ನಮ್ಮ ಮೆಟ್ರೋದಲ್ಲಿ 36 ಹುದ್ದೆಗಳಿಗೆ ಅರ್ಜಿ ಆಹ್ವಾನ, ಅರ್ಜಿ ಹಾಕಿ
ಬೆಂಗಳೂರು, ಜನವರಿ 22: ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್ ಸಿಲ್) ನಮ್ಮ ಮೆಟ್ರೋದಲ್ಲಿ ಖಾಲಿ ಇರುವ 36 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
36 ಹುದ್ದೆಗಳ ಪೈಕಿ 5 ಸಹಾಯಕ ಮುಖ್ಯ ಇಂಜಿನಿಯರ್ ಮತ್ತು 31 ಕಾರ್ಯಕಾರಿ ಇಂಜಿನಿಯರ್ ಹುದ್ದೆಗಳಾಗಿವೆ. ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಹಾಗೂ ಅರ್ಹ ಅಭ್ಯರ್ಥಿಗಳು ಫೆಬ್ರವರಿ 17, 2018ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.
ಸಂಸ್ಥೆ : ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್ ಸಿಲ್).
ಹುದ್ದೆ ಹೆಸರು: ಸಹಾಯಕ ಮುಖ್ಯ ಇಂಜಿನಿಯರ್ ಹಾಗೂ ಕಾರ್ಯಕಾರಿ ಇಂಜಿನಿಯರ್
ಒಟ್ಟು ಹುದ್ದೆಗಳ ಸಂಖ್ಯೆ: 36
ಉದ್ಯೋಗದ ಸ್ಥಳ : ಬೆಂಗಳೂರು
ಕೊನೆ ದಿನಾಂಕ : ಫೆಬ್ರವರಿ 17, 2018

1. ಸಹಾಯಕ ಮುಖ್ಯ ಇಂಜಿನಿಯರ್
* ವಿದ್ಯಾರ್ಹತೆ: ಬಿಇ, ಬಿ,ಟೆಕ್ ಇಂಜಿನಿಯರಿಂಗ್ (ಸಿವಿಎಲ್) ಪದವಿ ಪೂರ್ಣಗೊಳಿಸಿರಬೇಕು.
* ವೇತನ ಶ್ರೇಣಿ: 1,22,630/- ರು. ತಿಂಗಳಿಗೆ.
* ವಯೋಮಿತಿ: ಗರಿಷ್ಟ 55 ವರ್ಷ.
2. ಕಾರ್ಯಕಾರಿ ಇಂಜಿನಿಯರ್
* ವಿದ್ಯಾರ್ಹತೆ: ಬಿಇ, ಬಿ,ಟೆಕ್ ಅಥವಾ ಡಿಪ್ಲೋಮಾ ನಲ್ಲಿ ಸಿವಿಎಲ್ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿರಬೇಕು.
* ವೇತನ ಶ್ರೇಣಿ: 67,430/ ರು. ತಿಂಗಳಿಗೆ.
* ವಯೋಮಿತಿ: ಗರಿಷ್ಟ 50 ವರ್ಷ.
ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಕ್ಲಿಕ್ ಮಾಡಿ












Click it and Unblock the Notifications