ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

BEL Recruitment 2022: ಬಿಇಎಲ್‌ನಲ್ಲಿ 141 ಪ್ರಾಜೆಕ್ಟ್ ಟ್ರೈನಿ ಇಂಜಿನಿಯರ್ ಹುದ್ದೆಗಳಿವೆ

|
Google Oneindia Kannada News

ಬೆಂಗಳೂರು, ಅ.4: ಸರ್ಕಾರಿ ಸ್ವಾಮ್ಯದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(ಬಿಇಎಲ್) 2022ನೇ ಸಾಲಿನ ನೇಮಕಾತಿ ಮುಂದುವರೆಸಿದೆ. ಈ ಕುರಿತಂತೆ ಅಧಿಕೃತ ವೆಬ್‌ಸೈಟಿನಲ್ಲಿ ಪ್ರಕಟಣೆ ಹೊರಡಿಸಿದೆ.141ಕ್ಕೂ ಅಧಿಕ ಪ್ರಾಜೆಕ್ಟ್, ಟ್ರೈನಿ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಈ ಹುದ್ದೆಗಳಿಗೆ ಆಸಕ್ತ ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 10, 2022ರೊಳಗೆ ಅರ್ಜಿ ಸಲ್ಲಿಸಬಹುದು.

ಸಂಸ್ಥೆ ಹೆಸರು: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL)
ಹುದ್ದೆ ಹೆಸರು: Project Engineer,Trainee Engineer I
ಒಟ್ಟು ಹುದ್ದೆಗಳು:141
ಟ್ರೈನಿ ಇಂಜಿನಿಯರ್: 40 ಹುದ್ದೆ
ಪ್ರಾಜೆಕ್ಟ್ ಇಂಜಿನಿಯರ್: 60 ಹುದ್ದೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಅಕ್ಟೋಬರ್ 14, 2022

ಕರ್ನಾಟಕ; ಒಟ್ಟು ಮಂಜೂರಾಗಿರುವ, ಖಾಲಿ ಇರುವ ಹುದ್ದೆಗಳ ವಿವರ ಕರ್ನಾಟಕ; ಒಟ್ಟು ಮಂಜೂರಾಗಿರುವ, ಖಾಲಿ ಇರುವ ಹುದ್ದೆಗಳ ವಿವರ

ಹುದ್ದೆಗಳ ವಿವರ:
Project Engineer: 52
Trainee Engineer I: 89

ಸಂಬಳ ನಿರೀಕ್ಷೆ:
Project Engineer: 30,000 ಪ್ರತಿ ತಿಂಗಳು
Trainee Engineer: 40,000 ಪ್ರತಿ ತಿಂಗಳು

ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯ ಅಥವಾ ವಿದ್ಯಾಸಂಸ್ಥೆಯಿಂದ ಬಿಇ/ ಬಿ. ಟೆಕ್ ಪದವಿ (ಅಧಿಸೂಚನೆಯನ್ನು ಪರಿಶೀಲಿಸಿ).

BEL Recruitment 2022: Apply Online 141 Project Engineer-I & Trainee Engineer-I Posts

ಸರ್ಕಾರದಿಂದ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯದಿಂದ ಪೂರ್ಣಾವಧಿ ಬಿಇ/ ಬಿ. ಟೆಕ್/ ಎಂ.ಇ/ಎಂ.ಟೆಕ್ (ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್/ ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಮ್ಯೂನಿಕೇಷನ್) ಶೇ 55 ರಷ್ಟು ಅಂಕಗಳೊಂದಿಗೆ ಪಾಸಾಗಿರಬೇಕು. ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಅಂಕಗಳಲ್ಲಿ ವಿನಾಯತಿ ಸಿಗಲಿದೆ.

ಪ್ರಾಜೆಕ್ಟ್ ಇಂಜಿನಿಯರ್: ಕನಿಷ್ಠ 55% ಅಂಕಗಳು ಮತ್ತು ಕನಿಷ್ಠ 02 ವರ್ಷಗಳ ಅನುಭವದೊಂದಿಗೆ ಇಂಜಿನಿಯರಿಂಗ್‌ನ ಸಂಬಂಧಿತ ವಿಭಾಗಗಳಲ್ಲಿ AICTE ಅನುಮೋದಿತ ಸಂಸ್ಥೆ / ವಿಶ್ವವಿದ್ಯಾಲಯದಿಂದ ಪೂರ್ಣ ಸಮಯದ BE/ B.Tech ಇಂಜಿನಿಯರಿಂಗ್‌ (4 ವರ್ಷಗಳು) ಕೋರ್ಸ್.

ಟ್ರೈನಿ ಇಂಜಿನಿಯರ್: ಕನಿಷ್ಠ 55% ಅಂಕಗಳು ಮತ್ತು ಕನಿಷ್ಠ 01 ವರ್ಷಗಳ ಅನುಭವದೊಂದಿಗೆ ಇಂಜಿನಿಯರಿಂಗ್ ಸಂಬಂಧಿತ ವಿಭಾಗಗಳಲ್ಲಿ AICTE ಅನುಮೋದಿತ ಸಂಸ್ಥೆ / ವಿಶ್ವವಿದ್ಯಾಲಯದಿಂದ ಪೂರ್ಣ ಸಮಯದ BE/ B.Tech ಇಂಜಿನಿಯರಿಂಗ್ (4 ವರ್ಷಗಳು) ಕೋರ್ಸ್.

ವಯೋಮಿತಿ:

ಪ್ರಾಜೆಕ್ಟ್ ಇಂಜಿನಿಯರ್: ವಯೋಮಿತಿ: 32 ವರ್ಷ

ಟ್ರೈನಿ ಇಂಜಿನಿಯರ್: 28 ವರ್ಷ

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ವಿನಾಯಿತಿ, ಹಿಂದುಳಿದ ವರ್ಗ (ಒಬಿಸಿ) ದ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ದಿವ್ಯಾಂಗ ಅಭ್ಯರ್ಥಿಗಳಿಗೆ 10 ವರ್ಷ ವಿನಾಯಿತಿಯನ್ನು ನಿಯಮಾನುಸಾರ ಸಿಗಲಿದೆ.

ಅರ್ಜಿ ಶುಲ್ಕ:
ಟ್ರೈನಿ ಇಂಜಿನಿಯರ್:
ಸಾಮಾನ್ಯ, ಆರ್ಥಿಕವಾಗಿ ಹಿಂದುಳಿದ ವರ್ಗ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ: 150 ರು ಪ್ಲಸ್ 18% ಜಿಎಸ್ ಟಿ (177 ರು)

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಅಭ್ಯರ್ಥಿ, ದಿವ್ಯಾಂಗ: ಯಾವುದೇ ಶುಲ್ಕವಿಲ್ಲ.

ಪ್ರಾಜೆಕ್ಟ್ ಇಂಜಿನಿಯರ್:
ಸಾಮಾನ್ಯ, ಆರ್ಥಿಕವಾಗಿ ಹಿಂದುಳಿದ ವರ್ಗ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ: 400ರು ಪ್ಲಸ್ 18% ಜಿಎಸ್ ಟಿ(472 ರು )
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಅಭ್ಯರ್ಥಿ, ದಿವ್ಯಾಂಗ: ಯಾವುದೇ ಶುಲ್ಕವಿಲ್ಲ.

ಅರ್ಜಿ ಶುಲ್ಕ ಪಾವತಿಸುವ ವಿಧಾನ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಲೆಕ್ಟ್ ಮೂಲಕ ರಿಮೆಟ್ ಮಾಡತಕ್ಕದ್ದು.

ನೇಮಕಾತಿ ಪ್ರಕ್ರಿಯೆ:
ಪದವಿ ಅಂತಿಮ ವರ್ಷದ ಅಂಕಗಳ ಸರಾಸರಿ,ಮೆರಿಟ್ ಆಧಾರದ ಮೇಲೆ, ಅನುಭವ, ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಆಧಾರದ ಮೇಲೆ ನೇಮಕಾತಿ. ಬಿಇಎಲ್ ಅಧಿಕೃತ ವೆಬ್ ತಾಣದಲ್ಲಿ ಪರೀಕ್ಷೆ ಫಲಿತಾಂಶ ಪ್ರಕಟಿಸಲಾಗುತ್ತದೆ.

ಪ್ರಮುಖ ದಿನಗಳು:

ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 14/10/2022

ಅರ್ಜಿ ಸಲ್ಲಿಸುವ ವಿಧಾನ:
* ಬಿ.ಇ.ಎಲ್ ಅಧಿಸೂಚನೆ ಓದಿಕೊಂಡು, ಅರ್ಹತೆಯುಳ್ಳ ಅಭ್ಯರ್ಥಿಗಳು ಅಧಿಕೃತ ವೆಬ್ ತಾಣ(bel-india.in)ದಲ್ಲಿ ನೇಮಕಾತಿ ಲಿಂಕ್ ಕ್ಲಿಕ್ ಮಾಡಿ.
* ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಮುನ್ನ ಇಮೇಲ್ ಐಡಿ ಹಾಗೂ ಮೊಬೈಲ್ ನಂಬರ್ ನೀಡಿ.
* ವಯೋಮಿತಿ, ವಿದ್ಯಾರ್ಹತೆ, ಅನುಭವ, ವಯೋಮಿತಿ ವಿನಾಯಿತಿ ಮುಂತಾದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸತಕ್ಕದ್ದು.
* ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆ ಅರ್ಜಿ ನಮೂನೆ(Application for Project Engineer/ Trainee Engineer)ಯನ್ನು ಕ್ಲಿಕ್ ಮಾಡಿ ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ಪ್ರಮಾಣ ಪತ್ರಗಳನ್ನು ಲಗತ್ತಿಸಿ.
* ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಬಹುದು. ಆನ್ ಲೈನ್ ಮೂಲಕವೇ ಪೇಮೆಂಟ್ ಮಾಡಬಹುದು. ಡೆಬಿಟ್ ಕಾರ್ಡ್/ ರುಪೇ ಕಾರ್ಡ್/ ವೀಸಾ ಕಾರ್ಡ್/ ಮಾಸ್ಟರ್ ಕಾರ್ಡ್/ ಮಾಸ್ಟ್ರೋ ಅಲ್ಲದೆ ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್/ ಮೊಬೈಲ್ ವ್ಯಾಲೆಟ್/ಯುಪಿಐ ಮೂಲಕ ಹಣ ಪಾವತಿಸಬಹುದು.
* ಅರ್ಜಿ ಸಲ್ಲಿಸಿದ್ದಕ್ಕೆ ಹಾಗೂ ಶುಲ್ಕ ಪಾವತಿಗೆ ಇ ರಸೀತಿ ಪಡೆದುಕೊಳ್ಳಿ.

ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ

English summary
BEL recruitment 2022 notification has been released on official website for the recruitment of 141 Project Engineer-I & Trainee Engineer-I Posts
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X