BDA: ಬಿಡಿಎನಲ್ಲಿ ವಿವಿಧ 25 ಹುದ್ದೆಗಳ ನೇಮಕ; ವಿವರ ಇಲ್ಲಿದೆ
BDA: ಬಿಡಿಎನಲ್ಲಿ ವಿವಿಧ 25 ಹುದ್ದೆಗಳ ಭರ್ತಿಗೆ ಅಧಿಸೂಚನೆ ಸಿದ್ಧವಾಗಿದೆ. ಸರ್ಕಾರ ನೇರ ನೇಮಕಾತಿಗೆ ಅಧಿಸೂಚಿಸಲು ಕೆಇಎಗೆ ಆದೇಶ ನೀಡಿದ ಬಳಿಕವೇ ನೋಟಿಫಿಕೇಶನ್ ಬಿಡುಗಡೆ ಮಾಡಿ, ಅರ್ಜಿ ಸ್ವೀಕಾರ ಮಾಡಲಾಗುತ್ತದೆ. ಹಾಗಾದರೆ ಅರ್ಜಿ ಸಲ್ಲಿಸಬಯಸುವವರು ಯಾವೆಲ್ಲ ಅರ್ಹತೆಗಳನ್ನು ಹೊಂದಿರಬೇಕು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಇವುಗಳು ಸರ್ಕಾರಿ ಹುದ್ದೆಗಳಾಗಿದ್ದು, ನೇರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ. ಹುದ್ದೆಗಳ ವಿವರ, ಅರ್ಹತೆ, ಪರೀಕ್ಷೆ ವಿಧಾನದ ಮಾಹಿತಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈಗಾಗಲೇ ಬಿಡುಗಡೆ ಮಾಡಿದೆ.

ಉದ್ಯೋಗ ಇಲಾಖೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಆಗಿದ್ದು, ದ್ವಿತೀಯ ದರ್ಜೆ ಸಹಾಯಕರು, ಪ್ರಥಮ ದರ್ಜೆ ಸಹಾಯಕ ಒಟ್ಟು ಹುದ್ದೆಗಳ 25 ಹುದ್ದೆಗಳು ಖಾಲಿಯಿವೆ. ಪ್ರಥಮ ದರ್ಜೆ ಸಹಾಯಕ (FDA) 4 RPC & 1 HK ಸೇರಿ 5, ಇನ್ನು ದ್ವಿತೀಯ ದರ್ಜೆ ಸಹಾಯಕ (SDA) 14 RPC & 6 HK ಸೇರಿ ಒಟ್ಟು 20 ಹುದ್ದೆಗಳು ಖಾಲಿಯಿವೆ.
* ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಬಯಸುವವರು ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಶಿಕ್ಷಣ ಉತ್ತೀರ್ಣರಾಗಿಬೇಕಾಗುತ್ತದೆ. ಸಿಬಿಎಸ್‌ಇ, ಐಸಿಎಸ್ಇ ಬೋರ್ಡ್‌ನಿಂದ 12ನೇ ತರಗತಿ ಉತ್ತೀರ್ಣ ಆದವರು ಅರ್ಜಿ ಸಲ್ಲಿಸಬಹುದಾಗಿದೆ.
* ಪ್ರಥಮ ದರ್ಜೆ ಸಹಾಯಕರು ಹುದ್ದೆಗೆ ಅರ್ಜಿ ಸಲ್ಲಿಸಬಯಸುವವರು ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿಸಲ್ಪಟ್ಟ ವಿಶ್ವ ವಿದ್ಯಾಲಯದಿಂದ ಪದವಿ ಪಡೆದಿರಬೇಕು. ತಾಂತ್ರಿಕ ಶಿಕ್ಷಣದಲ್ಲಿ ಪದವಿ ತತ್ಸಮಾನ ಶಿಕ್ಷಣ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದಾಗಿದೆ.
ಎಸ್‌ಡಿಎ, ಎಫ್‌ಡಿಎ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರ ವಯಸ್ಸು ಕನಿಷ್ಠ 18 ವರ್ಷ ಆಗಿರಬೇಕು. ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ ಮೀರಿರಬಾರದು. ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 41 ವರ್ಷ ಮೀರಿರಬಾರದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ ಗರಿಷ್ಠ 43 ವರ್ಷ ಮೀರಿರಬಾರದು.
ಈ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷಾ ವಿಧಾನವನ್ನು ಸಹ ಕೆಇಎ ಪ್ರಕಟಿಸಿದ್ದು , ಕರ್ನಾಟಕ ನಾಗರೀಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು, 2021 ಪ್ರಕಾರ 2 ಪತ್ರಿಕೆಗಳಿಗೆ ಪರೀಕ್ಷೆ ನಡೆಸಲಾಗುತ್ತದೆ ಎಂದು ತಿಳಿಸಿದೆ.
* ಪತ್ರಿಕೆ-1 : ಸಾಮಾನ್ಯ ಜ್ಞಾನ
* ಪತ್ರಿಕೆ-2: ಕನ್ನಡ, ಇಂಗ್ಲಿಷ್, ಕಂಪ್ಯೂಟರ್ ಜ್ಞಾನ
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈಗಾಗಲೇ ತಾಂತ್ರಿಕ ಶಿಕ್ಷಣ ಇಲಾಖೆಯ ಎಸ್‌ಡಿಎ, ಎಫ್‌ಡಿಎ ಹುದ್ದೆಗಳ ನೇಮಕಾತಿಗೂ ಅಧಿಸೂಚನೆ ಸಿದ್ಧಪಡಿಸಿದೆ. ಶೀಘ್ರದಲ್ಲೇ ಈ ಎಲ್ಲಾ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ಪ್ರಾರಂಭ ಮಾಡಲಿದೆ. ಆದ್ದರಿಂದ ಆಸಕ್ತರು ಈಗಿನಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುವುದು ಉತ್ತಮ.











Click it and Unblock the Notifications