ಮೀಸೆ ಚಿಗುರುವ ಮುನ್ನವೇ ₹52,00,000 ಸಂಬಳ! ಆತನ ವ್ಯಾಸಂಗ ಏನು?
ಸಾಮಾನ್ಯವಾಗಿ ಶಾಲಾ-ಕಾಲೇಜುಗಳ ವ್ಯಾಸಂಗ ಮುಗಿದ ಬಳಿಕ ಮುಂದೇನು? ಎಲ್ಲಿ ಕೆಲಸ ಎಂಬ ಚಿಂತೆ ಬಹುವಾಗಿ ತಲೆಯನ್ನು ತಿನ್ನುತ್ತಲೇ ಇರುತ್ತದೆ. ಇನ್ನು ಮುಖದ ಮೇಲೆ ಮೀಸೆ ನೀಟಾಗಿ ಬೆಳೆಯುವ ಮುನ್ನವೇ ಕೆಲಸದ ಚಿಂತೆ ಮುಖದ ತುಂಬ ಆವರಿಸಿಕೊಂಡು ಬಿಟ್ಟಿರುತ್ತದೆ. ಆದರೆ, ಬೆಂಗಳೂರಿನ ಯುವಕನೊಬ್ಬ ಈ ಚಿಂತೆಗಳಿಗೆ ಗುಡ್ ಬಾಯ್ ಹೇಳಿದ್ದು, ವ್ಯಾಸಂಗ ಮುಗಿಯುತ್ತಿದ್ದಂತೆ ಬಂಪರ್ ಲಾಟರಿ ಹೊಡೆದ ಖುಷಿ ಈತನ ಮುಖದಲ್ಲಿ ಮನೆ ಮಾಡಿದೆ. ಹಾಗಿದ್ದರೆ ಆಗಿದ್ದು ಏನು? ಆತನ ಜೇಬು ಸೇರಲಿರುವ ಸಂಬಳ ಎಷ್ಟು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಪ್ರಸ್ತುತ ಕೆಲವು ಶಿಕ್ಷಣ ಸಂಸ್ಥೆಗಳು ಸಾಂಪ್ರಾದಾಯಿಕ ಶಿಕ್ಷಣ ಹೊರತುಪಡಿಸಿ ವೃತ್ತಿಪರರನ್ನು ಸೃಷ್ಟಿಸುವ ಕೆಲಸವನ್ನು ಮಾಡುತ್ತಿವೆ. ಈ ಸಾಲಿನಲ್ಲಿ ಬೆಂಗಳೂರಿನ ಮಣಿಪಾಲ್ ಇನ್ಸ್ಟಿಟ್ಯೂಟ್ ಕೂಡ ಇದ್ದು, ಇದೇ ಸಂಸ್ಥೆಯ ಅತೀ ಕಿರಿಯ ವಯಸಿನ ವಿದ್ಯಾರ್ಥಿಯೊಬ್ಬ ಯಾರೂ ಊಹಿಸಲಾರದ ಸಂಬಳದ ಹುದ್ದೆಯನ್ನು ಗಿಟ್ಟಿಸಿಕೊಂಡಿದ್ದಾನೆ.

ಸಾಧನೆ ಯಾರಪ್ಪನ ಸ್ವತ್ತಲ್ಲ ಎಂಬುದನ್ನು ಬೆಂಗಳೂರಿನ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಇಸಿ ವಿಭಾಗದ ಬಿ.ಟೆಕ್ ವಿದ್ಯಾರ್ಥಿ ತೋರಿಸಿಕೊಟ್ಟಿದ್ದಾನೆ. ಈತ 52,00,000 ರೂಪಾಯಿ ಸಂಬಳದ ಹುದ್ದೆಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿ ಆಗಿದ್ದಾನೆ.
ವೃತ್ತಿಪರ ಶಿಕ್ಷಣದಿಂದ ವಿದ್ಯಾರ್ಥಿಗಳು ಅತೀ ಬೇಗನೆ ಉದ್ಯೋಗ ಪಡೆದುಕೊಳ್ಳುತ್ತಿದ್ದಾರೆ. ಇದೀಗ ಇದೇ ಮಾದರಿಯ ಶಿಕ್ಷಣದಿಂದ ಬೆಂಗಳೂರಿನ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಇಸಿ ವಿಭಾಗದ ಬಿ.ಟೆಕ್ ವಿದ್ಯಾರ್ಥಿ 52,00,000 ಲಕ್ಷ ರೂಪಾಯಿ ಸಂಬಳದ ಪಡೆದುಕೊಳ್ಳುವಲ್ಲಿ ಯಶಸ್ವಿ ಆಗಿದ್ದಾರೆ.
ಈ ವರ್ಷ ಕ್ಯಾಂಪಸ್ ಪ್ಲೇಸ್‌ಮೆಂಟ್ ನಡೆದ ವೇಳೆ ಅದ್ಭುತ ಫಲಿತಾಂಶ ಪಡೆದುಕೊಂಡು ಇಸಿ ವಿಭಾಗದ ಬಿ.ಟೆಕ್ ವಿದ್ಯಾರ್ಥಿ ವಿಜ್ವಲ್ ನಾರಾಯಣ ಅವರು 52,00,000 ರೂಪಾಯಿ ಸಂಬಳದ ಪ್ಯಾಕೇಜ್‌ನ ಹುದ್ದೆಯನ್ನು ಪಡೆದುಕೊಂಡಿದ್ದಾನೆ. ಇದು ಎಂಐಟಿ ಬೆಂಗಳೂರಿನ ಮೊದಲ ಪದವಿ ಬ್ಯಾಚ್‌ಗೆ ಮಹತ್ವದ ಮೈಲಿಗಲ್ಲು ಆಗಿದೆ.
ಅಷ್ಟೇ ಅಲ್ಲದೆ, ವಿವಿಧ ವಿಭಾಗ ವಿದ್ಯಾರ್ಥಿಗಳೂ ಹೆಚ್ಚಿನ ವೇತನದ ಪ್ಯಾಕೇಜ್‌ಗಳನ್ನು ಪಡೆದಿದ್ದು, ಅವುಗಳಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರದ್ಯೋತ ಕೀರ್ತಿಕರ್ ಅವರ 22,00,000 ರೂಪಾಯಿ ಪ್ಯಾಕೇಜ್, ಸಿಎಸ್ಇ - AI ಮತ್ತು ಸೈಬರ್ ಸೆಕ್ಯುರಿಟಿ ವಿಭಾಗದ ಹಿಮವರ್ಷಿಣಿ ಬೀಡಾಲ ಮತ್ತು ಶ್ರೀಯಾ ಖೇರಾ ಅವರ 18.6 ಲಕ್ಷ ರೂಪಾಯಿ ಪ್ಯಾಕೇಜ್ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ಪಿ.ಯಾಸ್ಮೀನ್ ಬೇಗಂ ಎಂಬುವರು 15,00,000 ರೂಪಾಯಿ ಸಂಬಳ ಪ್ಯಾಕೇಜ್‌ನ ಹುದ್ದೆಯನ್ನು ಗಿಟ್ಟಿಸಿಕೊಂಡಿದ್ದಾರೆ.
ಬೆಂಗಳೂರು ಕ್ಯಾಂಪಸ್‌ನ ಪ್ರೊ-ವೈಸ್-ಚಾನ್ಸೆಲರ್ ಪ್ರೊ. ಡಾ.ಮಧು ವೀರರಾಘವನ್ ಮಾತನಾಡಿ, ಸಾಂಪ್ರದಾಯಿಕ ಶಿಕ್ಷಣವನ್ನು ಮೀರಿ ವೃತ್ತಿಪರರನ್ನು ಸಿದ್ಧಪಡಿಸುವ ಬಗ್ಗೆಯೇ ನಾವು ಹೆಚ್ಚು ಗಮನ ಹರಿಸುತ್ತೇವೆ. ಆಧುನಿಕ ಮಾರುಕಟ್ಟೆ ಬೇಡಿಕೆಗೆ ಸರಿಹೊಂದುವ ಪಠ್ಯಕ್ರಮವನ್ನು ರೂಪಿಸುವ ಹಾಗೂ ಪ್ರಾಯೋಗಿಕ ಕೌಶಲ್ಯವನ್ನು ವಿದ್ಯಾರ್ಥಿಗಳಲ್ಲಿ ಅಭಿವೃದ್ಧಿ ಪಡಿಸುವ ಮೂಲಕ, ಅವರು ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ತಮವಾಗಿ ಸ್ಪರ್ಧಿಸಲು ತಯಾರಾಗಿದ್ದಾರೆಯೇ ಎನ್ನುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ. ಅದಕ್ಕೆ ನಮ್ಮಲ್ಲಿ ಆಗುವ ಕ್ಯಾಂಪಸ್ ಆಯ್ಕೆ ಹಾಗೂ ನಮ್ಮ ವಿದ್ಯಾರ್ಥಿಗಳಿಗೆ ಸಿಕ್ಕ ಪ್ಯಾಕೇಜ್‌ಗಳು ಸಾಕ್ಷಿಯಾಗಿದೆ ಎಂದರು.
ಈ ಕ್ಯಾಂಪಸ್ ಆಯ್ಕೆ ಬಗ್ಗೆ ಮಾತನಾಡಿದ ಎಂಐಟಿ ಬೆಂಗಳೂರಿನ ನಿರ್ದೇಶಕ ಡಾ.ಐವೆನ್ ಜೋಸ್, ಎಂಐಟಿ ಬೆಂಗಳೂರಿನಲ್ಲಿ, ಸಮಯಕ್ಕೆ ತಕ್ಕಂತೆ ನವೀಕರಣಗೊಳ್ಳುವುದರ ಜೊತೆಗೆ ಪ್ರಸ್ತುತ ಉದ್ಯಮ ಕ್ಷೇತ್ರಕ್ಕೆ ಅಗತ್ಯವಿರುವ ಕಲಿಕಾ ವ್ಯವಸ್ಥೆ ನಮ್ಮಲ್ಲಿದೆ. ಪ್ರತಿಷ್ಠಿತ ಕಂಪನಿಗಳು, ಸಂಶೋಧನಾ ಸಂಸ್ಥೆಗಳು ಮತ್ತು ಸ್ಟಾರ್ಟ್-ಅಪ್ ಎಲ್ಲವೂ ನಮ್ಮ ಸಂಸ್ಥೆ ಜೊತೆಗೆ ಉತ್ತಮ ಸಂಬಂಧ ಇರುವುದರಿಂದ ನಮ್ಮ ವಿದ್ಯಾರ್ಥಿಗಳಿಗೆ ವಿಷಯದ ಕುರಿತು ಸಮಗ್ರ ಜ್ಞಾನ ದೊರೆಯುತ್ತದೆ ಎಂದರು.
ಸುಧಾರಿತ ಮೂಲಸೌಕರ್ಯ, ಅಂತರಶಿಸ್ತೀಯ ಕೆಲಸಗಳು ಮತ್ತು ಉತ್ತಮ ಅಧ್ಯಾಪಕರ ವರ್ಗ ಇರುವುದರಿಂದ ನಮ್ಮಲ್ಲಿ ಕಲಿಯುವ ವಿದ್ಯಾರ್ಥಿಗಳು ನೈಜ-ಪ್ರಪಂಚದ ಸವಾಲುಗಳ ಬಗ್ಗೆ ಕೆಲಸ ಮಾಡಿ ಅದರ ಅನುಭವನ್ನು ಪಡೆಯುವುದರಿಂದಲೇ ಉತ್ತಮ ಉದ್ಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಅಲ್ಲದೆ, ಇಂಟರ್ನ್‌ಶಿಪ್ ಡ್ರೈವ್‌ನಲ್ಲಿಯೂ ಎಂಐಟಿ ಬೆಂಗಳೂರು ವಿದ್ಯಾರ್ಥಿಗಳು ಅತ್ಯುತ್ತಮ ಸ್ಟೈಫಂಡ್ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ತಂತ್ರಜ್ಞಾನ, ಸಲಹಾ, ಆರೋಗ್ಯ, ಇಂಧನ ಮತ್ತು ಹಣಕಾಸು ಮುಂತಾದ ಕ್ಷೇತ್ರಗಳ 250ಕ್ಕೂ ಹೆಚ್ಚು ಕಂಪನಿಗಳು ಈ ಪ್ಲೇಸ್‌ಮೆಂಟ್‌ನಲ್ಲಿ ಭಾಗವಹಿಸಿದ್ದವು, ಮೈಕ್ರೋಸಾಫ್ಟ್, ಅಮೆಜಾನ್, ಮೆಕಿನ್ಸೆ & ಕಂಪನಿ, ಕೊಂಪ್ರೈಸ್, ಆಪ್ಟಮ್, ಸವಿಯಂಟ್, ಶೆಲ್, ಎಚ್‌ಪಿಇ, ಇನ್ಫೋಸಿಸ್, ಟಿಸಿಎಸ್, ಇಂಟೆಲ್, ಗೋಲ್ಡ್‌ಮನ್ ಸ್ಯಾಚ್ಸ್, ಫಿಲಿಪ್ಸ್, ಯೂನಿಲಿವರ್, ಡೆಲ್, ಕ್ಯಾಪ್‌ಜೆಮಿನಿ, ಸ್ವಿಗ್ಗಿ, ಲುಮಿಕ್, ಬ್ಲ್ಯಾಕ್‌ರಾಕ್, ಕಾಗ್ನಿಜೆಂಟ್, ಸೀಮೆನ್ಸ್ ಹೆಲ್ತ್‌ನಿಯರ್ಸ್ ಇತ್ಯಾದಿ.
ಇದು 1953ರಲ್ಲಿ ಸ್ಥಾಪನೆಯಾದ ಎಂದು ಉತ್ಕೃಷ್ಟ ಸಂಸ್ಥೆಯಾಗಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ದಾಖಲೆ, ಅತ್ಯಾಧುನಿಕ ಮೂಲಸೌಕರ್ಯ ಮತ್ತು ಗಮನಾರ್ಹ ಸಂಶೋಧನಾ ಕೊಡುಗೆಗಳೊಂದಿಗೆ, ಮಾಹೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಮತ್ತು ಮೆಚ್ಚುಗೆಯನ್ನು ಗಳಿಸಿದೆ.
ಅಕ್ಟೋಬರ್ 2020ರಲ್ಲಿ ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ಮಾಹೆಗೆ ಪ್ರತಿಷ್ಠಿತ ಇನ್ಸ್ಟಿಟ್ಯೂಷನ್ ಆಫ್ ಎಮಿನೆನ್ಸ್ ಡೀಮ್ಡ್ ವಿಶ್ವವಿದ್ಯಾಲಯ ಎಂಬ ಹುದ್ದೆಯನ್ನು ನೀಡಿ ಗೌರವಿಸಿತು. ಪ್ರಸ್ತುತ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟಿನಲ್ಲಿ 6ನೇ ಸ್ಥಾನದಲ್ಲಿ ಇದೆ. ಮಾಹೆ ಪರಿವರ್ತನಾತ್ಮಕ ಕಲಿಕೆಯ ಅನುಭವವನ್ನು ಬಯಸುವ ವಿದ್ಯಾರ್ಥಿಗಳಿಗೆ ಆದ್ಯತೆಯ ಆಯ್ಕೆ ಆಗಿದೆ.












Click it and Unblock the Notifications