65 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಬಿಎಂಆರ್‌ಸಿಎಲ್

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 12 : ಬೆಂಗಳೂರು ಮೆಟ್ರೋ ರೈಲು ನಿಗಮವು (ಬಿಎಂಆರ್‌ಸಿಎಲ್‌) 65 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿಗಳನ್ನು ಸಲ್ಲಿಸಲು ಏಪ್ರಿಲ್ 25, 2016 ಕೊನೆಯ ದಿನವಾಗಿದೆ.

ಅಸಿಸ್ಟೆಂಟ್ ಇಂಜಿನಿಯರ್ 15, ಸೆಕ್ಷನ್ ಇಂಜಿನಿಯರ್ 25, ಜ್ಯೂನಿಯರ್ ಇಂಜಿನಿಯರ್ 25 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನಿಗದಿತ ಅರ್ಜಿ ನಮೂನೆಯಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ ಅಂಚೆ ಮೂಲಕ ಸಲ್ಲಿಸಬಹುದಾಗಿದೆ. [806 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ KPSC]

jobs

ಅರ್ಜಿ ಸಲ್ಲಿಸಲು ವಯೋಮಿತಿ 35 ವರ್ಷಗಳು. ಬಿ.ಇ ಅಥವ ಬಿ.ಟೆಕ್ ಪದವಿ ಪಡೆದವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆ. [ನೇಮಕಾತಿ ವಿವರಗಳು ಇಲ್ಲಿವೆ]

http://www.bmrc.co.in/ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅರ್ಜಿಗಳನ್ನು ಡೌನ್ ಲೋಡ್ ಮಾಡಿಕೊಂಡು, ಭರ್ತಿ ಮಾಡಿ ಸಲ್ಲಿಸಬಹುದಾಗಿದೆ. [ಅರ್ಜಿಗಾಗಿ ಇಲ್ಲಿ ಕ್ಲಿಕ್ ಮಾಡಿ]

ಅರ್ಜಿ ಸಲ್ಲಿಸಲು ವಿಳಾಸ :
THE GENERAL MANAGER (HR)
BANGALORE METRO RAIL CORPORATION LIMITED
III FLOOR, BMTC COMPLEX, K.H.ROAD, SHANTHINAGAR,
BANGALORE 560027.

ಇಂಗ್ಲಿಷ್ ನಲ್ಲಿ ಓದಿ

ಇದನ್ನು ಓದಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bangalore Metro Rail Corporation Limited (BMRCL) invites applications from qualified and experienced personnel for contract appointment to middle and junior level Engineering positions in the project wing. 25th April 2016 last date for submission of applications.
Please Wait while comments are loading...