ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಮಹಿಳಾ ಅಗ್ನಿವೀರರ ನೇಮಕಾತಿ ರ್‍ಯಾಲಿ : ಅರ್ಜಿ ಸಲ್ಲಿಸುವುದು ಹೇಗೆ

|
Google Oneindia Kannada News

ಸೇನಾ ಪೊಲೀಸರ ಸಾಮಾನ್ಯ ಕರ್ತವ್ಯಕ್ಕಾಗಿ ಅಗ್ನಿಪಥ್ ಯೋಜನೆಯಡಿ ಮಹಿಳೆಯರಿಗಾಗಿ ಸೇನಾ ನೇಮಕಾತಿ ರ್‍ಯಾಲಿ ನವೆಂಬರ್ 1 ರಿಂದ 3 ರವರೆಗೆ ಬೆಂಗಳೂರಿನ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ನಡೆಯಲಿದೆ ಎಂದು ರಕ್ಷಣಾ ಸಚಿವಾಲಯ ಬಿಡುಗಡೆ ಮಾಡಿರುವ ಅಧಿಸೂಚನೆಯಲ್ಲಿ ತಿಳಿಸಿದೆ.

ಕರ್ನಾಟಕ, ಕೇರಳ, ಲಕ್ಷದ್ವೀಪ ಮತ್ತು ಮಾಹೆಗೆ ಸೇರಿದ ಮಹಿಳಾ ಅಭ್ಯರ್ಥಿಗಳು ನೇಮಕಾತಿ ರ್‍ಯಾಲಿಯಲ್ಲಿ ಪಾಲ್ಗೊಳ್ಳಲು ಅರ್ಹರಾಗಿರುತ್ತಾರೆ. ಯಾವುದೇ ಕಾರಣವನ್ನು ನೀಡದೆ ಯಾವುದೇ ಸಮಯದಲ್ಲಿ ರ್‍ಯಾಲಿಯನ್ನು ರದ್ದುಗೊಳಿಸಬಹುದು ಅಥವಾ ಮುಂದೂಡಬಹುದು ಎಂದು ರಕ್ಷಣಾ ಸಚಿವಾಲಯ ಅಧಿಸೂಚನೆಯಲ್ಲಿ ಉಲ್ಲೇಖಿಸಿದೆ.

ಅಗ್ನಿಪಥ್ ಯೋಜನೆ; ವಾಯುಪಡೆಗೆ 7.5 ಲಕ್ಷ ಅರ್ಜಿಅಗ್ನಿಪಥ್ ಯೋಜನೆ; ವಾಯುಪಡೆಗೆ 7.5 ಲಕ್ಷ ಅರ್ಜಿ

ಆಗಸ್ಟ್ 9 ರಿಂದ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಿದ್ದು, ನೋಂದಣಿ ಪ್ರಕ್ರಿಯೆ ಸೆಪ್ಟೆಂಬರ್ 7ರಂದು ಮುಕ್ತಾಯಗೊಳ್ಳಲಿದೆ. ಅರ್ಹ ಮತ್ತು ಆಸಕ್ತ ಮಹಿಳಾ ಅಭ್ಯರ್ಥಿಗಳು ಈ ರ್‍ಯಾಲಿಯಲ್ಲಿ ಪಾಲ್ಗೊಂಡು ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಪಡೆದುಕೊಳ್ಳಬಹುದಾಗಿದೆ.

ಅಗ್ನಿಪಥ್ ಯೋಜನೆಯಲ್ಲಿ ಅಗ್ನಿವೀರರನ್ನು ನೇಮಕ ಮಾಡಿಕೊಳ್ಳುತ್ತಿದ್ದು, ನಾಲ್ಕು ವರ್ಷಗಳ ಸೇವಾವಧಿ ಇರುತ್ತದೆ. ಆರು ತಿಂಗಳ ಕಾಲ ಅಗ್ನಿವೀರರಿಗೆ ತರಬೇತಿ ನೀಡಲಾಗುತ್ತದೆ. ನಾಲ್ಕು ವರ್ಷಗಳ ಸೇವಾವಧಿ ನಂತರ ಶೇಕಡ 25 ರಷ್ಟು ಅಗ್ನಿವೀರರನ್ನು ಸೇನೆಯಲ್ಲಿ ಮುಂದುವರೆಸುವ ಅವಕಾಶ ಇದೆ.

 ಅಗ್ನಿವೀರರ ಅರ್ಹತಾ ಮಾನದಂಡಗಳು

ಅಗ್ನಿವೀರರ ಅರ್ಹತಾ ಮಾನದಂಡಗಳು

ಅರ್ಹ ಅಭ್ಯರ್ಥಿಗಳು 17.5 ರಿಂದ 23 ವರ್ಷ ವಯಸ್ಸಿನವರಾಗಿರಬೇಕು, ಅಭ್ಯರ್ಥಿಗಳು 162 ಸೆಂಟಿಮೀಟರ್ ಎತ್ತರ ಇರಬೇಕು. ಅಭ್ಯರ್ಥಿಗಳು 10ನೇ ತರಗತಿ/ಮೆಟ್ರಿಕ್‌ನಲ್ಲಿ ಒಟ್ಟು ಶೇಕಡ 45 ಅಂಕಗಳೊಂದಿಗೆ ಮತ್ತು ಪ್ರತಿ ವಿಷಯದಲ್ಲಿ ಶೇಕಡ 33 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ಮಾನ್ಯಗೊಂಡ ಲೈಟ್ ಮೋಟಾರ್ ವೆಹಿಕಲ್ (ಎಲ್‌ಎಂವಿ) ಚಾಲನಾ ಪರವಾನಗಿ ಹೊಂದಿರುವ ಅಭ್ಯರ್ಥಿಗಳಿಗೆ ಚಾಲಕ ಅವಶ್ಯಕತೆಗಳಿಗೆ ಆದ್ಯತೆ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಅಗ್ನಿಪಥ್ ಯೋಜನೆ: ಜಮ್ಮುವಿನಲ್ಲಿ ಸೇನಾ ನೇಮಕಾತಿಅಗ್ನಿಪಥ್ ಯೋಜನೆ: ಜಮ್ಮುವಿನಲ್ಲಿ ಸೇನಾ ನೇಮಕಾತಿ

 ಅಗ್ನಿವೀರ ರ್‍ಯಾಲಿಗೆ ನೋಂದಣಿ ಹೇಗೆ?

ಅಗ್ನಿವೀರ ರ್‍ಯಾಲಿಗೆ ನೋಂದಣಿ ಹೇಗೆ?

ಅಗ್ನಿವೀರ ನೇಮಕಾತಿಗೆ ಅಭ್ಯರ್ಥಿಗಳ ಅರ್ಹತೆಯ ಸ್ಥಿತಿಯನ್ನು ಪರಿಶೀಲಿಸಲು ಮತ್ತು ಪ್ರೊಫೈಲ್ ರಚಿಸಲು www.joinindianarmy.nic.in ಗೆ ಲಾಗ್ ಇನ್ ಮಾಡಬೇಕಾಗುತ್ತದೆ. ನೀವು ರಾಜ್ಯ, ಜಿಲ್ಲೆ, ಹುಟ್ಟಿದ ದಿನಾಂಕ, ವೈವಾಹಿಕ ಸ್ಥಿತಿ, ಲಿಂಗ, ವಿದ್ಯಾರ್ಹತೆ ಮುಂತಾದ ವಿವರಗಳನ್ನು ಒದಗಿಸಬೇಕಾಗುತ್ತದೆ.

ನೀವು ಅರ್ಹರಾಗಿದ್ದರೆ, ಪ್ರೊಫೈಲ್ ಅನ್ನು ಯಶಸ್ವಿಯಾಗಿ ರಚಿಸಲಾಗುತ್ತದೆ. ಅಭ್ಯರ್ಥಿಗಳು ರ್‍ಯಾಲಿ ನಡೆಯುವ ಸ್ಥಳಕ್ಕೆ ಕೊಂಡೊಯ್ಯಬೇಕಾದ ಪ್ರವೇಶ ಪತ್ರವನ್ನು ಪಡೆಯಲು ಅಕ್ಟೋಬರ್ 12 ರಿಂದ 31 ರ ನಡುವೆ ಲಾಗಿನ್ ಮಾಡಬೇಕಾಗುತ್ತದೆ.

 ಅಭ್ಯರ್ಥಿಗಳ ದೈಹಿಕ ಸಾಮರ್ಥ್ಯ

ಅಭ್ಯರ್ಥಿಗಳ ದೈಹಿಕ ಸಾಮರ್ಥ್ಯ

ಅಭ್ಯರ್ಥಿಗಳು 1.6 ಕಿಲೋಮೀಟರ್ ಓಟ, 10 ಅಡಿ ಲಾಂಗ್ ಜಂಪ್ ಮತ್ತು 3 ಅಡಿ ಎತ್ತರ ಜಿಗಿತದದೊಂದಿಗೆ ದೈಹಿಕ ಸಾಮರ್ಥ್ಯಕ್ಕಾಗಿ ಪರೀಕ್ಷೆ ನಡೆಸಲಾಗುತ್ತದೆ. ಅಂಗವೈಕಲ್ಯ ಮತ್ತು ಗರ್ಭಾವಸ್ಥೆಯನ್ನು ದೃಢಪಡಿಸಲು ಅಭ್ಯರ್ಥಿಗಳು ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಬೇಕಾಗುತ್ತದೆ.

ಯಾವುದೇ ರೀತಿಯ ಅಂಗವೈಕಲ್ಯ ಅಥವಾ ಗರ್ಭವಾಸ್ಥೆ ಕಂಡುಬಂದರೆ ಅಂತಹ ಅಭ್ಯರ್ಥಿಗಳನ್ನು ಅನರ್ಹಗೊಳಿಸಲಾಗುತ್ತದೆ. ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾದ ಯಾವುದೇ ಅಭ್ಯರ್ಥಿಯನ್ನು 'ಅನರ್ಹ' ಎಂದು ಘೋಷಿಸಲಾಗುತ್ತದೆ ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ. ದೇಹದ ಮೇಲೆ ಹಚ್ಚೆಗಳನ್ನು ಹೊಂದಿರುವ ಆಕಾಂಕ್ಷಿಗಳನ್ನು ಮುಂದಿನ ಆಯ್ಕೆಯಿಂದ ನಿರ್ಬಂಧಿಸಬಹುದು.

 ಅಗ್ನಿವೀರರ ನೇಮಕಾತಿಗೆ ಬೇಕಾದ ದಾಖಲೆಗಳು

ಅಗ್ನಿವೀರರ ನೇಮಕಾತಿಗೆ ಬೇಕಾದ ದಾಖಲೆಗಳು

ಸಾಮಾನ್ಯ ಪ್ರವೇಶ ಪರೀಕ್ಷೆ (CEE) ಎಂಬ ಲಿಖಿತ ಪರೀಕ್ಷೆಯನ್ನು ಸೈಟ್‌ನಲ್ಲಿ ನಡೆಸಲಾಗುತ್ತದೆ. ರ್‍ಯಾಲಿಯಲ್ಲಿ ಪಾಲ್ಗೊಳ್ಳಲು ಅಗ್ನಿವೀರ ಆಕಾಂಕ್ಷಿಗಳು ಈ ದಾಖಲೆಗಳನ್ನು ಸ್ಥಳಕ್ಕೆ ಕೊಂಡೊಯ್ಯಬೇಕಾಗುತ್ತದೆ: ವ್ಯಾಕ್ಸಿನೇಷನ್ ಪ್ರಮಾಣಪತ್ರ, ಪ್ರವೇಶ ಕಾರ್ಡ್, ಭಾವಚಿತ್ರ (ಪಾಸ್‌ಪೋರ್ಟ್ ಗಾತ್ರ), ಶಿಕ್ಷಣ ಮತ್ತು ವಾಸಸ್ಥಳ ಪ್ರಮಾಣಪತ್ರಗಳು, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಧರ್ಮ/ಜಾತಿ/ವರ್ಗ ಪ್ರಮಾಣಪತ್ರಗಳು, ಪಾತ್ರ ಪ್ರಮಾಣಪತ್ರಗಳು, ಇತರವುಗಳು.

ಕರ್ನಾಟಕದ 14 ಜಿಲ್ಲೆಗಳ ಪುರುಷರಿಗಾಗಿ ಅಗ್ನಿವೀರ್ ನೇಮಕಾತಿ ರ್‍ಯಾಲಿಯು ಹಾಸನದಲ್ಲಿ ಬುಧವಾರ ಪ್ರಾರಂಭವಾಗಿದೆ. ರ್‍ಯಾಲಿಯನ್ನು ಆಗಸ್ಟ್ 27 ರವರೆಗೆ ಮುಂದುವರೆಯಲು ನಿರ್ಧರಿಸಲಾಗಿದೆ.

Recommended Video

ICC T20 Ranking ನಂ 2 ಕೆ.ಎಲ್ ರಾಹುಲ್ ಫಿಟ್ನೆಸ್ ಕಥೆಯೇನು..? | Oneindia Kannada

English summary
The army recruitment rally for women under the Agnipath scheme for general duty in corps of military police will be held from November 1 to 3 at Manekshaw Parade Ground in Bengaluru, Here's how to apply.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X