ಬಿಎಚ್ಇಎಲ್ ನಲ್ಲಿ 386 ಹುದ್ದೆಗಳು ಖಾಲಿ

Written By: Ramesh
Subscribe to Oneindia Kannada

ಬೆಂಗಳೂರು, ನವೆಂಬರ್. 07 : ಖಾಲಿ ಇರುವ ಐಟಿಐ ಅಪ್ರೆಂಟಿಸ್ 386 ಹುದ್ದೆಗಳಿಗೆ ಭಾರತ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್. (ಬಿಎಚ್ಇಎಲ್ )ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ನವೆಂಬರ್ 12 ಕೊನೆ ದಿನವಾಗಿದೆ.

ಹುದ್ದೆ: ಐಟಿಐ ಅಪ್ರೆಂಟಿಸ್
ವಿದ್ಯಾರ್ಹತೆ: ಐಟಿಐ
ಹುದ್ದೆ ಸ್ಥಳ: ಕರ್ನಾಟಕ
ವಯಸ್ಸು: 18 ರಿಂದ 27 ವಯಸ್ಸಿನೊಳಗಿರಬೇಕು.

BHEL Recruitment 2016-17 Notification 386 Posts

ಆಯ್ಕೆ ವಿಧಾನ: ವೈಯಕ್ತಿಕ ಸಂದರ್ಶನ ಹಾಗೂ ಬಂದ ಅರ್ಜಿ ಸಂಖ್ಯೆಯ ಆಧಾರದ ಮೇಲೆ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಬಿಎಚ್ಇಲ್ ಪ್ರಕಟಣೆಯಲ್ಲಿ ತಿಳಿಸಿದೆ.

ಆಸಕ್ತ ಅಭ್ಯರ್ಥಿಗಳು ನವೆಂಬರ್ 12ರೊಳಗೆ ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.

ಅರ್ಜಿ ಸಲ್ಲಿಸಿದ ಪ್ರತಿ ಹಾಗೂ ಸಂಬಂಧಿಸಿದ ಮೂಲ ದಾಖಲೆಗಳನ್ನು ಸ್ವಯಂ ದೃಢೀಕರಣ ಮಾಡಿ ಡಿಜಿಎಮ್(ಹೆಚ್ ಆರ್ ಅಡಿಮಿನಿಸ್ಟ್ರೇಶನ್) ಭಾರತ್ ಹೆವಿ ಎಲೆಕ್ಟ್ರಿಕಲ್ ಲಿಮಿಟೆಡ್, ಎಲೆಕ್ಟ್ರಾನಿಕ್ಸ್ ಡಿವಿಜನ್, ಮೈಸೂರು,ರಸ್ತೆ ಬೆಂಗಳೂರು-560026 ವಿಳಾಸಕ್ಕೆ ನವೆಂಬರ್ 15 ರೊಳಗೆ ತಲುಪುವಂತೆ ಕಳುಹಿಸಬೇಕು.

ಹೆಚ್ಚಿನ ಮಾಹಿತಿಗಾಗಿ click here

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BHEL recruitment 2016-17 notification 386 ITI Apprentice posts :- Bharat Heavy Electrical limited (BHEL) invites application for the position of 386 ITI Apprentice in various trades. Apply before 12th November 2016.
Please Wait while comments are loading...