ಕಿಲ್ಲ. ಕಂಪನಿ, ಬುಕಿಂಗ್ ಹೋಲ್ಡಿಂಗ್ಸ್‌ನ ಇನ್ನಿತರ ಭಾಗ/ಬ್ರ್ಯಾಂಡ್ ಆದ Agoda, Kayak, Priceline ಮತ್ತು OpenTable ಗಳ ಮೇಲೆ ಯಾವುದೇ ಎಫೆಕ್ಟ್ ಆಗುವುದಿಲ್ಲ ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಕಂಪನಿಯು ಕಳೆದ ವರ್ಷ 2023ರಲ್ಲಿ ಬುಕಿಂಗ್ ಹೋಲ್ಡಿಂಗ್ಸ್ ಸುಮಾರು 23,600 ಜನರ ಕಾರ್ಯಪಡೆ ಹೊಂದಿತ್ತು. ನಂತರದ ಮೂರನೇ ತ್ರೈಮಾಸಿಕದಲ್ಲಿ ಸಂಸ್ಥೆಯು ತನ್ನ ನಿರ್ವಹಣಾ ವೆಚ್ಚದಲ್ಲಿ ಶೇಕಡಾ 13.6 ರಷ್ಟು ಹೆಚ್ಚಾಗಿದ್ದರ ಬಗ್ಗೆ ವರದಿ ಮಾಡಿತು. ಅದರ ಮುಂದುವರಿದ ಭಾಗವಾಗಿ ವೆಚ್ಚ ನಿರ್ವಹಣೆ ಸಂಬಂಧವಾಗಿಯೂ ಈ ಉದ್ಯೋಗಿಗಳ ವಜಾಗೆ ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications